ಖಲಿಸ್ತಾನ ವಿರೋಧಿ ಮೆರವಣಿಗೆ ಸಂಬಂಧಿಸಿದಂತೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿರುವ ಪಂಜಾಬ್‌ನ ಪಟಿಯಾಲದಿಂದ ಮೂವರು ಪೊಲೀಸ್‌ ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ.

ಚಂಡೀಗಢ (ಮೇ.01): ಖಲಿಸ್ತಾನ (Khalistan) ವಿರೋಧಿ ಮೆರವಣಿಗೆ ಸಂಬಂಧಿಸಿದಂತೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿರುವ ಪಂಜಾಬ್‌ನ (Punjab) ಪಟಿಯಾಲದಿಂದ (Patiala) ಮೂವರು ಪೊಲೀಸ್‌ (Police) ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ (Transfer) ಮಾಡಲಾಗಿದೆ. ಜೊತೆಗೆ ಮೊಬೈಲ್‌ ಇಂಟರ್ನೆಟ್‌ ಹಾಗೂ ಎಸ್ಸೆಮ್ಮೆಸ್‌ ಸೇವೆಯನ್ನು ರದ್ದು ಮಾಡಲಾಗಿದೆ. ಪಟಿಯಾಲ ವಲಯದ ಐಜಿಪಿ, ಹಿರಿಯ ಪೊಲೀಸ್‌ ಅಧೀಕ್ಷಕ ಮತ್ತು ಜಿಲ್ಲಾ ಪೊಲೀಸ್‌ ಅಧೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಮುಖ್ವಿಂದರ್‌ ಸಿಂಗ್‌ ಚಿನ್ನಾ ಅವರನ್ನು ಹೊಸ ಐಜಿಪಿಯಾಗಿ, ದೀಪಕ್‌ ಪಾರಿಕ್‌ ಅವರನ್ನು ಎಸ್‌ಎಸ್‌ಪಿಯಾಗಿ ಮತ್ತು ವಜೀರ್‌ ಸಿಂಗ್‌ ಅವರನ್ನು ಎಸ್‌ಪಿಯಾಗಿ ಆಪ್‌ ಸರ್ಕಾರ ನೇಮಕ ಮಾಡಿದೆ.

ಖಲಿಸ್ತಾನ ವಿರೊಧಿ ಮೆರವಣಿಗೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದವು. ಈ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗೃಹ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಕ ಮಾಡಿದ್ದು, ಭಾರಿ ಬಿಗಿ ಭದ್ರತೆ ಒದಗಿಸಿದೆ. ಇನ್ನು ಶನಿವಾರ ಮುಂಜಾನೆ 9.30ರಿಂದ ಸಾಯಂಕಾಲ 6 ಗಂಟೆಯವರೆಗೆ ಮೊಬೈಲ್‌ ಇಂಟರ್‌ನೆಟ್‌ ಬಂದ್‌ ಮಾಡಲಾಗಿದೆ.

Covid cases ದೆಹಲಿ, ಪಂಜಾಬ್ ಬಳಿಕ ಮತ್ತೊಂದು ರಾಜ್ಯದಲ್ಲಿ ಕೊರೋನಾ ನಿರ್ಬಂಧ ಜಾರಿ!

73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಜನರ ಪ್ರಯಾಣ: ಭಾರತೀಯ ರೈಲ್ವೇಯು (Indian Railways) ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲ ಮತ್ತು ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲ್ವೇ ವ್ಯವಸ್ಥೆ ಎನಿಸಿದೆ. ಇಲ್ಲಿನ ಎಲ್ಲಾ ರೈಲಿನಲ್ಲಿ ಪ್ರಯಾಣಿಸಲು ನೀವು ಶುಲ್ಕವನ್ನು ಪಾವತಿಸಬೇಕು. ಆದರೆ, ಭಾರತೀಯ ರೈಲ್ವೇಯಲ್ಲಿ ಶುಲ್ಕವನ್ನು ಪಾವತಿಸದೆ ಪ್ರಯಾಣಿಸುವ ರೈಲು ಕೂಡ ಇದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಒಂದೆಡೆ ಪ್ರಯಾಣ ದರಗಳು ಹೆಚ್ಚಳವಾಗುತ್ತಿರುವ ನಡುವೆ, ರೈಲಿನಲ್ಲಿ ಉಚಿತ ಪ್ರಯಾಣ ಹೇಗೆ ಸಾಧ್ಯ, ಇದನ್ನು ನಂಬಬಹುದೇ ಎನ್ನುವ ಪ್ರಶ್ನೆ ಸಹಜ. ಆದರೆ, ಇಂಥದ್ದೊಂದು ರೈಲು ಭಾರತದಲ್ಲಿ ಇರುವುದು ನಿಜ. ಈ ರೈಲು ಭಾಕ್ರಾ ನಂಗಲ್ ಅಣೆಕಟ್ಟಿನ (Bhakra Nangal Dam) ಪ್ರವಾಸಿಗರಿಗಾಗಿ ಚಲಿಸುತ್ತದೆ. 

ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಗಡಿಯಲ್ಲಿರುವ ಭಕ್ರಾ ಹಾಗೂ ನಂಗಲ್ ನಡುವೆ ಈ ರೈಲು ಚಲಿಸುತ್ತದೆ. ಭಕ್ರಾ ನಂಗಲ್ ಅಣೆಕಟ್ಟನ್ನು ವೀಕ್ಷಣೆ ಮಾಡಲು ಬಯಸುವವರು ಈ ರೈಲಿನಲ್ಲಿನ ಉಚಿತ ಪ್ರಯಾಣದ (Free Ticket) ಅನುಭವವನ್ನು ಅನಂದಿಸಬಹುದು. ಈ ರೈಲಿನ ವಿಶೇಷವೇನೆಂದರೆ, ಇಡೀ ರೈಲಿನ ಕೋಚ್ ಗಳನ್ನು ನಿರ್ಮಾಣ ಮಾಡಿದ್ದು ಹೆಣ್ಣು ಮಕ್ಕಳು ಅದಲ್ಲದೆ, ಈ ರೈಲಿಯಲ್ಲಿ ಯಾವುದೇ ಟಿಕೆಟ್ ಕಲೆಕ್ಟರ್ ಕೂಡ ಇಲ್ಲ. ಡೀಸೆಲ್ ಇಂಜಿನ್ ನಲ್ಲಿ ರೈಲು ಚಲಿಸುತ್ತಿದ್ದು, ಪ್ರತಿ ದಿನ 50 ಲೀಟರ್ ಡೀಸೆಲ್ ಪ್ರಯಾಣಕ್ಕಾಗಿ ವೆಚ್ಚವಾಗಲಿದೆ. ಮೊದಲು ಈ ರೈಲಿನಲ್ಲಿ 10 ಕೋಚ್ ಗಳಿದ್ದವು. ಆದರೆ, ಈಗ ಕೇವಲ 3 ಕೋಚ್ ಗಳಿವೆ. ಇದರಲ್ಲಿ ಒಂದು ಬೋಗಿ ಪ್ರವಾಸಿಗರಿಗೆ ಮೀಸಲಾಗಿದಲಾಗಿದ್ದರೆ, ಇನ್ನೊಂದು ಬೋಗಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಾಗಿದೆ.

ಕಪ್ಪು ಕುದುರೆ ಎಂದು 23 ಲಕ್ಷ ಕೊಟ್ಟು ತಂದ : ಸ್ನಾನ ಮಾಡಿಸಿದಾಗ ಬಯಲಾಯ್ತು ಬಣ್ಣ

1949ರಲ್ಲಿ ಈ ರೈಲನ್ನು ಮೊದಲ ಬಾರಿಗೆ ಆರಂಭಿಸಲಾಗಿತ್ತು. ಕಳೆದ 73 ವರ್ಷಗಳಿಂದ ಭಕ್ರಾ ನಂಗಲ್ ಅಣೆಕಟ್ಟಿನ ಸಮೀಪದಲ್ಲಿರುವ 25 ಗ್ರಾಮಗಳ 300ಕ್ಕೂ ಅಧಿಕ ಜನ ಉಚಿತವಾಗಿ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಶಾಲೆ ಕಾಲೇಜಿಗಳಿಗೆ ಹೋಗುವ ಮಕ್ಕಳು ಈ ರೈಲಿನಿಂದ ದೊಡ್ಡ ಮಟ್ಟದ ಲಾಭ ಪಡೆದುಕೊಂಡಿದ್ದಾರೆ. ಇದರ ಮೂಲಕ ಬರ್ಮಾಳ, ಒಲಿಂದಾ, ನೆಹಲಾ ಭಾಕ್ರಾ, ಹಂಡೋಲಾ, ಸ್ವಾಮಿಪುರ, ಖೇರಾ ಬಾಗ್, ಕಲಕುಂದ, ನಂಗಲ್, ಸಾಲಂಗ್ರಿ ಗ್ರಾಮಗಳು ಸೇರಿದಂತೆ ಎಲ್ಲಾ ಸ್ಥಳಗಳ ಜನರು ಭಾಕ್ರಾ ನಂಗಲ್ ಅಣೆಕಟ್ಟಿನ ಸಮೀಪದ ಪ್ರದೇಶವನ್ನು ಸುತ್ತುತ್ತಾರೆ.