ಚೆನ್ನೈ (ಫೆ.06) : ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಈ ನಡುವೆ ಎಐಎಡಿಎಂಕೆ ನೇತೃತ್ವದ ಸರ್ಕಾರ ಶುಕ್ರವಾರ ಸಹಕಾರಿ ಬ್ಯಾಂಕುಗಳ 12,110 ಕೋಟಿ ರು. ಕೃಷಿ ಸಾಲವನ್ನು ಮನ್ನಾ ಮಾಡಿದೆ. ಇದರಿಂದ 16.43 ಲಕ್ಷ ರೈತರು ನೆರವು ಪಡೆಯಲಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯ ಘೋಷಿಸಿದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ‘ಯೋಜನೆಯು ತತ್‌ಕ್ಷಣದಿಂದಲೇ ಜಾರಿಗೆ ಬರಲಿದೆ. ಯೋಜನೆಗೆ ಅಗತ್ಯವಿರುವ ಅರ್ಥಿಕ ಅನುದಾನವನ್ನು ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಮೂಲಕ ರೈತರಿಗೆ ನೀಡಿದ್ದ ವಾಗ್ದಾನವನ್ನು ಪೂರ್ಣಗೊಳಿಸಿದ ಏಕೈಕ ಪಕ್ಷ ಎಐಎಡಿಎಂಕೆ’ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ 57 ಸಾವಿರ ರೈತರ ಕೃಷಿ ಸಾಲ ಮನ್ನಾ ...

2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಅಮ್ಮ ಖ್ಯಾತಿಯ ಜೆ.ಜಯಲಲಿತಾ ಅವರೂ 5,318.73 ಕೋಟಿ ರು. ಕೃಷಿ ಸಾಲವನ್ನು ಮನ್ನಾ ಮಾಡಿದ್ದರು. ಇದರಿಂದ 12.03 ಲಕ್ಷ ರೈತರಿಗೆ ಅನುಕೂಲವಾಗಿತ್ತು.