ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುತ್ತಾ ಕೇಂದ್ರ?ಸಂಸತ್ತಿನಲ್ಲಿ ಉತ್ತರ ನೀಡಿದ ಬಿಜೆಪಿ ಸಚಿವ!
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ. ಆದರೆ ಗೋ ರಕ್ಷಣೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ಹುಲಿ ಬದಲು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡುತ್ತಾ? ಈ ಕುರಿತು ಪ್ರಶ್ನೆಗೆ ಕೇಂದ್ರ ಸಚಿವ ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ.
ನವದೆಹಲಿ(ಆ.07) ಬಿಜೆಪಿ ಸರ್ಕಾರ ಹಲವು ರಾಜ್ಯಗಳಲ್ಲಿ ಗೋ ರಕ್ಷಣೆ ಕಾಯ್ದೆ ಜಾರಿಗೊಳಿಸಿದೆ. ಇತ್ತ ಕೇಂದ್ರ ಬಿಜೆಪಿ ಸರ್ಕಾರ ಕೂಡ ಗೋಮಾತೆ ರಕ್ಷಣೆಯಲ್ಲಿ ಪ್ರಮುಖ ಕಾಳಜಿ ವಹಿಸುತ್ತಿದೆ. ಇದರ ನಡುವೆ ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಹುಲಿ ಬದಲು ಗೋವನ್ನು ಘೋಷಣೆ ಮಾಡುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕಿದೆಯಾ ಅನ್ನೋ ಪ್ರಶ್ನೆಯೊಂದು ಸಂಸತ್ತಿನಲ್ಲಿ ಎದ್ದಿತ್ತು. ಈ ಕುರಿತು ಉತ್ತರ ನೀಡಿದ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಹಾಗೂ ರಾಷ್ಟ್ರೀಯ ಪಕ್ಷಿ ನವಿಲು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2011ರಲ್ಲಿ ಹುಲಿ ಹಾಗೂ ನವಿಲನ್ನು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್(1972) ಶೆಡ್ಯೂಲ್ ಐನಲ್ಲಿ ಸೇರಿಸಲಾಗಿದೆ. ಈ ಮೂಲಕ ಹುಲಿ ಹಾಗೂ ನವಿಲು ಸಂರಕ್ಷಣೆಗೆ ವಿಶೇಷ ಅದ್ಯತೆ ನೀಡಲಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಕಲಾಪದ ವೇಳೆ ಅಜ್ಮೀರ್ ಸಂಸದ ಭಾಗೀರತ್ ಚೌಧರಿ ಈ ಕುರಿತು ಸಚಿವರನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವ ಯಾವುದೇ ಆಲೋಚನೆಗಳು ಇದೆಯಾ ಎಂದುು ಕೇಳಿದ್ದಾರೆ. ಈ ಪ್ರಶ್ನಗೆ ಲಿಖಿತ ಉತ್ತರ ನೀಡಿದ ಸಚಿವ ಕಿಶನ್ ರೆಡ್ಡಿ, 1972 ಕಾಯ್ಡೆಯಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೆಜಿಲ್‌ನಲ್ಲಿ 35 ಕೋಟಿಗೆ ಹರಾಜಾಯ್ತು ವಿಶ್ವದ ಅತ್ಯಂತ ದುಬಾರಿ ಹಸು, ಭಾರತಕ್ಕೂ ಹಸು ತಳಿಗೂ ಗತಕಾಲದ ಸಂಬಂಧ!
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ಪಕ್ಷಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವನ್ಯ ಜೀವಿಗಳ ಸಂರಕ್ಷಿಸಲು ಹಲವು ಯೋಜನೆಗಳಿವೆ. ಆದರೆ ಗೋಮಾತೆ ಸನಾತನ ಧರ್ಮದಲ್ಲಿ ಪ್ರಮುಖವಾಗಿದೆ. ಗೋಮಾತೆಯನ್ನು ಪೂಜಿಸಲಾಗುತ್ತದೆ. ದೇವರ ಸ್ವರೂಪದಲ್ಲಿ ಗೋಮಾತೆಯ ಪೂಜೆ ನಡೆಯುತ್ತದೆ. ಹೀಗಾಗಿ ಹಿಂದೂಗಳಿಗೆ ಗೋಮಾತೆ ಅತ್ಯಂತ ಶ್ರೇಷ್ಠ ಪ್ರಾಣಿಯಾಗಿದೆ. ಹೀಗಾಗಿ ಗೋಮಾತೆ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಗೋ ವಿಚಾರ ಭಾರಿ ಚರ್ಚೆಯಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ಗೋ ಹತ್ಯಾ ನಿಷೇಧ ಕಾಯ್ದೆ ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಹೇಳಿತ್ತು. ಈ ಕುರಿತು ಪ್ರತಿಭಟನೆಗಳು ನಡೆದಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ತಾಳುತ್ತಿದೆ ಅನ್ನೋ ಆರೋಪವೂ ಎದುರಾಗಿತ್ತು. ಈ ಬೆಳವಣಿಗೆ ಬಳಿಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದ್ದರು.
ಸ್ವದೇಶಿ ಗೋ ಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂ ನಕಾರ: ದೇಶೀಯ ಗೋತಳಿ ಉಳಿಸುವ ವಿಷಯ ನಿರ್ಣಯ ಶಾಸಕಾಂಗದ್ದು ಎಂದ ಕೋರ್ಟ್
ಗೋ ಹತ್ಯಾ ಕಾಯ್ದೆ ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವೆಂಕಟೇಶ್ ಸ್ಪಷ್ಟಪಡಿಸಿದ್ದರು. ಆದರೆ ದ್ವಂದ ಹೇಳಿಕೆಯಿಂದ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಸಚಿವರು ಮೈಸೂರಿನಲ್ಲಿ ಎಮ್ಮೆ, ಕುರಿ ಕೊಲ್ಲಬಹುದಾದರೆ ಗೋವುಗಳನ್ನು ಯಾಕೆ ಕೊಲ್ಲಬಾರದು ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಯ್ದೆಯನ್ನು ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.