ನವದೆಹಲಿ(ನ.23): ಕೊರೋನಾ ಬಳಿಕ ಉಲ್ಬಣಿಸಿ ಹಲವು ಆರೋಗ್ಯ ಸಮಸ್ಯೆ ಚಿಕಿತ್ಸೆ ಪಡೆಯುಲು ಕಳೆದ ವಾರ ಆಸ್ಪತ್ರೆ ದಾಖಲಾಗಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂ ತರುಣ್ ಗೊಗೊಯ್ ನಿಧನರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಹಿರಿಯ ನಟ ಸೌಮಿತ್ರ ಚಟರ್ಜಿ ನಿಧನಕ್ಕೆ ಮೋದಿ ಸಂತಾಪ!

86 ವರ್ಷದ ತರುಣ್ ಗೊಗೊಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.  ತರುಣ್ ಗೊಗೊಯ್  ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರಾಗಿದ್ದರು. ಗೊಗೊಯ್ ಅಸ್ಸಾಂ ಮತ್ತು ಕೇಂದ್ರದಲ್ಲಿ ಅಪಾರ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ದುಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಬೆಂಬಲಿಗೆ ಭಗವಂತ ನೀಡಲಿ. ನನ್ನ ಪ್ರಾರ್ಥನೆ ಇರಲಿದೆ.  ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಆಗಸ್ಟ್ 25 ರಂದು ತರುಣ್ ಗೊಗೋಯ್ ‌ ಅವರ ಕೊರೋನಾ  ವರದಿ ಪಾಸಿಟೀವ್ ಆಗಿತ್ತು. ಮರುದಿನವೇ ಗೌವ್ಹಾಟಿ ಮೆಡಿಕಲ್ ಆಸ್ಪತ್ರೆ ದಾಖಲಾದ ಗೊಗೊಯ್ ಚಿಕಿಕ್ಸೆ ಪಡೆದಿದ್ದರು. ಸತತ 2 ತಿಂಗಳ ಚಿಕಿತ್ಸೆ ಬಳಿಕ ಕೊರೋನಾದಿಂದ ಗುಣಮುಖರಾದ ತರುಣ್ ಗೊಗೊಯ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಕಳೆದ ವಾರ ಇತರ ಆರೋಗ್ಯ ಸಮಸ್ಯೆ ಉಲ್ಬಣಿಸಿದ ಕಾರಣ ಮತ್ತೆ ಆಸ್ಪತ್ರೆ ದಾಖಲಾಗಿದ್ದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ತರುಣ್ ಗೊಗೊಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನದ ವಾರ್ತೆ ತಿಳಿದಾಗ ಅತೀವ ದುಃಖವಾಗಿದೆ.  ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅನುಭವಿ ನಾಯಕನನ್ನು ದೇಶ ಕಳೆದುಕೊಂಡಿದೆ. ಅವರ ದೀರ್ಘಾವಧಿಯ ಅಧಿಕಾರಾವಧಿಯಲ್ಲಿ ಅಸ್ಸಾಂ ಅಮೂಲಾಗ್ರ ಅಭಿವೃದ್ದಿಯಾಗಿದೆ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.