ಒಂದು ಗಂಟೆಯಲ್ಲಿ ತಿಮ್ಮಪ್ಪನ ದರ್ಶನ; ಟಿಟಿಡಿ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆ

Tirumala Balaji Darshan: ಭಕ್ತರಿಗೆ ಕೇವಲ 1 ಗಂಟೆಯಲ್ಲಿಯೇ ಬಾಲಜಿಯ ದರ್ಶನ ಮಾಡುವ ಸಮಯ ಬಂದಿದೆ. ಈ ಸಂಬಂಧ ಪ್ರಾಯೋಗಿಕ ಕ್ರಮಗಳು ನಡೆದಿವೆ.

Tirupati Darshan in One Hour AI Technology to Reduce Wait Time mrq

ತಿರುಪತಿ: ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಮಲದ ದೇಗುಲ ಮೊದಲ ಸ್ಥಾನದಲ್ಲಿ ಬರುತ್ತದೆ. ಪ್ರತಿದಿನ ದೇಶದ ಎಲ್ಲಾ ಭಾಗದಿಂದಲೂ ತಿರುಮಲಕ್ಕೆ ಭಕ್ತರು ಆಗಮಿಸುತ್ತಾರೆ. ದೇಶ ಮಾತ್ರವಲ್ಲ ವಿದೇಶಗಳಿಂದಲೂ ತಿಮ್ಮಪ್ಪನ ದರ್ಶನ ಪಡೆಯಲು ಶ್ರೀನಿವಾಸದ ಸನ್ನಿದಾನಕ್ಕೆ ಬರುತ್ತಾರೆ. ತಿರುಮಲ ಸ್ವಾಮಿಯ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ಮೂರು ತಿಂಗಳ ಮುಂಚೆಯೇ ಬುಕಿಂಗ್ ಮಾಡುವ ವ್ಯವಸ್ಥೆ ಇದ್ದರೂ, ಐದು ನಿಮಿಷಗಳಲ್ಲಿ ಎಲ್ಲಾ ದರ್ಶನ ಟಿಕೆಟ್‌ಗಳು ಮಾರಾಟವಾಗುತ್ತದೆ. ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವವರು ಮಾತ್ರವಲ್ಲದೆ, ಬುಕಿಂಗ್ ಇಲ್ಲದೆ ಬರುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ದರ್ಶನಕ್ಕಾಗಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.

ಆನ್‌ಲೈನ್ ಮುಂಗಡ ಟಿಕೆಟ್ ಸೇರಿದಂತೆ ಇನ್ನಿತರ  ಆಧುನಿಕ ವ್ಯವಸ್ಥೆಗಳಿದ್ರೂ  ಕೆಲವೊಮ್ಮೆ ಹಲವು ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ವಿಶೇಷ ದಿನಗಳಲ್ಲಿ ದಿನವಿಡೀ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಆಗಾಗ್ಗೆ ಉಂಟಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಶೀಘ್ರದಲ್ಲೇ ಇದು ಜಾರಿಗೆ ಬರಲಿದ್ದು, ಒಂದು ಗಂಟೆಯೊಳಗೆ ದರ್ಶನ ಪಡೆಯಬಹುದು.

Tirupati Darshan in One Hour AI Technology to Reduce Wait Time mrq

ಮುಖ ಗುರುತಿಸುವಿಕೆ ಆಧಾರಿತ ಕೃತಕ ಬುದ್ಧಿಮತ್ತೆ (facial recognition-based Artificial Intelligence (AI)) ತಂತ್ರಜ್ಞಾನವನ್ನು ಬಳಸಿಕೊಂಡು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಭಕ್ತರು ದರ್ಶನಕ್ಕಾಗಿ ಕಾಯುವ ಸಮಯ ಕಡಿಮೆಯಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನ TTD ಟ್ರಸ್ಟ್ ಬೋರ್ಡ್ ತಿಳಿಸಿದೆ. ಇನ್ನೂ ಆರು ತಿಂಗಳೊಳಗೆ AI ತಂತ್ರಜ್ಞಾನ ಕಾರ್ಯರೂಪಕ್ಕೆ ಬರುತ್ತದೆ. ಈ ಯೋಜನೆ ಜಾರಿಗೆ ಬಂದ ನಂತರ, ಸಾಮಾನ್ಯ ಭಕ್ತರು ಸಹ 1 ಗಂಟೆಯೊಳಗೆ ತಿರುಪತಿಯ ವೆಂಕಟರಮಣನ ದರ್ಶನ ಪಡೆಯಬಹುದು. ಬೆಂಗಳೂರಿನ ಒಂದು ಕಂಪನಿ ಈಗಾಗಲೇ ತಿರುಪತಿ ಮತ್ತು ತಿರುಮಲದಲ್ಲಿ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದೆ ಎಂದು TTD ಅಧ್ಯಕ್ಷ ಪಿ.ಆರ್. ನಾಯ್ಡು ತಿಳಿಸಿದ್ದಾರೆ.

Tirupati Darshan in One Hour AI Technology to Reduce Wait Time mrq

ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುವ ಡಿಜಿ ಯಾತ್ರಾ ಮಾದರಿಯಿಂದ ಪ್ರೇರಿತರಾಗಿ, AI ತಂತ್ರಜ್ಞಾನದ ಮೂಲಕ ಮುಖ ಗುರುತಿಸುವಿಕೆಯನ್ನು ಬಳಸುವ ವಿಧಾನವನ್ನು ಪರಿಚಯಿಸುತ್ತಿದ್ದೇವೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ 20 ಪ್ರಮುಖ ಸ್ಥಳಗಳಲ್ಲಿ ಭಕ್ತರ ಮುಖವನ್ನು ಸ್ಕ್ಯಾನ್ ಮಾಡಿ, ದರ್ಶನಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುತ್ತದೆ. ಅವರು ನಿಗದಿಪಡಿಸಿದ ಸಮಯದೊಳಗೆ ಒಂದು ಗಂಟೆಯೊಳಗೆ ಸಾಲಿನಲ್ಲಿ ಸೇರಬಹುದು, ಮುಂದಿನ ಒಂದು ಗಂಟೆಯೊಳಗೆ ದರ್ಶನ ಪಡೆಯಬಹುದು ಎಂದು  ಪಿ.ಆರ್. ನಾಯ್ಡು ತಿಳಿಸಿದ್ದಾರೆ.

Tirupati Darshan in One Hour AI Technology to Reduce Wait Time mrq

ಈ ಹೊಸ ವಿಧಾನವನ್ನು ಪ್ರಸ್ತುತ ಬೆಂಗಳೂರಿನ ಒಂದು ಕಂಪನಿ ಪ್ರಾತ್ಯಕ್ಷಿಕೆ ನೀಡುತ್ತಿದೆ. ಉದಾರವಾಗಿ ದಾನ ನೀಡಿದವರು ಇದಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ತಂತ್ರಜ್ಞಾನವನ್ನು ಬಳಸುವ ಮೂಲಕ, ನಕಲಿ ಟಿಕೆಟ್‌ಗಳನ್ನು ತಡೆಯಬಹುದು. ಈ ಯೋಜನೆಯಿಂದ ಭಕ್ತರನ್ನು ವಿಂಗಡಿಸುವ ಪ್ರಸ್ತುತ ವ್ಯವಸ್ಥೆ ರದ್ದಾಗುತ್ತದೆ. ಎಲ್ಲಾ ಭಕ್ತರಿಗೂ ತಡೆರಹಿತ ಮತ್ತು ಗೌರವಾನ್ವಿತ ಅನುಭವವನ್ನು ಒದಗಿಸುವುದೇ ನಮ್ಮ ಉದ್ದೇಶ. ಜನಸಂದಣಿಯನ್ನು ನಿಯಂತ್ರಿಸಲು ಮೊದಲು ಪರಿಚಯಿಸಲಾದ ಸಮಯ ಆಧಾರಿತ ದರ್ಶನ ವ್ಯವಸ್ಥೆ ನಕಲಿ ಟಿಕೆಟ್‌ಗಳಿಂದ ತೊಂದರೆಗೊಳಗಾಗಿತ್ತು. 

ಇದನ್ನೂ ಓದಿ:ತಿರುಪತಿ ಭಕ್ತರ ಗಮನಕ್ಕೆ, ಬದಲಾಗಲಿದೆ ತಿರುಮಲ, ಇನ್ಮುಂದೆ ದರ್ಶನ, ವಸತಿ ಎಲ್ಲವೂ ವಿಭಿನ್ನ & ನೂತನ

Tirupati Darshan in One Hour AI Technology to Reduce Wait Time mrq

ಇದಲ್ಲದೆ, ದರ್ಶನಕ್ಕಾಗಿ ಕಾಯುವ ಸಮಯವೂ ಹೆಚ್ಚಾಗಿತ್ತು. ಈ ಸುರಕ್ಷಿತ ವಿಧಾನದ ಮೂಲಕ ಯಾವುದೇ ಭಕ್ತರಾದರೂ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಒಂದು ಗಂಟೆಯೊಳಗೆ ದರ್ಶನ ಪಡೆಯಬಹುದು. ಮುಂದಿನ ಆರು ತಿಂಗಳೊಳಗೆ ಈ ವ್ಯವಸ್ಥೆಯನ್ನು ಜಾರಿಗೆ ತರಲು ಗುರಿ ಹೊಂದಿದ್ದೇವೆ, ಸಾಧ್ಯವಾದರೆ ಇನ್ನೂ ಬೇಗನೆ ಪರಿಚಯಿಸಲು ಯೋಜಿಸಿದ್ದೇವೆ ಎಂದರು. 

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 20 ತಾಸು: ಕಾರಣವೇನು?

Latest Videos
Follow Us:
Download App:
  • android
  • ios