ಭೋಪಾಲ್(ಜೂ.08)‌: ಎರಡು ವರ್ಷಗಳ ಹಿಂದೆ ಇಬ್ಬರನ್ನು ಕೊಂದ ತಪ್ಪಿಗೆ ಹುಲಿಯೊಂದನ್ನು ‘ಅಜೀವ ಶಿಕ್ಷೆ’ಗೆ ಗುರಿ ಪಡಿಸಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

2018ರಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಇಬ್ಬರನ್ನು ಕೊಂದಿದ್ದ ಹುಲಿ, ಮಧ್ಯಪ್ರದೇಶಕ್ಕೆ ಪ್ರವೇಶ ಮಾಡಿ, ಪದೇ ಪದೇ ಜನವಸತಿ ಪ್ರದೇಶಗಳಿಗೆ ಬರುತ್ತಿತ್ತು. ಶನಿವಾರ ಭೋಪಾಲ್‌ನ ಸರ್ಣಿ ಎಂಬ ಜನ ವಸತಿ ಪ್ರದೇಶಕ್ಕೆ ನುಗ್ಗಿದ್ದು, ಅರಣ್ಯಾಧಿಕಾರಿಗಳು ಅದನ್ನು ಹಿಡಿದು ಖನ್ನಾ ಹುಲಿ ರಕ್ಷಿತಾ ಅಭಯಾರಣ್ಯದಲ್ಲಿ ಇರಿಸಿದ್ದಾರೆ.

ಗದಗ ಮೃಗಾಲಯ: ಜೂ.8ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಬಳಿಕ ಅದನ್ನು ವನ ವಿಹಾರ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಿ ಅಜೀವ ಶಿಕ್ಷೆಗೆ ಒಳಪಡಿಸಿದ್ದಾರೆ. ಪದೇ ಪದೇ ಜನವಸತಿ ಪ್ರದೇಶಕ್ಕೆ ತೆರಳುವ ಅಭ್ಯಾಸ ಹೊಂದಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ವರ್ಗಾಯಿಸಲಾಗಿದೆ.