Asianet Suvarna News Asianet Suvarna News

ಚೀನಾದ ಕೆಲವೆಡೆ ಮತ್ತೆ ಲಾಕ್‌ಡೌನ್‌: ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್‌ ಕೇಸ್‌!

* ಚೀನಾದಲ್ಲಿ ಹೆಚ್ಚಾಗುತ್ತಿವೆ ಕೊರೋನಾ ಪ್ರಕರಣಗಳು

* ಆಯ್ದ ಪ್ರದೇಶಗಳಲ್ಲಿ ಪೂರ್ಣ ಲಾಕ್ಡೌನ್‌ ಜೊತೆಗೆ ಹಲವು ಕಠಿಣ ಕ್ರಮ

Thousands under lockdown as China moves to curb latest Covid outbreak in city bordering Mongolia pod
Author
Bangalore, First Published Oct 26, 2021, 9:29 AM IST
  • Facebook
  • Twitter
  • Whatsapp

ಬೀಜಿಂಗ್‌(ಅ.26): ದೇಶದಲ್ಲಿ ಮತ್ತೆ ಹೊಸ ಕೋವಿಡ್‌ ಪ್ರಕರಣಗಳು(Covid 19) ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ(China Govt), ಆಯ್ದ ಪ್ರದೇಶಗಳಲ್ಲಿ ಪೂರ್ಣ ಲಾಕ್ಡೌನ್‌(Lockdown) ಜೊತೆಗೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಚೀನಾದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಹಾಗೂ ಸಾಂಕ್ರಾಮಿಕಕ್ಕೆ ಒಳಗಾಗುವ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಚೀನಾದ ಇನ್ನರ್‌ ಮಂಗೋಲಿಯಾದಲ್ಲಿರುವ ಎಜಿನ್‌ ಕೌಂಟಿ ಹೊಸ ಕೋವಿಡ್‌ ಹಾಟ್‌ಸ್ಪಾಟ್‌ ಆಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಜಾರಿಗೆ ಬರುವಂತೆ ಇಡೀ ಕೌಂಟಿಯಲ್ಲಿ ಲಾಕ್ಡೌನ್‌ ಘೋಷಿಸಲಾಗಿದೆ. ಜನತೆ ಮನೆ ಬಿಟ್ಟು ಹೊರಗೆ ಬರಕೂಡದು ಎಂದು ಸರ್ಕಾರ ಆದೇಶಿಸಿದೆ. ನಿಯಮ ಉಲ್ಲಂಘಿಸಿದವರು ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ(Criminal Case) ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

"

ಈ ನಡುವೆ ವಿದೇಶ ಪ್ರವಾಸದಿಂದಾಗಿ ಪ್ರಸ್ತುತ ಚೀನಾದಲ್ಲಿ ಡೆಲ್ಟಾರೂಪಾಂತರಿಗಳಿಂದ ಸೋಂಕು ಉಲ್ಬಣಿಸುತ್ತಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅ.17ರ ಬಳಿಕ 11 ಪ್ರಾಂತ್ಯಗಳಿಗೆ ಹೊಸದಾಗಿ ಸೋಂಕು ಹಬ್ಬಿದೆ. ಇಲ್ಲಿ ಸೋಂಕಿಗೆ ಒಳಗಾಗಿರುವವರು ಬಹುತೇಕ ವಿದೇಶ ಪ್ರವಾಸ ಮಾಡಿದವರು. ಸಾಂಕ್ರಾಮಿಕದ ಭೀತಿ ಹೆಚ್ಚುತ್ತಿರುವುದರಿಂದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರ ಮಿ.ಫೆಂಗ್‌ ಹೇಳಿದ್ದಾರೆ. ಈಗಾಗಲೇ ಗನ್ಸು, ಇನ್ನರ್‌ ಮಂಗೋಲಿಯಾ ಪ್ರಾಂತ್ಯಗಳು ಟ್ಯಾಕ್ಸಿ ಮತ್ತು ಬಸ್‌ ಸೇವೆಯನ್ನು ನಿಲ್ಲಿಸಿವೆ.

3 ವರ್ಷದ ಮಕ್ಕಳಿಗೂ ಲಸಿಕೆ

3 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಚೀನಾ ಸರ್ಕಾರ ನಿರ್ಧರಿಸಿದೆ. ಮಕ್ಕಳಿಗೂ ಸೋಂಕು ಹಬ್ಬದಂತೆ ತಡೆಯಲು ಸ್ಥಳೀಯ ನಗರ ಮತ್ತು ಪ್ರಾಂತೀಯ ಮಟ್ಟದ ಆಡಳಿತವು 3-11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದು ಅಗತ್ಯವೆಂದು ಸರ್ಕಾರ ಸೂಚಿಸಿವೆ. ಚೀನಾ, ಜೂನ್‌ನಲ್ಲಿ 3-17 ವರ್ಷದವರಿಗಾಗಿ ಸಿನೋಫಾರ್ಮಾ ಹಾಗೂ ಸಿನೋವ್ಯಾಕ್‌ ಲಸಿಕೆಗಳಿಗೆ ಅನುಮೋದನೆ ನೀಡಿತ್ತು. ಆದರೆ 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು.

ಚೀನಾ ಸರ್ಕಾರದ ಅಂಕಿ ಅಂಶಗಳ ಅನ್ವಯ ಇದುವರೆಗೂ ದೇಶದಲ್ಲಿ 96797 ಜನರಿಗೆ ಸೋಂಕು ತಗುಲಿದೆ, 4636 ಜನರು ಸಾವನ್ನಪ್ಪಿದ್ದಾರೆ, 573 ಸಕ್ರಿಯ ಕೇಸುಗಳಿವೆ.

Follow Us:
Download App:
  • android
  • ios