ನೂಪುರ್ ಶರ್ಮ ವಿರುದ್ಧ ಸೇಡು ತೀರಿಸಿಕೊಳ್ತೇವೆ, ಅಲ್‌ಖೈದಾ ನೇರ ಎಚ್ಚರಿಕೆ!
ಭಯೋತ್ಪಾದಕ ಸಂಘಟನೆ ಅಲ್ ಖೈದಾ ಮತ್ತೊಮ್ಮೆ ಭಾರತೀಯ ಮುಸ್ಲೀಮರನ್ನು ಪ್ರಚೋದಿಸುವ ಕೆಲಸ ಮಾಡಿದೆ. ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮ ಅವರು ನೀಡಿದ್ದ ಹೇಳಿಕೆಗೆ ಭಾರತದ ಮುಸ್ಲೀಮರು ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಹೇಳಿದೆ.
ನವದೆಹಲಿ (ಅ.16): ಭಯೋತ್ಪಾದಕ ಸಂಘಟನೆ ಅಲ್ ಖೈದಾ ತನ್ನ ಪ್ರಚಾರ ನಿಯತಕಾಲಿಕೆ 'ನವೈ ಘಜ್ವಾ-ಎ-ಹಿಂದ್' ನಲ್ಲಿ ಮತ್ತೊಮ್ಮೆ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿದೆ. ಇದರಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಬಗ್ಗೆ ವಿಷಪೂರಿತ ಹೇಳಿಕೆಗಳನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತಾಗಿ ನೂಪುರ್ ಶರ್ಮಾ ಅವರು ಮಾಡಿದ್ದ ಟೀಕೆಗಳಿಗೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳವಂತೆ ಹೇಳಲಾಗಿದೆ. ನೂಪುರ್ ಶರ್ಮಾ ಧರ್ಮನಿಂದನೆ ಮಾಡಿದ್ದಾಳೆ, ಆಕೆಗೆ ಶಿಕ್ಷೆಯಾಗಬೇಕು ಎಂದು ಅಲ್ ಖೈದಾ ಹೇಳಿದೆ. ಇದಕ್ಕಾಗಿ ಮುಸ್ಲಿಮರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರೇರೇಪಿಸಿದೆ.. ಅಲ್ ಖೈದಾ ಮುಸ್ಲಿಮರನ್ನು ಜಿಹಾದ್ ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಳ್ಳುವಂತೆ ಹೇಳಿದೆ. ಅದರೊಂದಿಗೆ ಕಾಶ್ಮೀರದಲ್ಲಿ ಜಿಹಾದ್ ನಡೆಸುವ ಅಂಶವನ್ನೂ ಕೂಡ ಅಲ್‌ಖೈದಾ ಪುನರುಚ್ಚರಿಸಿದೆ. ಈ ಹಿಂದೆ ದೆಹಲಿ, ಮುಂಬೈ, ಯುಪಿ ಮತ್ತು ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿತ್ತು. ಅಲ್‌ಖೈದಾ ನೀಡಿದ ಈ ಬೆದರಿಕೆ ಬಳಿಕ, ಗುಪ್ತಚರ ಇಲಾಖೆಯು ನೂಪುರ್ ಶರ್ಮ ಅವರ ಮೇಲಿನ ಭದ್ರತೆಯನ್ನು ಹೆಚ್ಚಳ ಮಾಡಿದ್ದವು. ಪ್ರಸ್ತುತ ನೂಪುರ್ ಶರ್ಮ ಅವರಿಗೆ ಗುಪ್ತ ಸ್ಥಳದಲ್ಲಿ ಪೊಲೀಸ್ ಭದ್ರತೆಯಲ್ಲಿದ್ದಾರೆ. ಇತ್ತೀಚಿನ ಜೀವ ಬೆದರಿಕೆಯ ಪ್ರಕರಣಗಳ ಬಳಿಕ ಸರ್ಕಾರ, ಆಕೆಗೆ ನೀಡಲಾಗಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಿದೆ.
ಜೂನ್ 6 ರಂದು ಪ್ರಕಟವಾದ ವರದಿ: ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್, ನೂಪುರ್ ಶರ್ಮ ವಿರುದ್ಧ ದಾಖಲಾದ ಎಲ್ಲಾ ಕೇಸ್‌ಗಳನ್ನು ಕ್ಲಬ್ ಮಾಡಿ ದೆಹಲಿಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿತ್ತು. ಆಕೆಯ ಜೀವಕ್ಕೆ ಗಂಭೀರವಾದ ಅಪಾಯವಿದೆ. ಆಕೆ ನಿರಾತಂಕವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಆ ಕಾರಣದಿಂದಾಗಿ ದೇಶದಾದ್ಯಂತ ಆಕೆಯ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು. ದೆಹಲಿ ಪೊಲೀಸ್ ಇದರ ವಿಚಾರಣೆ ನಡೆಸಲಿದೆ ಎಂದು ಹೇಳಿತ್ತು. ಅದಲ್ಲದೆ, ಆಕೆಯ ವಿರುದ್ಧ ಪೊಲೀಸ್ ತನಿಖೆ ಅಂತ್ಯವಾಗುವವರೆಗೂ ಯಾವುದೇ ಕಾರಣಕ್ಕೂ ಆಕೆಯನ್ನು ಬಂಧಿಸುವಂತಿಲ್ಲ ಎಂದಿತ್ತು. ಇದು 2022ರ ಜೂನ್ 6 ರಂದು ಪ್ರಕಟವಾದ ನಿಯತಕಾಲಿಕೆಯಲ್ಲಿ ವರದಿಯಲ್ಲಿ ಬರೆದ ವಿಚಾರವಾಗಿದೆ.
ಆಕೆಯನ್ನು ಛಿದ್ರ ಮಾಡ್ತೇವೆ: ಕೆಲವು ದಿನಗಳ ಹಿಂದೆ ಟಿವಿ ಚರ್ಚೆಯ ಸಂದರ್ಭದಲ್ಲಿ ಹಿಂದುತ್ವವಾದಿಯೊಬ್ಬರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಅಲ್-ಖೈದಾ ಜೂನ್‌ನಲ್ಲಿ ಹೇಳಿತ್ತು. ಅವರ ಹೇಳಿಕೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿವೆ. ಮುಂದೆ ನಾವು ಪ್ರವಾದಿಯವರ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅಲ್ ಖೈದಾ ಹೇಳಿದೆ. ನಾವು ನಮ್ಮ ದೇಹ ಅಥವಾ ನಮ್ಮ ಮಕ್ಕಳ ದೇಹಕ್ಕೆ ಸ್ಪೋಟಕಗಳನ್ನು ಕಟ್ಟಿಕೊಂಡು ಇಂಥ ವ್ಯಕ್ತಿಗಳು ಛಿದ್ರಛಿದ್ರವಾಗುವಂತೆ ನೋಡಿಕೊಳ್ಳುತ್ತೇವೆ. ದೆಹಲಿ, ಮುಂಬೈ, ಯುಪಿ ಮತ್ತು ಗುಜರಾತ್‌ನಲ್ಲಿ ಕೇಸರಿ ಕಾರ್ಯಕರ್ತರನ್ನು ಕೊನೆ ಮಾಡುತ್ತೇವೆ. ಅವರು ತಮ್ಮ ಮನೆಯಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲ ಅಥವಾ ಸೈನ್ಯವು ಕೂಡ ಅವನನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಅಲ್‌ಖೈದಾ ತನ್ನ ನಿಯತಕಾಲಿಕೆಯಲ್ಲಿ ಬರೆದಿದೆ.
ನೂಪುರ್ ಶರ್ಮಾ ಹತ್ಯೆಗೆ ಆಗಮಿಸಿದ ಪಾಕ್ ಭಯೋತ್ಪಾದನಾ ಸಂಘಟನೆ ಉಗ್ರನ ಬಂಧಿಸಿದ ATS!
ನದೀಂನನ್ನು ಬಂಧಿಸಿದ್ದ ಎಟಿಎಸ್: ಜೈಶ್ ಎ ಮೊಹಮದ್ ಹಾಗೂ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಶಂಕಿತ ಭಯೋತ್ಪಾದಕ ಮೊಹಮದ್ ನದೀಂನನ್ನು ಉತ್ತರ ಪ್ರದೇಶ ಎಟಿಎಸ್ ಬಂಧಿಸಿತ್ತು. ಉತ್ತರ ಪ್ರದೇಶದ ಶಹ್ರಾನ್‌ಪುರದಲ್ಲಿ ಬಂಧಿಸಲಾಗಿದ್ದ ನದೀಂನ ವಿಚಾರಣೆ ನಡೆಸಿದ್ದ ವೇಳೆ ಆತನಿಗೆ ನೂಪುರ್ ಶರ್ಮರನ್ನು ಹತ್ಯೆ ಮಾಡುವ ಟಾಸ್ಕ್‌ಅನ್ನು ಜೈಶ್ ಎ ಮೊಹಮದ್ ಸಂಘಟನೆ ನೀಡಿದ್ದು ಬೆಳಕಿಗೆ ಬಂದಿತ್ತು.
ನೂಪುರ್ ಶರ್ಮಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!
ಇನ್ನು ನೂಪುರ್ ಶರ್ಮ ಅವರನ್ನು ಬೆಂಬಲಿಸಿದರು ಎನ್ನುವ ಕಾರಣಕ್ಕಾಗಿ ದೇಶದಲ್ಲಿ ಈಗಾಗಲೇ ಸಾಕಷ್ಟು ಕೊಲೆಗಳನ್ನು ನಡೆದಿವೆ. ರಾಜಸ್ಥಾನದ ಉದಯ್‌ಪುರದಲ್ಲಿ ಕನ್ಹಯ್ಯಲಾಲ್ ಎನ್ನುವ ಟೈಲರ್‌ಅನ್ನು ಈ ವೇಳೆ ಇಸ್ಲಾಂ ಮೂಲಭೂತವಾದಿಗಳು ಹತ್ಯೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಉಮೇಶ್ ಕೊಲ್ಲೆ ಅವರನ್ನು ಹತ್ಯೆ ಮಾಡಿದ್ದರು. ಉಳಿದಂತೆ ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಹಲ್ಲೆಯಂಥ ಪ್ರಕರಣಗಳು ನಡೆದಿದ್ದವು.