Asianet Suvarna News Asianet Suvarna News

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ | ಮೋದಿ ವೈಫಲ್ಯದಿಂದ ದೇಶವೇ ಲಾಕ್‌ಡೌನ್‌ನತ್ತ

Failure of PM zero strategy of Centre pushing India towards complete lockdown says Rahul Gandhi dpl
Author
Bangalore, First Published May 7, 2021, 12:45 PM IST

ದೆಹಲಿ(ಮೇ.07): ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ ಮತ್ತು ಕೇಂದ್ರದ ಶೂನ್ಯ ಕಾರ್ಯತಂತ್ರವು ದೇಶವನ್ನು ಸಂಪೂರ್ಣ ಲಾಕ್‌ಡೌನ್‌ನತ್ತ ತಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನಾನು ಸಂಪೂರ್ಣ ಲಾಕ್ ಡೌನ್ ವಿರೋಧಿಸುತ್ತೇನೆ ಎಂದ ಅವರು ಬಡವರಿಗೆ ಆರ್ಥಿಕ ಪ್ಯಾಕೇಜ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷದ ಸಡನ್ ಲಾಕ್‌ಡೌನ್ ಜನರ ಮೇಲೆ ಭಾರೀ ಪರಿಣಾಮ ಬೀರಿತ್ತು. ಅದಕ್ಕಾಗಿಯೇ ನಾನು ಸಂಪೂರ್ಣ ಲಾಕ್‌ಡೌನ್‌ ವಿರೋಧಿಸುತ್ತೇನೆ ಎಂದಿದ್ದಾರೆ.

ಆದರೆ ಪ್ರಧಾನ ಮಂತ್ರಿಯ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಶೂನ್ಯ ಕಾರ್ಯತಂತ್ರವು ದೇಶವನ್ನು ಸಂಪೂರ್ಣ ಲಾಕ್‌ ಮಾಡುವತ್ತ ತಳ್ಳುತ್ತಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಮಾತುಕತೆ ಸಾಕು, ದೇಶದ ಎಲ್ಲರಿಗೂ ಲಸಿಕೆ ಮೊದಲು ಬೇಕು

ಅಂತಹ ಪರಿಸ್ಥಿತಿಯಲ್ಲಿ, ಬಡ ಜನರಿಗೆ ತಕ್ಷಣವೇ ಹಣಕಾಸಿನ ಪ್ಯಾಕೇಜ್ ಮತ್ತು ಎಲ್ಲಾ ರೀತಿಯ ಸಹಾಯವನ್ನು ನೀಡುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಚುನಾವಣೆ ಮುಗಿದಿದೆ, ಮತ್ತೆ ಲೂಟಿ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರು ಬಡವರಿಗೆ ಹಣಕಾಸಿನ ಪ್ಯಾಕೇಜ್ ನೀಡುವಂತೆ ಕರೆ ನೀಡುತ್ತಿದ್ದು, ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು 6,000 ರೂ.ಗಳನ್ನು ಬಡಜನರ ಖಾತೆಗಳಿಗೆ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ. ಒಟ್ಟು ಲಾಕ್‌ಡೌನ್ ಹೇರುವುದು ಪ್ರಸ್ತುತ ಪರಿಸ್ಥಿತಿಯಲ್ಲಿರುವ ಏಕೈಕ ಪರಿಹಾರ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ದಾಖಲೆಯ 4.12 ಲಕ್ಷ ಪ್ರಕರಣ ಮತ್ತು ಸುಮಾರು 4,000 ಸಾವು ಸಂಭವಿಸಿದೆ. ಹೆಚ್ಚಿನ ರಾಜ್ಯಗಳು ನಿರ್ಬಂಧಗಳನ್ನು ವಿಧಿಸಿ, ಲಾಕ್ ಡೌನ್ ಮಾಡಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios