* ಪ್ರಸಾರ ಭಾರತಿಯ ಮಾಜಿ ಸಿಇಒ ಆಗಿದ್ದ ಜವಾಹರ್‌ ಸರ್ಕಾರ್‌ * ಜವಾಹರ್‌ ಸರ್ಕಾರ್‌ ಅವರನ್ನು ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ತೃಣಮೂಲ ಕಾಂಗ್ರೆಸ್‌ ಘೋಷಣೆ* ಬಿಜೆಪಿ ಸೇರಿದ ದಿನೇಶ್‌ ತ್ರಿವೇದಿ ಅವರ ರಾಜಿನಾಮೆಯಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನ

ಕೋಲ್ಕತಾ(ಜು.25): ಪ್ರಸಾರ ಭಾರತಿಯ ಮಾಜಿ ಸಿಇಒ ಆಗಿದ್ದ ಜವಾಹರ್‌ ಸರ್ಕಾರ್‌ ಅವರನ್ನು ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ತೃಣಮೂಲ ಕಾಂಗ್ರೆಸ್‌ ಘೋಷಣೆ ಮಾಡಿದೆ.

ಬಿಜೆಪಿ ಸೇರಿದ ದಿನೇಶ್‌ ತ್ರಿವೇದಿ ಅವರ ರಾಜಿನಾಮೆಯಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಆಗಸ್ಟ್‌ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2016ರಲ್ಲಿ ಸರ್ಕಾರ್‌ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈಗ ಟಿಎಂಸಿಯ ಅಭ್ಯರ್ಥಿಯಾಗಿ ನಾಮಕರಣಗೊಂಡಿರುವುದಕ್ಕೆ ಆಶ್ಚರ್ಯಗೊಂಡಿರುವ ಅವರು, ‘ಈವರೆಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ರಾಜಕಾರಣ ಗೊತ್ತಿಲ್ಲ ಆದರೆ ದೇಶಸೇವೆಗಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

42 ವರ್ಷಗಳ ಕಾಲ ಅಖಿಲ ಭಾರತ ಸೇವೆಯ ಅಧಿಕಾರಿಯಾಗಿದ್ದ ಸರ್ಕಾರ್‌ ಅವರ ಅನುಭವ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.