ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ, ಟಿಎಂಸಿ ನಾಯಕನ ಬಂಧಿಸಿದ ಪೊಲೀಸ್!
ಪ್ರಧಾನಿ ನರೇಂದ್ರ ಮೋದಿ ಮೊರ್ಬಿ ಸೇತುವೆ ದುರಂತ ಸ್ಥಳಕ್ಕೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಕುರಿತು ಆರ್‌ಟಿಐನಡಿ ಮಾಹಿತಿ ಪಡೆಯಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ ಟಿಎಂಸಿ ನಾಯಕನ ಪೊಲೀಸರು ಬಂಧಿಸಿದ್ದಾರೆ.
ಅಹಮ್ಮದಾಹಾದ್(ಡಿ.06): ಗುಜರಾತ್ ಚುನಾವಣೆ ಮುಗಿದು ಇದೀಗ ಫಲಿತಾಂಶದ ಕುತೂಹಲ ಹೆಚ್ಚಾಗಿದೆ. ಆದರೆ ರಾಜಕೀಯ ಕೆಸರೆರೆಚಾಟ ಮುಗಿದಿಲ್ಲ. ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಪ್ರಚಾರ ಮಾಡಲು ಹೋದ ಟಿಎಂಸಿ ನಾಯಕ ಸಾಕೇತ್ ಗೋಖಲೆ ಅರೆಸ್ಟ್ ಆಗಿದ್ದಾರೆ. ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಮೊರ್ಬಿ ಸೇತುವೆ ದುರಂತ ಕುರಿತು ಸಾಕೇತ್ ಗೋಖಲೆ ಸುಳ್ಳು ಹರಡಿದ್ದಾರೆ. ದುರಂತ ಸ್ಥಳಕ್ಕೆ ಅರ್ಧ ಗಂಟೆಯ ಭೇಟಿದೆ ಮೋದಿ 30 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಕುರಿತು ಆರ್‌ಟಿಐನಡಿ ಮಾಹಿತಿ ಪಡೆಯಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. ಆರ್‌ಟಿಐ ಪ್ರತಿಯನ್ನು ಟ್ವೀಟ್ ಮಾಡಿದ್ದರು. ಆದರೆ ಈ ಮಾಹಿತಿ ಸುಳ್ಳು ಎಂದು ಭಾರತದ ಪ್ರಸಾರ ಮತ್ತು ಮಾಹಿತಿ ಇಲಾಖೆ ಅಧಿಕೃತ ಟ್ವಿಟರ್ ಹೇಳಿತ್ತು. ಇದರಿಂದ ಸಾಕೇತ್ ಗೋಖಲೆ ವಿರುದ್ದ ದೂರು ದಾಖಲಾಗಿತ್ತು. ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾಕೇತ್ ಗೋಖಲೆ ಬಂದಿಸಿದ್ದಾರೆ.
ಸುಳ್ಳು ಮಾಹಿತಿ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅಪಪ್ರಚಾರ ಮಾಡಿದ್ದಾರೆ ಎಂದು ಸಾಕೇತ್ ಗೋಖಲೆ ವಿರುದ್ದ ಸೆಕ್ಷನ್ 465, 469, 471, 501, 505 ಅಡಿ ದೂರು ದಾಖಲಾಗಿದೆ. ದೂರಿನ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಾಕೇತ್ ಗೋಖಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಅಹಮ್ಮದಾಬಾದ್ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಡಿಸೆಂಬರ್ 8 ರಂದು ಮತ್ತೆ ವಿಚಾರಣೆ ನಡೆಸುವುದಾಗಿ ಅಹಮ್ಮದಾಬಾದ್ ಕೋರ್ಟ್ ಹೇಳಿದೆ.
'ನಮ್ಮ ರಾಷ್ಟ್ರಪತಿ ನೋಡೋಕೆ ಹೇಗಿದ್ದಾರೆ ಗೊತ್ತಲ್ಲ...' ಟಿಎಂಸಿ ನಾಯಕನ ವಿವಾದಿತ ಹೇಳಿಕೆಗೆ ಬಿಜೆಪಿ ಆಕ್ಷೇಪ!
ಸಾಕೇತ್ ಗೋಖಲೆ ಬಂಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತ ಹಲವು ಟಿಎಂಸಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಈ ಸರ್ಕಾರದಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ ಎಂದು ಆರೋಪಿಸಿದೆ. ಟ್ವೀಟ್ ಮೂಲಕ ಸುಳ್ಳು ಸುದ್ದಿ ಹರಡಿದ್ದಾರೆ ಅನ್ನೋ ಕಾರಣಕ್ಕೆ ಬಂಧಿಸುವುದಾದದರೆ ಬಿಜೆಪಿಯ ಹಲವು ನಾಯಕರನ್ನು ಈಗಾಗಲೇ ಬಂಧಿಸಬೇಕಿತ್ತು. ಆದರೆ ಟಿಎಂಸಿ ನಾಯಕನ ಮಾತ್ರ ಬಂಧಿಸಲಾಗಿದೆ ಎಂದು ಟಿಎಂಸಿ ನಾಯಕ ಶಂತನು ಸೇನ್ ಆರೋಪಿಸಿದ್ದಾರೆ.
ನಮ್ಮನ್ನು ಫುಟ್ಬಾಲ್ ರೀತಿ ಬಳಸಬೇಡಿ, ಮುಸ್ಲಿಂ ಸಚಿವನಿಂದ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ!
ಮೊರ್ಬಿ ದುರಂತಕ್ಕೆ 60 ಬಲಿ
ನವೀಕೃತಗೊಂಡು 4 ದಿನಗಳ ಹಿಂದಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದ ತೂಗು ಸೇತುವೆ ಅಕ್ಟೋಬರ್ 29 ರಂದು ತುಂಡಾಗಿ ಬಿದ್ದ ಪರಿಣಾಮ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ರಜೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇತುವೆ ವೀಕ್ಷಣೆಗೆ ಆಗಮಿಸಿದ್ದ ಕಾರಣ ಅದು ಹೆಚ್ಚಿನ ತೂಕ ತಾಳದೇ ತುಂಡಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಬಳಿಕ ಹತ್ತಾರು ಮಂದಿ ನಾಪತ್ತೆಯಾಗಿದ್ದು, ಅವರ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಭೀತಿ ಕಾಡಿದೆ. ಘಟನಾ ಸ್ಥಳದಿಂದ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರು. ಮತ್ತು ಗಾಯಾಳುಗಳ ಕುಟುಂಬಕ್ಕೆ ತಲಾ 50000 ರು. ಪರಿಹಾರ ಪ್ರಕಟಿಸಿದ್ದಾರೆ. ಮತ್ತೊಂದೆಡೆ ಗುಜರಾತ್ ಸರ್ಕಾರ ಕೂಡ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರು. ಮತ್ತು ಗಾಯಾಳುಗಳ ಕುಟುಂಬಕ್ಕೆ ತಲಾ 50000 ರು. ಪರಿಹಾರ ಘೋಷಿಸಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೊರ್ಬಿಗೆ ಧಾವಿಸಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಪರಿಹಾರ ಕಾರ್ಯಗಳಿಗಾಗಿ ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ರವಾನಿಸಲಾಗಿದೆ.