Asianet Suvarna News Asianet Suvarna News

ತಾಯಿಯೊಂದಿಗೆ ಹುಲಿಮರಿಗಳ ಮುದ್ದಾದ ಆಟ : ವಿಡಿಯೋ ವೈರಲ್

  • ಬೆಂಗಾಲ್‌ ಸಫಾರಿ ಪಾರ್ಕ್‌ನಲ್ಲಿ ಅಪರೂಪದ ದೃಶ್ಯ ಸೆರೆ
  • ತಾಯಿಯೊಂದಿಗೆ ನಾಲ್ಕು ಮರಿ ಹುಲಿಗಳ ಆಟ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
tiger cubs plying their mother in Bengal Safari Park near Siliguri in West Bengal akb
Author
Siliguri, First Published May 9, 2022, 2:43 PM IST

ತಾಯಿಯೊಂದಿಗೆ ಹುಲಿಮರಿಗಳ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಾಲ್‌ ಸಫಾರಿ ಪಾರ್ಕ್‌ನಲ್ಲಿ ಸೆರೆಯಾದ ದೃಶ್ಯ ಇದಾಗಿದ್ದು, ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದೆ. ವಿಡಿಯೋದಲ್ಲಿ ಹುಲಿಮರಿಗಳು ಪರಸ್ಪರ ಮುದ್ದಾಡುತ್ತಾ ನೆಲದ ಮೇಲೆ ಮಲಗಿರುವ ತಮ್ಮ ತಾಯಿಯ ಮೇಲೆ ಬೀಳುವುದನ್ನು ಕಾಣಬಹುದು.

ಹೆತ್ತ ತಾಯಿಯೊಂದಿಗೆ ಸಮಯ ಕಳೆಯುವುದಕ್ಕೆ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಬಾಲ್ಯದ ದಿನಗಳಂತು ತಾಯಿ ಇಲ್ಲದೇ ಇರುವ ಕ್ಷಣವನ್ನು ನೆನೆಯಲು ಸಾಧ್ಯವಿಲ್ಲ. ಅಮ್ಮ ಮನೆಯಲ್ಲಿ ಇಲ್ಲ ಎಂದಾದರೆ ಅದು ಮನೆಯಲ್ಲ ಎಂಬ ಭಾವನೆ ಬಹುತೇಕರಲ್ಲಿರುತ್ತದೆ. ಹಾಗೆಯೇ ಪ್ರಾಣಿಗಳು ಕೂಡ ಅಮ್ಮನ ಪ್ರೀತಿ ತೋರುವುದರಲ್ಲಿ ಯಾವುದೇ ಕಡಿಮೆ ಮಾಡುವುದಿಲ್ಲ. ಅಮ್ಮನೊಂದಿಗಿನ ವಿನೋದ ವರ್ಣಿಸಲಸದಳ. ಹಾಗೆಯೇ ಇಲ್ಲೊಂದು ಕಡೆ ಹುಲಿಮರಿಗಳು ತಮ್ಮ ತಾಯಿಯೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 

 

ಪಶ್ಚಿಮ ಬಂಗಾಳದ (West Bengal)  ಸಿಲಿಗುರಿ (Siliguri) ಬಳಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ (Bengal Safari Park) ನಾಲ್ಕು ಹುಲಿ ಮರಿಗಳು ತಮ್ಮ ತಾಯಿಯೊಂದಿಗೆ ಮಾಡಿರುವ ಚೇಷ್ಟೆಗಳು ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿವೆ.ವಿಡಿಯೋದಲ್ಲಿ ಕಾಣುವಂತೆ ಎರಡು ಮರಿಗಳು ಪರಸ್ಪರ ಮುದ್ದಾಡುತ್ತಿರುವುದನ್ನು ನೋಡಬಹುದು. ಮತ್ತೊಂದು ಮರಿ ತಾಯಿಯ ಹತ್ತಿರ ಕುಳಿತಿದೆ. ಸ್ವಲ್ಪ ಸಮಯದ ನಂತರ, ಅವರು ನೆಲದ ಮೇಲೆ ಉರುಳುವ ತಾಯಿಯ ಮೇಲೆ ಹಾರುವುದನ್ನು ಕಾಣಬಹುದು. ಹುಲಿ ಮರಿಗಳು ಸಿಲಿಗುರಿಯ ಬಳಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ತಮ್ಮ ತಾಯಿ ಹುಲಿಯೊಂದಿಗೆ ಆಟವಾಡುತ್ತಾ ತಮ್ಮ ತಮ್ಮಲ್ಲೇ ಉಲ್ಲಾಸದಿಂದ ಕುಣಿದು ಕುಪ್ಪಳಿಸುತ್ತಿದ್ದವು. ತಾಯಿ ಹುಲಿ ಶೀಲಾ, ಉದ್ಯಾನವನದಲ್ಲಿರುವ ಏಕೈಕ ಹೆಣ್ಣು ಹುಲಿ ಎಂದು ಬರೆದು ಈ ವಿಡಿಯೋವನ್ನು ಎಎನ್ಐ ಪೋಸ್ಟ್ ಮಾಡಲಾಗಿದೆ.

ತಾಯಿಯನ್ನ ಹೆದರಿಸಿದ ಹುಲಿ ಮರಿ... ವಿಡಿಯೋ

ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಸೆರೆ ಹಿಡಿದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಹುಲಿ ಮರಿಗಳ ಈ ಆ ಮುದ್ದಾಗಿದೆ ಎಂದಿದ್ದಾರೆ. ಅವರು ಲವಲವಿಕೆಯಿಂದ ಆಡುವುದನ್ನು ನೋಡಲು ಸಂತೋಷವಾಗಿದೆ. ಈ ವೀಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಕ್ಕಾಗಿ ಉದ್ಯಾನವನದ ನಿರ್ವಹಣಾ ಸಿಬ್ಬಂದಿಗೆ ಅಭಿನಂದನೆಗಳು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Chikkamagaluru: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಘ್ರನ ದರ್ಶನ: ವಿಡಿಯೋ ವೈರಲ್‌
 

297 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಉತ್ತರ ಬಂಗಾಳದ ಸಿಲಿಗುರಿಯ (Siliguri) ವೈಲ್ಡ್ ಅನಿಮಲ್ಸ್ ಪಾರ್ಕ್ ಇತರ ಸಂಬಂಧಿತ ಹಲವು ಪ್ರಾಣಿ ಪ್ರಭೇದಗಳ ಜೊತೆಗೆ ಜೊತೆಗೆ ಅನೇಕ ಸಾಲ್ ಮರಗಳನ್ನು ಹೊಂದಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸಸ್ಯ ಸಫಾರಿ ಮತ್ತು ಉದ್ಯಾನದಲ್ಲಿ ಹುಲಿ ಸಫಾರಿಯನ್ನು (tiger safari) ಆನಂದಿಸಬಹುದು. ಈ ಹಿಂದೆ, ರಾಜಸ್ಥಾನದ (Rajasthan)  ಅಲ್ವಾರ್‌ನಲ್ಲಿರುವ (Alwar) ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Sariska Tiger Reserve) ಎರಡು ಹುಲಿಗಳು ಪರಸ್ಪರ ಮುದ್ದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
 

Follow Us:
Download App:
  • android
  • ios