Asianet Suvarna News Asianet Suvarna News

ಪ್ರಶಾಂತ್‌ ಕಿಶೋರ್‌ ಜೊತೆಗೂಡಿ ಗೋವಾ ಪ್ರವೇಶಕ್ಕೆ ದೀದಿ ರಣತಂತ್ರ!

* ಗೋವಾ ಮೇಲೆ ಮಮತಾ ಕಣ್ಣು: ಮುಂದಿನ ಚುನಾವಣೆಗೆ ಸ್ಪರ್ಧೆ?

* ಪ್ರಶಾಂತ್‌ ಕಿಶೋರ್‌ ಜೊತೆಗೂಡಿ ಗೋವಾ ಪ್ರವೇಶಕ್ಕೆ ರಣತಂತ್ರ

TMC supremo Mamata Banerjee to visit Goa ahead of 2022 Assembly polls pod
Author
Bangalore, First Published Sep 24, 2021, 10:49 AM IST

ಕೊಲ್ಕತಾ(ಸೆ.24): ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದ್ದಾರೆ. ಗೋವಾದಲ್ಲಿ ರಾಜಕೀಯ ಅಸ್ತಿತ್ವ ಸ್ಥಾಪಿಸಲು ಮುಂದಾಗಿರುವ ಅವರು, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌(Prashant Kishor) ಅವರ ಐ-ಪ್ಯಾಕ್‌ ಸಂಸ್ಥೆಯ ಜತೆ ಸದ್ಯದಲ್ಲೇ ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಬಂಗಾಳದಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿಯನ್ನು ಸೋಲಿಸಿದ ನಂತರ ಮಮತಾ(Mamata Baneerjee) ಇಡೀ ದೇಶಕ್ಕೆ ಟಿಎಂಸಿಯನ್ನು ವಿಸ್ತರಿಸುವ ಚಿಂತನೆಯಲ್ಲಿದ್ದಾರೆ. ಈಗಾಗಲೇ ತ್ರಿಪುರಾದಲ್ಲಿ ಅವರ ಪಕ್ಷ ನೆಲೆಯೂರುತ್ತಿದೆ. 2024ರ ಲೋಕಸಭೆ ಚುನಾವಣೆ ವೇಳೆಗೆ ದೇಶಾದ್ಯಂತ ತಮ್ಮ ಪಕ್ಷದ ಅಸ್ತಿತ್ವವಿರಬೇಕು ಎಂಬುದು ಅವರ ಯೋಚನೆ. ಅದಕ್ಕೂ ಮುನ್ನ 2022ರ ಫೆಬ್ರವರಿಯಲ್ಲಿ ಗೋವಾ(Goa) ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ರಾಜ್ಯದಲ್ಲಿ ಟಿಎಂಸಿ ಸಂಘಟನೆ ಆರಂಭಿಸಲು ಮಮತಾ ನಿರ್ಧರಿಸಿದ್ದಾರೆ. ಈಗಾಗಲೇ ಐ-ಪ್ಯಾಕ್‌ನ 200ಕ್ಕೂ ಹೆಚ್ಚು ಮಂದಿ ಗೋವಾದಲ್ಲಿ ಟಿಎಂಸಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ಟಿಎಂಸಿಯ ಕೆಲ ಸಂಸದರು ಗೋವಾಕ್ಕೆ ತೆರಳಿ ಪಕ್ಷಕ್ಕಿರುವ ಸಾಧ್ಯತೆಗಳ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಮತಾ ಬ್ಯಾನರ್ಜಿಯವರ ಅಳಿಯ ಅಭಿಷೇಕ್‌ ಬ್ಯಾನರ್ಜಿ(Abhishek Banerjee) ಗೋವಾಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸ್ವತಃ ಮಮತಾ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

40 ವಿಧಾನಸಭಾ ಕ್ಷೇತ್ರಗಳ ಪುಟ್ಟರಾಜ್ಯ ಗೋವಾದಲ್ಲಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಹಾಗೂ ಬಿಜೆಪಿ 13 ಸೀಟು ಗೆದ್ದಿದ್ದವು. ಆದರೂ ಬಿಜೆಪಿ ಸರ್ಕಾರ ರಚಿಸಿತ್ತು. ಅಲ್ಲಿ ಕಾಂಗ್ರೆಸ್‌ ದುರ್ಬಲವಾಗಿದ್ದು, ಟಿಎಂಸಿ ತುಂಬಾ ದೊಡ್ಡ ಸಾಧನೆ ಮಾಡದಿದ್ದರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ. ಈಗಾಗಲೇ ಆಮ್‌ ಆದ್ಮಿ ಪಕ್ಷ ಕೂಡ ಗೋವಾಕ್ಕೆ ಕಾಲಿಟ್ಟಿದೆ. ಆಪ್‌ನ ಅರವಿಂದ ಕೇಜ್ರಿವಾಲ್‌ ಜೊತೆ ಮಮತಾ ಸ್ನೇಹ ಹೊಂದಿದ್ದಾರೆ. ಹೀಗಾಗಿ ಮುಂದಿನ ವರ್ಷದ ಗೋವಾ ಚುನಾವಣೆ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios