Asianet Suvarna News Asianet Suvarna News

TMC Vs BSF: ಬಾಂಗ್ಲಾ ಗಡಿಯಲ್ಲಿ ಗ್ರಾಮಸ್ಥರು ತೋಡಿದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು

ಕಂದಕಕ್ಕೆ ಬಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಭಾರತ ಬಾಂಗ್ಲಾ ಗಡಿಯಲ್ಲಿ ಈ ಘಟನೆ ನಡೆದಿದ್ದು,  ನಾಲ್ವರು ಮಕ್ಕಳ ಸಾವಿಗೆ ಗಡಿ ಭದ್ರತಾ ಪಡೆ (BSF)ನಿರ್ಲಕ್ಷ್ಯವೇ ಕಾರಣ ಎಂದು ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (TMC) ಆರೋಪಿಸಿದೆ.

TMC Vs BSF Four children die after falling into pit dug by villagers on Bangla border akb
Author
First Published Feb 15, 2024, 9:49 AM IST


ಕೋಲ್ಕತ್ತಾ: ಭಾರತ ಬಾಂಗ್ಲಾದೇಶ ಗಡಿಯಲ್ಲಿ ಗ್ರಾಮಸ್ಥರು ತೋಡಿದ ಕಂದಕಕ್ಕೆ ಬಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಬಾಂಗ್ಲಾದೇಶದ ಗಡಿಯಲ್ಲಿ ಈ ಘಟನೆ ನಡೆದಿದ್ದು,  ನಾಲ್ವರು ಮಕ್ಕಳ ಸಾವಿಗೆ ಗಡಿ ಭದ್ರತಾ ಪಡೆ (BSF)ನಿರ್ಲಕ್ಷ್ಯವೇ ಕಾರಣ ಎಂದು ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (TMC) ಆರೋಪಿಸಿದೆ. ಪಶ್ಚಿಮ ಬಂಗಾಳ ಸರ್ಕಾರದ ಈ ಆರೋಪವನ್ನು ಗಡಿ ಭದ್ರತಾ ಪಡ ನಿರಾಕರಿಸಿದ್ದು, ಮಕ್ಕಳ ಜೀವ ಉಳಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನ ಮಾಡಿದ್ದಾಗಿ ಹೇಳಿದೆ. ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿರು ಇಂಡೋ ಬಾಂಗ್ಲಾ ಗಡಿಯಲ್ಲಿ ಅಗೆಯುತ್ತಿದ್ದ ಕಂದಕದಲ್ಲಿ ಬಿದ್ದು 5 ಹಾಗೂ 12 ವರ್ಷದ ಒಟ್ಟು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‌ಎಫ್, ಫೆಬ್ರವರಿ 11 ರಂದು, ಚೇತಂಗಾಚ್ ಗ್ರಾಮದ ಅಶಿರುಲ್ ಎಂಬ ವ್ಯಕ್ತಿ, ಬಾರ್ಡರ್ ಔಟ್ ಪೋಸ್ಟ್ ಚೆಟ್ನಾಗಚ್‌ಗೆ ಭೇಟಿ ನೀಡಿದ್ದರು, ಬಳಿಕ ಭಾರತ-ಬಾಂಗ್ಲಾದೇಶ ಗಡಿ ಬಳಿ ಬರುವ ಚಹಾ ತೋಟದ ಹೊರ ಬೌಂಡರಿಯಲ್ಲಿ ಬೇಲಿಯ ಬದಲು ಭೂಮಿ ಅಗೆದು ಕಂದಕ ತೆಗೆಯುವ ಬಗ್ಗೆ ಅವರು ವಿನಂತಿಸಿದರು.ಭಾರತದಿಂದ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುವುದನ್ನು ತಡೆಯುವುದಕ್ಕೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಇರುವ ದುರ್ಬಲ ಬೇಲಿಯ ಬದಲಾಗಿ ಈ ಜಾನುವಾರು ಸಾಗಣೆ ವಿರೋಧಿ ಕಂದಕವನ್ನು ಅಗೆಯಲಾಗಿದೆ ಎಂದು ಇದನ್ನು ಉಲ್ಲೇಖಿಸುವುದು ಸೂಕ್ತ, ಏಕೆಂದರೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ಅಪಾಯಕಾರಿ ಎಂಬ ಮಟ್ಟದಲ್ಲಿದೆ.

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಆಸ್ಪತ್ರೆ ದಾಖಲು, ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಗಂಭೀರ ಗಾಯ!

ಆದರೆ ಈ ಕಂದಕ ಜಾನುವಾರು ಕಳ್ಳಸಾಗಣೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಬಿಎಸ್‌ಎಫ್‌ನ ಹೊರತಾಗಿ, ರಾಜ್ಯ ಸರ್ಕಾರವು ಎಂಎನ್‌ಆರ್‌ಇಜಿಎ ಯೋಜನೆಯಡಿಯಲ್ಲಿ ಜಾನುವಾರು ವಿರೋಧಿ ಕಂದಕಗಳನ್ನು ಅಗೆಯಲು ಅವರನ್ನು ನೇಮಿಸುವ ಮೂಲಕ ಗಡಿಭಾಗದ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಪೋಸ್ಟ್ ಕಮಾಂಡರ್ ಆ ವ್ಯಕ್ತಿಯ ಮನವಿಗೆ ಸಮ್ಮತಿಸಿದರು ಏಕೆಂದರೆ ಇದು ಎರಡು ಉದ್ದೇಶಗಳನ್ನು ಪರಿಹರಿಸುತ್ತದೆ, ಒಂದು, ಅಶಿರುಲ್ ಅವರ ಅಗತ್ಯಗಳಿಗೆ ಸಹಾಯವನ್ನು ಒದಗಿಸುವುದು ಮತ್ತು ಎರಡನೆಯದು, ದನ ಸಾಗಣೆ ವಿರೋಧಿ ಕಂದಕವನ್ನು ಅಗೆಯುವ ಮೂಲಕ, ಆ ಪ್ರದೇಶದಿಂದ ದನಗಳ ಕಳ್ಳಸಾಗಣೆ ಬೆದರಿಕೆಯನ್ನು ತಡೆಯುವುದು ಈ ಪ್ರದೇಶದಲ್ಲಿ ಜಾನುವಾರು ಕಳ್ಳಸಾಗಣೆ ತುಂಬಾ ವ್ಯಾಪಕವಾಗಿದೆ ಎಂದು ಬಿಎಸ್‌ಎಫ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಭೂಮಿ ಅಗೆಯುವ ಜೆಸಿಬಿ ಯಂತ್ರದ ಸಹಾಯದಿಂದ ಅಲ್ಲಿ ಕಂದಕ ತೊಡಲಾಗಿತ್ತು.  ಕೆಲಸ ಮುಗಿದ ನಂತರ, ಅಲ್ಲಿ ಆ  ಕಂದಕದೊಳಗೆ ಆಟವಾಡುತ್ತಿದ್ದ ಕೆಲವು ಮಕ್ಕಳು ಕಂದಕದ ಪಕ್ಕದಲ್ಲಿ ಆಡವಾಡುತ್ತಿದ್ದು, ಈ ವೇಳೆ ಪಕ್ಕದಲ್ಲಿ ತೆಗೆದು ಹಾಕಿದ್ದ ಮಣ್ಣು ಅವರ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಬಿಎಸ್‌ಎಫ್ ಅಲ್ಲಿಗೆ ತನ್ನ ಸಿಬ್ಬಂದಿಯನ್ನು ಕಳುಹಿಸಿ ಮಕ್ಕಳ ರಕ್ಷಣೆಗೆ ಮಾಡಬೇಕಾದ ಎಲ್ಲಾ ಪ್ರಯತ್ನ ಮಾಡಿತ್ತು.  ಅಲ್ಲದೇ ಅವರನ್ನು ರಕ್ಷಿಸಿ ಬಿಎಸ್ಎಫ್ ವಾಹನದಲ್ಲೇ ಅವರನ್ನು ಆಸ್ಪತ್ರೆಗೂ ಕರೆದೊಯ್ಯಲಾಯ್ತು. ಆದರೆ ಅಲ್ಲಿ ವೈದ್ಯರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಈ ನಾಲ್ವರ ಮಕ್ಕಳ ಸಾವಿಗೆ ಬಿಎಸ್‌ಎಫ್ ತೀವ್ರ ಸಂತಪ ವ್ಯಕ್ತಪಡಿಸುತ್ತಿದೆ. ಅಲ್ಲದೇ ಮಕ್ಕಳ ಕುಟುಂಬದ ಜೊತೆ ಇದೆ ಎಂದು ಬಿಎಸ್ಎಫ್ ಹೇಳಿದೆ. 

ಲೋಕಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನ ಗೆಲ್ಲುವುದು ಅನುಮಾನ, ಭವಿಷ್ಯ ನುಡಿದ ಸಿಎಂ ಮಮತಾ!

ಆದರೆ ಟಿಎಂಸಿ ಈ ವಿಚಾರವನ್ನು ಈಗ ರಾಜಕೀಯಗೊಳಿಸುತ್ತಿದ್ದು, ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಟೀಕಿಸುತ್ತಿದೆ.  ಈ ಬಗ್ಗೆ ಟಿಎಂಸಿ ನಾಯಕ ದೇಬಂಗ್ಶು ಭಟ್ಟಾಚಾರ್ಯ ದೇವ್ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಟ್ಯಾಗ್ ಮಾಡಿ ಸರಣಿ ಟ್ವಿಟ್ ಮಾಡಿದ್ದು,  ನೀವು ನಿಮ್ಮ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿದ್ದೀರಿ, ಆದರೆ ಬಂಗಾಳ ಜನರ ಬಗ್ಗೆ ನಿಮ್ಮ ಆಸಡ್ಡೆ ಹಾಗೂ ನಿರ್ಲಕ್ಷ್ಯದಿಂದ ಉಂಟಾದ ದುರಂತದ ಬಗ್ಗೆ ನಿಮ್ಮ ಗಮನಕ್ಕೆ ತರುತ್ತೇನೆ, ಎಂಹೆಚ್‌ಎ ನಿಯಂತ್ರಿತ ಬಿಎಸ್‌ಎಫ್‌ನ ನಿರ್ಲಕ್ಷ್ಯದಿಂದ ಉತ್ತರ ದಿನಾಜ್‌ಪುರದಲ್ಲಿ 4 ಮುಗ್ಧ ಜೀವಗಳು ಬಲಿಯಾಗಿವೆ ಈ ದುರಂತಕ್ಕೆ ಯಾರನ್ನು ಹೊಣೆಯಾಗಿಸಬೇಕು ಎಂದು ಪ್ರಶ್ನಿಸಿದ್ದಾರೆ.

 

Follow Us:
Download App:
  • android
  • ios