ಗದಗ ಮೃಗಾಲಯ: ಜೂ.8ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಗದಗ ಮೃಗಾಲಯದಲ್ಲಿ ಕೋವಿಡ್-19 ಸೋಂಕು ತಡೆಗೆ ಅಗತ್ಯ ಕ್ರಮ| ಸೋಮವಾರ ಜೂ.8 ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ|ಮೃಗಾಲಯದ ವೀಕ್ಷಣೆಗೆ ಆಗಮಿಸುವವರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿರಬೇಕು| ಕೈ ಸ್ವಚ್ಛತೆಗೆ ಸ್ಯಾನಿಟೈಜರ್ ಬಳಸಬೇಕು ಹಾಗೂ ಸದಾ ಕಾಲ ಸಾಮಾಜಿಕ ಅಂತರ ಕಾಪಾಡಬೇಕು|
ಗದಗ(ಜೂ.07): ಕೋವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧನದ ಅಂಗವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಗದಗ ಮೃಗಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ಮುಚ್ಚಲಾಗಿತ್ತು.
ಸರ್ಕಾರದ ನಿರ್ದೇಶನಗಳ ರೀತ್ಯ ಪ್ರತಿಬಂಧನ ಸಡಿಲಿಕೆ ಸನ್ನಿವೇಶದಲ್ಲಿ ಗದಗ ಮೃಗಾಲಯದಲ್ಲಿ ಕೋವಿಡ್-19 ಸೋಂಕು ತಡೆಗೆ ಅಗತ್ಯದ ಕ್ರಮಗಳನ್ನು ಕೈಕೊಂಡು ಸೋಮವಾರ ಜೂ.8 ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್ ಭದ್ರತೆ
ಮೃಗಾಲಯದ ವೀಕ್ಷಣೆಗೆ ಆಗಮಿಸುವವರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಕೈ ಸ್ವಚ್ಛತೆಗೆ ಸ್ಯಾನಿಟೈಜರ್ ಬಳಸಬೇಕು ಹಾಗೂ ಸದಾ ಕಾಲ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಗದಗ ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ.