ಅಯೋಧ್ಯೆ(ಜು.27): ಶ್ರೀರಾಮ ಜನ್ಮಭೂಮಿಯ್ಲಲಿ ಮಂದಿರ ನಿರ್ಮಿಸಲು ದಿನಗಣನೆ ಆರಮಭವಾಗಿದೆ. ಭೂಮಿ ಪೂಜೆಗೆ ದಿನಾಂಕ ಹಾಗೂ ಸಮಯ ನಿಗಧಯಾಗಿದ್ದು, ಆಗಸ್ಟ್ 5ರಂದು ಪಿಎಂ ಮೋದಿಯೇ ಇದನ್ನು ನಡೆಸಲಿದ್ದಾರೆ. ಆದರೆ ಈ  ಕ್ಷಣಕ್ಕಾಗಿ ಮಂದಿರ ನಿರ್ಮಾಣಕ್ಕೆ ಸಂಭಂಧಿಸಿದವರು ದೀರ್ಘ ಕಾಲದ ಹೋರಾಟ ನಡೆಸಿದ್ದಾರೆ. ವರ್ಷಾನುಗಟ್ಟಲೇ ನ್ಯಾಯಾಲಯಕ್ಕೆ ಅಲೆದಾಡಿದ ಬಳಿಕ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ. 

ರಾಮಮಂದಿರ ದೇಣಿಗೆ ಸ್ವೀಕಾರಕ್ಕೆ ಧರ್ಮ ನೋಡಲ್ಲ: ಪೇಜಾವರ ಶ್ರೀ

ಆದರೀಗ ಭವಿಷ್ಯದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಬಾರದೆಂಬ ನಿಟ್ಟಿನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರ ನಿರ್ಮಿಸುವ ಸ್ಥಳದಲ್ಲಿ ಸುಮಾರು 2000 ಅಡಿ ಆಳದಲ್ಲಿ ಒಂದು ಟೈಂ ಕ್ಯಾಪ್ಸೂಲ್ ಇರಿಸಲಿದೆ. ಈ ಮೂಲಕ ಹಲವಾರು ವರ್ಷಗಳ ಬಳಿಕ ಯಾರಾದರೂ ಶ್ರೀರಾಮ ಜನ್ಮಭೂಮಿ ಕುರಿತು ತಿಳಿದುಕೊಳ್ಳಲು ಇಚ್ಛಿಸಿದರೆ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. 

ರಾಮಮಂದಿರ ನಿರ್ಮಾಣಕ್ಕೆ ಸಿದ್ಧಗಂಗಾ ಮಠದ ಮಣ್ಣು..!

ಭಾರೀ ವಿವಾದಗಳ ಬಳಿಕ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಇತಿಹಾಸ ಬಗ್ಗೆ ಭವಿಷ್ಯದಲ್ಲಿ ಮತ್ತೆ ಗೊಂದಲವೇರ್ಪಡಬಾರದೆಂಬ ನಿಟ್ಟಿನಲ್ಲಿ ಈ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ದೀರ್ಘ ಕಾಲದ ನ್ಯಾಯಾಂಗ ಹೋರಾಟದ ಬಳಿಕ ಈ ಟೈಂ ಕ್ಯಾಪ್ಸೂಲ್ ಇರಿಸಬೇಕೆಂಬ ಯೋಚನೆ ಟ್ರಸ್ಟ್‌ ಸದಸ್ಯರು ನಿರ್ಧರಿಸಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ವಿವಾದ ಹುಟ್ಟಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬುವುದು ಇವರ ಅಭಿಪ್ರಾಯವಾಗಿದೆ.