Asianet Suvarna News Asianet Suvarna News

ಸದನದಲ್ಲಿ ಹಣದುಬ್ಬರ ಚರ್ಚೆ ವೇಳೆ, 1.6 ಲಕ್ಷದ ಬ್ಯಾಗ್‌ಅನ್ನು ಮುಚ್ಚಿಟ್ಟ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ!

ಸೋಮವಾರ ಸದನದಲ್ಲಿ ಹಣದುಬ್ಬರ ಕುರಿತಾದ ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ, ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸೆ ಮಹುವಾ ಮೊಯಿತ್ರಾ ತಮ್ಮ 1.6 ಲಕ್ಷ ರೂಪಾಯಿ ಮೌಲ್ಯದ ಲೂಯಿ ವಿಟಾನ್‌ ಹ್ಯಾಂಡ್‌ಬ್ಯಾಗ್‌ ಅನ್ನು ಮುಚ್ಚಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
 

TMC MP Mahua Moitra seen hiding her Louis Vuitton bag worth Rs 1.6 lakh during price rise debate in parliament san
Author
Bengaluru, First Published Aug 1, 2022, 11:36 PM IST

ನವದೆಹಲಿ (ಆ.1): ಲೋಕಸಭೆಯಲ್ಲಿ ಹಣದುಬ್ಬರ ಏರಿಕೆಯ ಚರ್ಚೆ ನಡೆಯುತ್ತಿರುವಾಗ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಸೋಮವಾರ ತಮ್ಮ 1.6 ಲಕ್ಷ ರೂಪಾಯಿಯ ಲೂಯಿ ವಿಟಾನ್ ಬ್ಯಾಗ್ ಅನ್ನು ಮುಚ್ಚಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಬೆಲೆ ಏರಿಕೆಯ ಬಗ್ಗೆ ಮಾತನಾಡಲು ಎದ್ದುನಿಂತ ತೃಣಮೂಲ ಕಾಂಗ್ರೆಸ್‌ನ ಸಂಸದ ಡಾ.ಕಾಕೋಲಿ ಘೋಸ್ಟ್ ದಸ್ತಿದಾರ್ ಅವರತ್ತ ಕ್ಯಾಮರಾ ಹಸರಿಯುತ್ತಿದ್ದಂತೆ, ಅವರ ಪಕ್ಕದಲ್ಲಿ ಕುಳಿತಿದ್ದ ಮಹುವಾ ಮೊಯಿತ್ರಾ, ತಮ್ಮ ಪಕ್ಕದಲ್ಲಿದ್ದ ಲೂಯಿ ವಿಟಾನ್ ಬ್ಯಾಗ್ ತೆಗೆದುಕೊಂಡು ಕೆಳಗಿಟ್ಟರು. ಬ್ಯಾಗ್‌ಗಳು ಲೋಕಸಭೆಯ ಕ್ಯಾಮೆರಾಗೆ ಕಾಣಿಸದೇ ಇರುವ ತಮ್ಮ ಕಾಲುಗಳ ಬಳಿ ಬ್ಯಾಗ್‌ಗಳನ್ನು ಇರಿಸಿದರು. ಕೇಂದ್ರ ಸರ್ಕಾರವನ್ನು ಹಣದುಬ್ಬರ ವಿಚಾರದಲ್ಲಿ ದೊಡ್ಡ ಮಟ್ಟದದಲ್ಲಿ ಟೀಕೆ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದೆಯೇ, ಸದಕ್ಕೆ 1.6 ಲಕ್ಷ ರೂಪಾಯಿ ಬೆಲೆ ಬಾಳುವ ಹ್ಯಾಂಡ್‌ಬ್ಯಾಗ್‌ ತಂದಿದ್ದಾರೆ ಆ ಕಾರಣದಿಂದಾಗಿ ಇದು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಫ್ಯಾಷನ್ ಬ್ಲಾಗ್‌  ಹಾಗೂ ವೆಬ್‌ಸೈಟ್‌ನ ಮಾಹಿತಿಗಳ ಅನುಸಾರ ಮೊಯಿತ್ರಾ ಅವರ ಬಳಿ ಇರುವ ಬ್ಯಾಗ್‌ನ ಮೌಲ್ಯ 1.6 ಲಕ್ಷ ರೂಪಾಯಿ ಎನ್ನಲಾಗಿದೆ.

ಮಹುವಾ ಮೊಯಿತ್ರಾ ಅವರು ಸಂಸತ್ತಿಗೆ ಅತಿ ದುಬಾರಿ ಬ್ಯಾಗ್ ಕೊಂಡೊಯ್ದಿರುವುದು ಆನ್‌ಲೈನ್ ಬಹು ಚರ್ಚಿತ ವಿಷಯವಾದಂತೆಯೇ, ಈ ಹಿಂದೆ ನೈರೋಬಿ ಮಹಿಳಾ ಪ್ರತಿನಿಧಿ ಎಸ್ತರ್ ಪಸಾರಿಸ್ ಅವರು ತಮ್ಮ ಲೂಯಿ ವಿಟಾನ್ ಕೈಚೀಲವನ್ನು ಸಂಸತ್ತಿಗೆ ಕೊಂಡೊಯ್ದಿದ್ದು ದೊಡ್ಡ ಮಟ್ಟದ ವಿವಾದವಾಗಿದ್ದನ್ನು ನೆಟಿಜನ್ಸ್‌ಗಳು ನೆನಪಿಸಿದ್ದಾರೆ.

ಬ್ರಾಹ್ಮಣ ದೃಷ್ಟಿಕೋನದ ಬಿಜೆಪಿ ಭಾರತದಲ್ಲಿರಲು ಬಯಸುವುದಿಲ್ಲ, ಮೊಯಿತ್ರಾ ಮತ್ತೊಂದು ವಿವಾದ!

ಲೂಯಿಸ್ ವಿಟಾನ್  ಕಂಪನಿ: ಲೂಯಿಸ್ ವಿಟಾನ್ ಮಾಲೆಟಿಯರ್ (ಲೂಯಿ ವಿಟಾನ್ ಮಾಲೆಟಿಯರ್) ಒಂದು ಫ್ರೆಂಚ್ ಕಂಪನಿಯಾಗಿದೆ. ಸಾಮಾನ್ಯವಾಗಿ ಲೂಯಿ ವಿಟಾನ್ ಎಂದು ಕರೆಯಲಾಗುತ್ತದೆ, ಇದು ಫ್ರೆಂಚ್ ಬಟ್ಟೆ ಮತ್ತು ಐಷಾರಾಮಿ ಸರಕುಗಳ ಕಂಪನಿಯಾಗಿದೆ. ಕಂಪನಿಯನ್ನು 1854 ರಲ್ಲಿ ಫ್ರೆಂಚ್ ಫ್ಯಾಷನ್ ಡಿಸೈನರ್ ಲೂಯಿ ವಿಟಾನ್ ಸ್ಥಾಪಿಸಿದರು. ಕಂಪನಿಯ ಹೆಚ್ಚಿನ ಉತ್ಪನ್ನಗಳ ಮೇಲೆ "LV" ಬ್ರಾಂಡ್ ಅನ್ನು ಮುದ್ರಿಸಲಾಗಿದೆ. ಈ ಬ್ರ್ಯಾಂಡ್ ಸುಮಾರು ಒಂದೂವರೆ ನೂರು ವರ್ಷಗಳಿಂದ ಯಶಸ್ವಿಯಾಗಿ ವ್ಯವಹಾರಗಳಲ್ಲಿದೆ.. ಈ ಕಂಪನಿಯು ಮೂಲತಃ ಚಡ್ಡಿಗಳನ್ನು ತಯಾರಿಸುತ್ತಿತ್ತು. ನಂತರ, ಈ ಕಂಪನಿಯು ಆಧುನಿಕ ಸೂಟ್ಕೇಸ್ ವ್ಯವಹಾರಕ್ಕೆ ಇಳಿದಿತ್ತು. ಪ್ರಸ್ತುತ ಬಟ್ಟೆ, ಕೈಗಡಿಯಾರಗಳು, ಚೀಲಗಳು, ಶಾಂಪೇನ್, ವೈನ್ ತಯಾರಿಸುತ್ತದೆ. ಪುಸ್ತಕಗಳನ್ನೂ ಮಾರುತ್ತಾರೆ. ಪ್ರಪಂಚದಾದ್ಯಂತ 60 ದೇಶಗಳಲ್ಲಿ 500 ಮಳಿಗೆಗಳಿವೆ.

ನನಗೆ ಕಾಳಿ ಅಂದ್ರೆ ಮಾಂಸ, ಮದ್ಯ ಸೇವಿಸುವ ದೇವತೆ, ಸಂಸದೆ ಮೊಯಿತ್ರಾ ಹೇಳಿಕೆಗೆ ಟಿಎಂಸಿ ಗರಂ!

Follow Us:
Download App:
  • android
  • ios