Asianet Suvarna News Asianet Suvarna News

TMC ಅಭ್ಯರ್ಥಿಗೆ ಮುನ್ನಡೆ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸೋಲು

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುನ್ನಡೆ | ಟಾಲಿಗುಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವಗೆ ಸೋಲು

Tollygunge Assembly Election Results 2021 Aroop Biswas leading against Babul Supriyo dpl
Author
Bangalore, First Published May 2, 2021, 12:48 PM IST

ಕೊಲ್ಕತ್ತಾ(ಮೇ.02): ಪಶ್ಚಿಮ ಬಂಗಾಳದ ಟಾಲಿಗುಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹಿನ್ನಡೆ ಅನುಭವಿಸಿದ್ದಾರೆ. ಟಿಎಂಸಿ ಅಭ್ಯರ್ಥಿ, ಪಿಡಬ್ಲ್ಯೂ ಸಚಿವ ಅರೂಪ್ ಬಿಸ್ವಾಸ್ ಅವರು ಬಿಜೆಪಿ ಅಭ್ಯರ್ಥಿ ಬಾಬುಲ್ ವಿರುದ್ಧ ಲೀಡ್‌ನಲ್ಲಿದ್ದಾರೆ. ಅರೂಪ್ 14,222 ಮತಗಳ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಬಾಬುಲ್‌ಗೆ ಸೋಲು ಖಚಿತವಾಗಿದೆ.

ಟಾಲಿಗುಂಜ್ ವಿಧಾನಸಭಾ ಕ್ಷೇತ್ರವನ್ನು ಬೆಂಗಾಲಿ ಫಿಲ್ಮ್ ಇಂಡಸ್ಟ್ರಿಯ ಹಬ್ ಎಂದೇ ಕರೆಯಲಾಗುತ್ತದೆ. 2016 ರ ಪೋಲ್ ರನ್ನರ್ ಅಪ್ ಸಿಪಿಐ (ಎಂ) ಹೊಸ ಮುಖವನ್ನು ಕಣಕ್ಕಿಳಿಸಿದೆ.

ಪ.ಬಂಗಾಳದಲ್ಲಿ BJP-TMC ಜಿದ್ದಾಜಿದ್ದಿನ ಫೈಟ್..! ಕಡಿಮೆ ಅಂತದಲ್ಲಿ ದೀದಿ ಪಕ್ಷ ಮುನ್ನಡೆ

ಟಿಎಂಸಿ ಮತ್ತು ಬಿಜೆಪಿ ಈ ಬಾರಿ ಹಲವಾರು ಚಲನಚಿತ್ರೋದ್ಯಮ ಸೆಲೆಬ್ರಿಟಿಗಳನ್ನು ಕಣಕ್ಕಿಳಿಸಿದ್ದರಿಂದ, ಚಲನಚಿತ್ರೋದ್ಯಮವನ್ನು ರಾಜಕೀಯ ಮಟ್ಟದಲ್ಲಿ ಧ್ರುವೀಕರಿಸಲಾಗಿದೆ.

ಅರೂಪ್ ಬಿಸ್ವಾಸ್ ಅವರು ಮೂರು ಬಾರಿ ಟಿಎಂಸಿ ಶಾಸಕರಾಗಿದ್ದರೆ. ಈ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಸೀಟ್ ಕಸಿದುಕೊಳ್ಳಲು ಬಿಜೆಪಿ ಖ್ಯಾತ ಗಾಯಕ, ಎರಡು ಬಾರಿ ಸಂಸದ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕಣಕ್ಕಿಳಿಸಿತ್ತು.

ಪಂಚರಾಜ್ಯ ಚುನಾವಣಾ ಫಲಿತಾಂಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಂಗಾಳ ಚಲನಚಿತ್ರೋದ್ಯಮದೊಂದಿಗಿನ ಮಮತಾ ಬ್ಯಾನರ್ಜಿ ಅವರ ಒಡನಾಟವು ಬಹಳ ಹಿಂದಿನಿಂದಲೂ ಪ್ರಸಿದ್ಧ. ಅವರು ಟಿಎಂಸಿ ಟಿಕೆಟ್‌ಗಳಲ್ಲಿ ಉದ್ಯಮದ ಸೆಲೆಬ್ರಟಿಗಳನ್ನು ಕಣಕ್ಕಿಳಿಸುತ್ತಾರೆ. ಆದರೂ ಹಲವಾರು ನಟ / ನಟಿಯರಿಗೆ ಟಿಕೆಟ್ ನೀಡಿದ ನಂತರ ಈ ಕಾಂಪಿಟೇಷನ್ ಹೆಚ್ಚು ತೀವ್ರವಾಗಿ ಸುದ್ದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ 294 ಸೀಟುಗಳಿದ್ದು, 148 ಮ್ಯಾಜಿಕ್ ಬಂಬರ್. ಟಿಎಂಸಿ ಈಗಾಗಲೇ 200ರ ಗಡಿಯನ್ನು ದಾಟಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ.

"

Follow Us:
Download App:
  • android
  • ios