ಗೂಗಲ್‌ನ ಮೂವರು ಭಾರತೀಯ-ಅಮೆರಿಕನ್ ಸಿಇಒಗಳು ಸ್ಟೀರಿಂಗ್ ಕಮಿಟಿಗೆ ಸೇರ್ಪಡೆ | ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ಕಾರ್ಪೊರೇಟ್ ಶಕ್ತಿ

ದೆಹಲಿ(ಮೇ.07): ಗೂಗಲ್‌ನ ಮೂವರು ಭಾರತೀಯ-ಅಮೆರಿಕನ್ ಸಿಇಒಗಳು ಸುಂದರ್ ಪಿಚೈ, ಡೆಲಾಯ್ಟ್‌ನ ಪುನಿತ್ ರೆಂಜನ್ ಮತ್ತು ಅಡೋಬ್‌ನ ಶಾಂತನು ನಾರಾಯೆನ್ ಅವರು ಕೊರೋನಾ ಕುರಿತು ಜಾಗತಿಕ ಕಾರ್ಯಪಡೆಯ ಸ್ಟೀರಿಂಗ್ ಕಮಿಟಿಗೆ ಸೇರಿದ್ದಾರೆ.

ಇದು ಭಾರತಕ್ಕೆ COVID-19 ಅನ್ನು ಯಶಸ್ವಿಯಾಗಿ ಹೋರಾಡಲು ಸಹಾಯ ಮಾಡುವ ಅಭೂತಪೂರ್ವ ಕಾರ್ಪೊರೇಟ್ ವಲಯದ ಉಪಕ್ರಮವನ್ನು ಪ್ರತಿಬಿಂಬಿಸುತ್ತಿದೆ. ಮೇ 6 ರಂದು ಮೂವರು ಸಿಇಒಗಳ ಹೆಸರನ್ನು ಸ್ಟೀರಿಂಗ್ ಸಮಿತಿಯ ಪಟ್ಟಿಗೆ ಸೇರಿಸಲಾಗಿದೆ.

ಸಿಇಒಗಳು ಭಾರತದಲ್ಲಿನ ಕೊರೋನಾ ಬಿಕ್ಕಟ್ಟಿನ ಬಗ್ಗೆ ಯು.ಎಸ್. ಕಂಪನಿಗಳ ಪ್ರತಿಕ್ರಿಯೆಯನ್ನು ಸಂಘಟಿಸುವಲ್ಲಿ ಸಕ್ರಿಯರಾಗಿದ್ದಾರೆ. ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್; ಬಿಸಿನೆಸ್ ರೌಂಡ್‌ಟೇಬಲ್ ಅಧ್ಯಕ್ಷ ಮತ್ತು ಸಿಇಒ ಜೋಶುವಾ ಬೋಲ್ಟನ್, ಯು.ಎಸ್. ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸು ಝೇನ್ ಕ್ಲಾರ್ಕ್ ಮೇ 6 ರಂದು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ

ಯು.ಎಸ್. ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಪಡೆಯು ರೂಪುಗೊಂಡಿದೆ. ಭಾರತದಲ್ಲಿನ COVID-19 ಉಲ್ಬಣವನ್ನು ಪರಿಹರಿಸಲು ಸಹಾಯ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಇದು ಚೇಂಬರ್‌ನ ಅಮೆರಿಕ- ಭಾರತ ಬಿಸಿನೆಸ್ ಕೌನ್ಸಿಲ್ ಮತ್ತು ಅಮೆರಿಕ- ಭಾರತ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಯು.ಎಸ್. ಕಾರ್ಪೊರೇಟ್ ವಲಯವು ಇಲ್ಲಿಯವರೆಗೆ ಭಾರತಕ್ಕಾಗಿ 25,000 ಕ್ಕೂ ಹೆಚ್ಚು ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದೆ. ಡೆಲಾಯ್ಟ್ ಒದಗಿಸಿದ ಮೊದಲ 1,000 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳು ಫೆಡ್ಎಕ್ಸ್‌ನ ನಿರ್ಣಾಯಕ ವ್ಯವಸ್ಥಾಪನಾ ಬೆಂಬಲದೊಂದಿಗೆ ಏಪ್ರಿಲ್ 25 ರಂದು ಭಾರತಕ್ಕೆ ತಲುಪಿವೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona