ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ಸಲ್ಲಿಸಲು ಸಾರ್ವಜನಿಕರಿಗೆ ನೀಡಲಾಗಿದ್ದ ಜು.14ರ ಕೊನೆ ದಿನಾಂಕವನ್ನು ಕಾನೂನು ಆಯೋಗವು ಜು.28ರವರೆಗೆ ವಿಸ್ತರಿಸಿದೆ.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ಸಲ್ಲಿಸಲು ಸಾರ್ವಜನಿಕರಿಗೆ ನೀಡಲಾಗಿದ್ದ ಜು.14ರ ಕೊನೆ ದಿನಾಂಕವನ್ನು ಕಾನೂನು ಆಯೋಗವು ಜು.28ರವರೆಗೆ ವಿಸ್ತರಿಸಿದೆ. ಧರ್ಮಾತೀತವಾಗಿ ದೇಶದ ಎಲ್ಲ ಜನರಿಗೂ ವಿವಾಹ, ವಿಚ್ಛೇಧನ, ಆಸ್ತಿ ಹಂಚಿಕೆ, ಮೊದಲಾದ ವಿಚಾರದಲ್ಲಿ ಒಂದೇ ರೀತಿ ಕಾನೂನು ಜಾರಿ ತರುವ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾವಕ್ಕೆ ಈವರೆಗೂ 50 ಲಕ್ಷ ಪ್ರತಿಕ್ರಿಯೆಗಳು ಕೇಂದ್ರ ಕಾನೂನು ಆಯೋಗಕ್ಕೆ ಸಲ್ಲಿಕೆಯಾಗಿವೆ. ಕರಡು ವರದಿ ಬಿಡುಗಡೆಗೂ ಮುನ್ನ ಮೊದಲು ಕಾನೂನು ಆಯೋಗ ಜನರಿಂದ ಅಭಿಪ್ರಾಯ ಆಹ್ವಾನಿಸಿತ್ತು. ಇದರ 1 ತಿಂಗಳ ಕಾಲಾವಕಾಶಕ್ಕೆ ಕೊನೆ ದಿನಾಂಕ ಜು.14ರ ಶುಕ್ರವಾರ ಆಗಿತ್ತಾದರೂ ಜು.28ರ ವರೆಗೆ ಮತ್ತೆ ಮುಂದೂಡಿಕೆ ಮಾಡಲಾಗಿದೆ.
ಏಕರೂಪ ನಾಗರಿಕ ಸಂಹಿತೆಗೆ 50 ಲಕ್ಷ ಅಭಿಪ್ರಾಯ ಸಂಗ್ರಹ
ಧರ್ಮಾತೀತವಾಗಿ ದೇಶದ ಎಲ್ಲ ಜನರಿಗೂ ವಿವಾಹ, ವಿಚ್ಛೇಧನ, ಆಸ್ತಿ ಹಂಚಿಕೆ, ಮೊದಲಾದ ವಿಚಾರದಲ್ಲಿ ಒಂದೇ ರೀತಿ ಕಾನೂನು ಜಾರಿ ತರುವ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾವಕ್ಕೆ ಈವರೆಗೂ 50 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆಗಳು ಕೇಂದ್ರ ಕಾನೂನು ಆಯೋಗಕ್ಕೆ ಸಲ್ಲಿಕೆಯಾಗಿದೆ. ಕರಡು ವರದಿ ಬಿಡುಗಡೆಗೂ ಮುನ್ನ ಕಾನೂನು ಆಯೋಗ ಜನರಿಂದ ಅಭಿಪ್ರಾಯ ಆಹ್ವಾನಿಸಿತ್ತು.
One Life One wife: ಅಸ್ಸಾಂನಲ್ಲಿ ಶೀಘ್ರದಲ್ಲೇ ಬಹುಪತ್ನಿತ್ವ ನಿಷೇಧ ಮಸೂದೆ
ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ
ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಇದೀಗ ಬಿಜೆಪಿಯ ಮಿತ್ರ ಪಕ್ಷವೇ ವಿರೋಧಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷ ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಅಧ್ಯಕ್ಷ ಕೆ. ಪಳನಿಸ್ವಾಮಿ, ‘ನಾವು 2019ರ ನಮ್ಮ ಚುನಾವಣೆ ಪ್ರಣಾಳಿಕೆಯ ಬಿಡುಗಡೆ ಮಾಡುವ ಸಮಯದಲ್ಲೇ ಹೇಳಿದ್ದೇವೆ. ನಾವು ಜಾತ್ಯಾತೀತವಾಗಿದ್ದು, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಿದ್ದೇವೆ. ಒಂದು ವೇಳೆ ಅದನ್ನು ಜಾರಿ ಮಾಡಿದರೆ ಅದು ಧರ್ಮವಾರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿಗೆ ಪರೋಕ್ಷವಾಗಿ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.
ಏಕರೂಪ ಸಂಹಿತೆಯಿಂದ ಅಲ್ಪಸಂಖ್ಯಾತರ ಹೊರಗಿಡಿ: ಮುಸ್ಲಿಂ ಬೋರ್ಡ್
ಏಕರೂಪ ಸಂಹಿತೆ ಕುರಿತ ತನ್ನ ನಿಲುವಿಗೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೇ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ವಕ್ತಾರ ಕಾಸಿಮ್ ರಸೂಲ್ ಇಲ್ಯಾಸ್ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಗೆ ಶೇ.67ರಷ್ಟು ಮುಸ್ಲಿಂ ಮಹಿಳೆಯರ ಬೆಂಬಲ, ಸರ್ವೇಯಲ್ಲಿ ಬಹಿರಂಗ
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮೊದಲಿನಿಂದಲೂ ಏಕರೂಪ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಭಾರತ ಹಲವು ಧರ್ಮ ಹಾಗೂ ಸಂಸ್ಕೃತಿಗಳನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ರಸೂಲ್ ಹೇಳಿದ್ದಾರೆ. ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ಸಲ್ಲಿಸಲು ಕಾನೂನು ಆಯೋಗ ಜುಲೈ 14 ರವರೆಗೆ ಅವಕಾಶ ನೀಡಿದೆ. ಇದನ್ನು 6 ತಿಂಗಳಿಗೆ ವಿಸ್ತರಿಸುವಂತೆ ಈ ಮೊದಲು ಮುಸ್ಲಿಂ ಮಂಡಳಿ ಮನವಿ ಮಾಡಿತ್ತು.
