ಭೋಪಾಲ್(ಏ.12): ಕೊರೋನಾ ವೈರಸ್‌ ಬಾರದಿರಲೆಂದು ಎಲ್ಲರೂ ಮಾಸ್ಕ್‌ ಹಾಕಿಕೊಳ್ಳುತ್ತಿದ್ದಾರೆ. ಆದರೆ, ‘ಮಾಸ್ಕ್‌ ಹಾಕಿಕೊಳ್ಳುವ ಬದಲು ದೇವರ ಮೇಲೆ ನಂಬಿಕೆ ಇಡಿ. ಸಣ್ಣ ಬಟ್ಟೆಯ ತುಂಡಿನಿಂದ ಏನೂ ಆಗಲ್ಲ’ ಎಂದು ತಮಾಷೆಯ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಟಿಕ್‌ಟಾಕ್‌ ಸ್ಟಾರ್‌ವೊಬ್ಬ ಈ ತನ್ನ ತಪ್ಪಿಗೆ ಪರಿತಪಿಸುವಂತಾಗಿದೆ. ಏಕೆಂದರೆ, ಆತನಿಗೇ ಈಗ ಕೊರೋನಾ ಸೋಂಕು ತಗುಲಿದೆ.

ಜಬಲ್ಪುರದಲ್ಲಿರುವ ತನ್ನ ಸೋದರಿಯ ಮನೆಗೆ ಹೋಗಿದ್ದ ವೇಳೆ, ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ ವೇಳೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. 

ಆತ ಈಗ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಟಿಕ್‌ಟಾಕ್‌ ಮೂಲಕ ಮನವಿ ಮಾಡಿಕೊಂಡಿದ್ದಾನೆ.