ತಿರುಪತಿ(ಜೂ.25): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ವೆಂಕಟೇಶ್ವರ ದೇವಾಲಯ ಮರು ಆರಂಭವಾಗಿ ಎರಡು ವಾರ ಕಳೆದಿದೆ. ಈ 14 ದಿನಗಳಲ್ಲಿ ದೇವಾಲಯದಲ್ಲಿ ಸುಮಾರು 7.5 ಕೋಟಿ ಆದಾಯ ಸಂಗ್ರಹವಾಗಿದೆ.

ಕಳೆದ 14 ದಿನಗಳಲ್ಲಿ ಕೇವಲ ಹುಂಡಿಯಲ್ಲಿ ಮಾತ್ರವೇ 6 ಕೋಟಿ ಸಂಗ್ರಹವಾಗಿದ್ದು, ಆನ್‌ಲೈನ್‌ ದರ್ಶನದಿಂದಾಗಿ 1.5 ಕೋಟಿ ರು. ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ ಭಕ್ತರು ಸಮರ್ಪಿಸುವ ಬಂಗಾರ, ಬೆಳ್ಳಿ ಮತ್ತಿತರ ಬೆಲೆಬಾಳುವ ವಸ್ತುಗಳ ಮೌಲ್ಯವನ್ನು ಲೆಕ್ಕ ಹಾಕಿಲ್ಲ ಎಂದು ದೇವಾಲಯದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಬಿಗ್ ಶಾಕ್

ಜೂನ್‌ 11ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ದಿನಕ್ಕೆ 6000 ಭಕ್ತರು ಮಾತ್ರ ಪ್ರವೇಶಿಸಬೇಕೆಂಬ ನಿರ್ಬಂಧ ಇದೆ.

ಕೊರೋನಾ ಭೀತಿಯಲ್ಲಿ ಎರಡು ತಿಂಗಳ ಕಾಲ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ 500 ಕೋಟಿ ರು. ನಷ್ಟ ಉಂಟಾಗಿತ್ತು.