ಕೋಲ್ಕತಾ(ಮೇ.17): ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಪಶ್ಚಿಮ ಬಂಗಾಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾವಾಗಿದೆ. ಹಿಂಸಾಚಾರ, ಘಟನಾ ಸ್ಥಳಕ್ಕೆ ರಾಜ್ಯಪಾಲರ ಭೇಟಿ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಆತಂಕದ ಪರಿಸ್ಥಿತಿಗೆ ತಂದೊಡ್ಡಿದೆ. ಇದೀಗ ನಾರದ ಸ್ಟಿಂಗ್ ಆಪರೇಶನ್ ಪ್ರಕರಣದಡಿ ಸಿಬಿಐ ಪೊಲೀಸ್, ಟಿಎಂಸಿ ಸಚಿವರು ಹಾಗೂ ಶಾಸಕನನ್ನು ಬಂಧಿಸಿದೆ. ಇದರ ವಿರುದ್ಧ ಖುದ್ದು ಸಿಎಂ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿ ಎದುರು ಧರಣಿ ನಡೆಸಿದ್ದರು ಇದೀಗ ಬಂಗಾಳ ಸ್ಪೀಕರ್, ಈ ನಡೆ ವಿರುದ್ಧ ಗರಂ ಆಗಿದ್ದಾರೆ. ಇಷ್ಟೇ ಅಲ್ಲ ರಾಜ್ಯಪಾಲರ ವಿರುದ್ಧ ಕಿಡಿ ಕಾರಿದ್ದಾರೆ.

ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ, ಕಪ್ಪು ಬಾವುಟ ಪ್ರದರ್ಶನ!

ನಾರದ ಸ್ಟಿಂಗ್ ಪ್ರಕರಣ ಕುರಿತು ನಾಲ್ವರನ್ನು ಬಂಧಿಸಲು ಬಂಗಾಳ ರಾಜ್ಯಪಾಲ ಜಗದೀಪ್ ದನ್ಕರ್ ಅನಮತಿ ನೀಡಿದ ಒಂದು ಬಳಿಕ ಟಿಎಂಸಿ ನಾಯಕರ ಬಂಧನವಾಗಿದೆ. ಇದು ರಾಜಕೀಯ ಪ್ರೇರಿತ ಎಂದು ಟಿಎಂಸಿ ಪಕ್ಷದ ಕಾರ್ಯಕರ್ತರು, ಸಿಎಂ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿ ಎದುರೇ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಸ್ಪೀಕರ್  ಬಿಮನ್ ಬ್ಯಾನರ್ಜಿ ಗರಂ ಆಗಿದ್ದಾರೆ. ರಾಜ್ಯಪಾಲರ ಈ ನಡೆ ಕಾನೂನು ಬಾಹಿರ, ಅನೈತಿಕ ಎಂದಿದ್ದಾರೆ.

14 ಬಿಜೆಪಿ ಕಾರ‍್ಯಕರ್ತರ ಹತ್ಯೆ, ಲಕ್ಷ ಮಂದಿ ಗುಳೆ!

ಈ ಪ್ರಕರಣ ಕುರಿತು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ನ್ಯಾಯಾಧೀಶರು ರಾಜ್ಯ ಅಸೆಂಬ್ಲಿ ಸ್ಪೀಕರ್ ವಿಚಾರಣೆಗೆ ಅನುಮತಿ ನೀಡಿರುವ ಕುರಿತು ಪ್ರಶ್ನಿಸಿದೆ. ಆದರೆ ಈ ರೀತಿಯ ಯಾವ ರೀತಿಯ ಅನುಮತಿಯನ್ನು ನೀಡಿಲ್ಲ. ಈ ಕುರಿತು ಸಿಬಿಐ ಯಾವುದೇ ಪತ್ರ ಕಳುಹಿಸಿಲ್ಲ ಎಂದು ಸ್ಪೀಕರ್  ಬೀಮನ್ ಬ್ಯಾನರ್ಜಿ ಹೇಳಿದ್ದಾರೆ.
 
ಟಿಎಂಸಿ ನಾಯಕರ ಲಂಚ ಸ್ವೀಕಾರ ಕುರಿತು ಪ್ರಸಾರದ ನಾರದ ಸ್ಟಿಂಗ್ ಪ್ರಕರಣ ಕುರಿತು ಸಿಬಿಐ ಪೊಲೀಸರು ಪಶ್ಚಿಮ ಬಂಗಾಳ ಕ್ಯಾಬಿನೆಟ್ ಮಂತ್ರಿಗಳಾದ ರ್ಫಿಹಾದ್ ಫಕೀಮ್, ಸುಬ್ರತಾ ಮುರ್ಖಜಿ, ಶಾಸಕ ಮದನ್ ಮಿತ್ರಾ, ಮಾಜಿ ಸಚಿವ ಸೋವನ್ ಚಟರ್ಜಿ ರನ್ನು ಬಂಧಿಸಿತ್ತು.