ಮಕ್ಕಳಿಗೆ ವಿತರಿಸಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವು ಪತ್ತೆ

ಪೋಷಕರೊಬ್ಬರು ಸತ್ತ ಹಾವು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆಹಾರದ ಮಾದರಿಯನ್ನು ಸಂಗ್ರಹಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಆನಂದಿ ಭೋಸಲೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. 

tiny dead snake found in mid day meal pocket sangli district of western Maharashtra mrq

ಮುಂಬೈ: ಮಧ್ಯಾಹ್ನದ ಬಿಸಿಯೂಟ ಯೋಜನೆಯ (Mid Day Meal Project) ಭಾಗವಾಗಿ ವಿತರಣೆ ಮಾಡಲಾಗುವ ಆಹಾರದ ಪೊಟ್ಟಣದಲ್ಲಿ ಸತ್ತ ಹಾವು (Tiny Dead Snake) ಪತ್ತೆಯಾಗಿದೆ. ಪಶ್ಚಿಮ ಮಾಹಾರಾಷ್ಟ್ರದ ಸಾಂಗ್ಲಿ (Sangli, Maharashtra) ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆರು ತಿಂಗಳಿನಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ (Anganawadi)  ಆಹಾರದ ಪೊಟ್ಟಣಗಳನ್ನು (Food Packet) ವಿತರಣೆ ಮಾಡಲಾಗುತ್ತದೆ. ಸೋಮವಾರ ತಮ್ಮ ಮಗುವಿಗೆ ಸಿಕ್ಕ ಆಹಾರದಲ್ಲಿ ಸತ್ತ ಹಾವು ಸಿಕ್ಕಿದೆ ಎಂದು ಪಲಸ್ (Pulas village) ಗ್ರಾಮದ ಪೋಷಕರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷ ಆನಂದಿ ಭೋಸಲೆ ಗಂಭೀರವಾಗಿ ಪರಿಗಣಿಸಿದ್ದಾರೆ. 

ಪ್ರಯೋಗಾಲಯಕ್ಕೆ ಆಹಾರ ಮಾದರಿ ರವಾನೆ

ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾಡಳಿತ, ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪಲಸ್ ಗ್ರಾಮದ ವ್ಯಾಪ್ತಿಯಲ್ಲಿ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿಗಳು ಸ್ಥಳೀಯರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. 

ಆಧಾರ್ ಕಾರ್ಡ್ ಫೋಟೋಗೆ ಪುಟ್ಟ ಮಗುವಿನ ಕ್ಯೂಟ್ ಫೋಸ್ ವಿಡಿಯೋ, ಸರ್ಕಾರಕ್ಕೆ ನೆಟ್ಟಿಗರ ಸಲಹೆ!

ಆರು ತಿಂಗಳಿನಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ದಾಲ್‌ ಕಿಚಡಿ ಆಹಾರದ ಪೊಟ್ಟಣವನ್ನು ಅಂಗನವಾಡಿ ಕಾರ್ಯಕರ್ತರ ಮೂಲಕ ವಿತರಣೆ ಮಾಡಲಾಗುತ್ತದೆ. ಸೋಮವಾರ ಸಹ ಪಲಸ್ ಗ್ರಾಮದಲ್ಲಿ ಆಹಾರದ ಪೊಟ್ಟಣಗಳನ್ನು ಕಾರ್ಯಕರ್ತೆಯರು ವಿತರಿಸಿದ್ದರು. ಪೋಷಕರೊಬ್ಬರು ಸತ್ತ ಹಾವು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಆಹಾರದ ಮಾದರಿಯನ್ನು ಸಂಗ್ರಹಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಆನಂದಿ ಭೋಸಲೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. 

ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಅಧಿವೇಶನದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ವಿಶ್ವಜೀತ್ ಕದಂ ಆಗ್ರಹಿಸಿದ್ದಾರೆ. ಮಧ್ಯಾಹ್ನದ ಊಟ ಯೋಜನೆಯಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತನಿಖೆಯ ಭಾಗವಾಗಿ ಅಧಿಕಾರಿಗಳು ಆಹಾರ ಪೂರೈಕೆ ಮಾಡುತ್ತಿದ್ದ ಗೋಡೌನ್‌ಗಳನ್ನು ಸೀಲ್ ಮಾಡಿದ್ದಾರೆ. ವಿತರಣೆಯ ಜವಾಬ್ದಾರಿ ತೆಗೆದುಕೊಂಡಿರುವ ಗುತ್ತಿಗೆದಾರರನ್ನು ಸಹ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. 

ಓದಿ ಏನು ಮಾಡೋದಿದೆ, ಪಾಸ್ ಅಗುವ ಆಸೆಯಿದೆ, ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದ ಕವನ ವೈರಲ್!

Latest Videos
Follow Us:
Download App:
  • android
  • ios