ಹೌಸಿಂಗ್ ಸೊಸೈಟಿಯ ಕಬ್ಬಿಣದ ಗೇಟ್ ಆಕಸ್ಮಿಕವಾಗಿ ಬಿದ್ದು, ಮೂರುವರೆ ವರ್ಷದ ಮಗುವೊಂದು ಸಾವನ್ನಪ್ಪಿದ ಆಘಾತಕಾರಿ ಘಟನನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ನಡೆದಿದೆ. 

ಪುಣೆ: ಹೌಸಿಂಗ್ ಸೊಸೈಟಿಯ ಕಬ್ಬಿಣದ ಗೇಟ್ ಆಕಸ್ಮಿಕವಾಗಿ ಬಿದ್ದು, ಮೂರುವರೆ ವರ್ಷದ ಮಗುವೊಂದು ಸಾವನ್ನಪ್ಪಿದ ಆಘಾತಕಾರಿ ಘಟನನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ನಡೆದಿದೆ. ಬಾಲಕಿ ತನ್ನಗಿಂತ ದೊಡ್ಡ ಇತರ ಮಕ್ಕಳೊಂದಿಗೆ ಆಟಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಭಯಾನಕ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಈ ಗೇಟಿನ ಸಮೀಪದಲ್ಲೇ ಇಬ್ಬರು ಮಕ್ಕಳು ತಮ್ಮ ಸೈಕಲ್‌ನಲ್ಲಿ ಆಟವಾಡುತ್ತಿದ್ದಾರೆ. ಈ ವೇಳೆ ಬಾಲಕನೋರ್ವ,ಈ ಗೇಟನ್ನು ಎಳೆದು ಒಪನ್ ಮಾಡುತ್ತಾನೆ. ಮತ್ತೊಬ್ಬ ಬಾಲಕ ಆಗ ಸೈಕಲ್‌ನಲ್ಲಿ ಒಳಗೆ ಹೋಗುತ್ತಾನೆ. ಇದಾದ ನಂತರ ಬಾಲಕ ಈ ಗೇಟನ್ನು ಎಳೆದು ಹಾಕಲು ಮುಂದಾಗುವ ವೇಳೆ ಗೇಟ್‌ ಫಿಕ್ಸ್ ಆಗಿದ್ದ ಗ್ರಿಲ್‌ನಿಂದ ಜಾರಿದೆ ಅದೇ ವೇಳೆಗೆ ಸರಿಯಾಗಿ ಅಲ್ಲಿ ಮೂರುವರೆ ವರ್ಷದ ಮಗು ಹಾಗೂ ಆಕೆಯ ಅಕ್ಕ ಬಂದಿದ್ದು, ಪುಟ್ಟ ಮಗುವಿನ ಮೇಲೆ ಗೇಟ್ ಬಿದ್ದಿದ್ದರೆ. ಬಾಲಕಿ ಸ್ವಲ್ಪದರಲ್ಲೇ ದುರಂತದಿಂದ ಪಾರಾಗಿದ್ದಾಳೆ. ಅಲ್ಲದೇ ಆ ಹಿರಿಯ ಬಾಲಕಿ ಹಾಗೂ ಇನ್ನೋರ್ವ ಹುಡುಗ ಓಡಿ ಹೋಗಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಗೇಟನ್ನು ಪಕ್ಕಕ್ಕೆ ಸರಿಸಿ ಗೇಟ್‌ನ ಕೆಳಗೆ ಸಿಲುಕಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ಕೆಲ ಕ್ಷಣಗಳಲ್ಲಿ ಈ ದುರಂತ ನಡೆದು ಹೋಗಿದ್ದು, ದೃಶ್ಯ ಭಯ ಬೀಳಿಸುವಂತಿದೆ. ಈ ಗೇಟ್ ಕಬ್ಬಿಣದ ಟ್ರ್ಯಾಕ್ ಮೂಲಕ ಒಳಗೆ ಹೊರಗೆ ಚಲಿಸುವ ಗೇಟ್ ಆಗಿದ್ದು, ಬಾಲಕ ಗೇಟ್ ಹಾಕಲು ಎಳೆಯುತ್ತಿದ್ದ ವೇಳೆ ಈ ಕಬ್ಬಿಣದ ಗೇಟ್ ಟ್ರ್ಯಾಕ್‌ನಿಂದ ಜಾರಿ ಕೆಳಗೆ ಮಗುಚಿದ ಪರಿಣಾಮ ಈ ದುರಂತ ಸಂಭವಿಸಿದೆ.

ತಾಯಿ ಮಗನ ಬಲಿ ಪಡೆದ ತೆರೆದ ಚರಂಡಿ : ಮಗನ ಕೈ ಹಿಡಿದುಕೊಂಡ ಸ್ಥಿತಿಯಲ್ಲೇ ತಾಯಿ ಶವಪತ್ತೆ

ಪಿಂಪ್ರಿ ಚಿಂಚವಾಡದ ಗಣೇಶನಗರದ ಬೊಪ್ಕೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ಮೃತ ಮಗುವನ್ನು ಗಿರಿಜಾ ಶಿಂಧೆ ಎಂದು ಗುರುತಿಸಲಾಗಿದೆ. ಪೊಲೀಸರು ಹೇಳುವ ಪ್ರಕಾರ ಗೇಟ್ ಪಕ್ಕದಲ್ಲಿ ಗಿರಿಜಾ ಆಟವಾಡುತ್ತಿರುವಾಗ ಬಾಲಕನೋರ್ವ ಈ ಗೇಟನ್ನು ಹಾಕಲು ಯತ್ನಿಸಿದ್ದಾನೆ ಈ ವೇಳೆ ಗೇಟ್ ಟ್ರ್ಯಾಕ್‌ನಿಂದ ಜಾರಿ ಬಾಲಕಿ ಮೇಲೆ ಬಿದ್ದಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಬಾಲಕಿ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ದೇಘಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಈ ಗೇಟ್‌ 100 ಕೇಜಿಗೂ ಅಧಿಕ ಭಾರವಿರಬಹುದು. ಬಾಲಕಿ ಅದರತ್ತ ಸಮೀಪಿಸುತ್ತಲೇ ಗೇಟ್ ಕುಸಿದು ಆಕೆಯ ಮೇಲೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ. 

ಅಜ್ಜಿಯ ಮದ್ಯವನ್ನು ನೀರೆಂದು ಕುಡಿದು ಉಸಿರು ಚೆಲ್ಲಿದ ಮೂರರ ಕಂದಮ್ಮ!

ಭಯಾನಕ ದೃಶ್ಯಾವಳಿ ಇಲ್ಲಿದೆ ನೋಡಿ

Scroll to load tweet…