ನವದೆಹಲಿ(ನ.24): 2019ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದ ಬಿಎಸ್‌ಎಫ್‌ ಮಾಜಿ ಯೋಧ ತೇಜ್‌ ಬಹದ್ದೂರ್‌ ಅವರ ನಾಮಪತ್ರವನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

'3 ತಿಂಗಳಲ್ಲಿ ಮಹಾರಾಷ್ಟ್ರ ಆಡಳಿತ ಚುಕ್ಕಾಣಿ ಬಿಜೆಪಿಗೆ'

ತೇಜ್‌ ಬಹದ್ದೂರ್‌ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ತೇಜ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಸೈನಿಕರಿಗೆ ನೀಡಲಾಗುತ್ತಿರುವ ಆಹಾರವು ಕಳಪೆಯಾಗಿದೆ ಆರೋಪಿಸಿ 2017ರಲ್ಲಿ ವಿಡಿಯೋ ಹರಿಬಿಟ್ಟಹಿನ್ನೆಲೆಯಲ್ಲಿ ಜವಾನ ತೇಜ್‌ ಬಹದ್ದೂರ್‌ ಅವರನ್ನು ಸೇನೆಯಿಂದ ವಜಾ ಮಾಡಲಾಗಿತ್ತು. 

 ಅನಂತರ 2019ರಲ್ಲಿ ಸಮಾಜವಾದಿ ಪಕ್ಷದಿಂದ ಮೋದಿ ವಿರುದ್ಧ ವಾರಣಸಿಯಲ್ಲಿ ಸ್ಪರ್ಧಿಸಿದ್ದ ಬಹದ್ದೂರ್‌ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಸ್ಪರ್ಧೆಗೂ ಮುನ್ನ ಸೇನೆಯಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸಿರಲಿಲ್ಲ ಎಂಬ ಕಾರಣವನ್ನು ಆಯೋಗ ನೀಡಿತ್ತು. ಈ ಸಂಬಂಧ ತೇಜ್‌ ಪ್ರತಾಪ್‌ ಕೋರ್ಟ್‌ ಮೆಟ್ಟಿಲೇರಿದ್ದರು.

ಕೊರೋನಾದಿಂದ ಗುಣಮುಖರಾಗಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ!

ಆದರೀಗ ಈ ಕಾನೂನಾತ್ಮಕ ಹೋರಾಟದಲ್ಲಿ ತೇಜ್ ಬಹದ್ದೂರ್ ಸೋಲನುಭವಿಸಿದ್ದಾರೆ.