ಪಂಜಾಬ್(ಜ.30):  ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್ ಹಾಗೂ ಹರ್ಯಾಣ ಭಾಗದ ರೈತರು ಪಾಲ್ಗೊಂಡು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪಂಜಾಬ್ ಹಾಗೂ ಹರ್ಯಾಣದಿಂದ ಸಾವಿರ ಸಾವಿರ ಮಂದಿ ಪ್ರತಿಭಟನೆಯಲ್ಲಿ ಕಳೆದೆರಡು ತಿಂಗಳಿನಿಂದ ಪಾಲ್ಗೊಂಡಿದ್ದಾರೆ. ಆದರೆ ಪಂಜಾಬ್‌ನಿಂದ ರೈತರು ಈ ಪ್ರತಿಭಟೆಯತ್ತ ಮುಖ ಮಾಡಿದ್ದು ಹೇಗೆ ಅನ್ನೋದನ್ನು ಸ್ವತಃ ಪಂಜಾಬ್ ಹಳ್ಳಿಯ ರೈತರು ಬಹಿರಂಗ ಪಡಿಸಿದ್ದಾರೆ.

ಬಿಜೆಪಿ ಶಾಸಕನ ಕೊನೇ ಕ್ಷಣದ ನಡೆ, ಸೈಲೆಂಟ್ ಆಗಿದ್ದ ರೈತರು ವೈಲೆಂಟ್ ಆಗಲು ಅಸಲಿ ಕಾರಣ!.

ಪಂಜಾಬ್‌ನ ಭತಿಂದ ಗ್ರಾಮಪಂಚಾಯತ್ ಕಟ್ಟು ನಿಟ್ಟಿನ ಸೂಚನೆ ನೀಡಿದೆ.  ವಿರ್ಕ್ ಕುರ್ದ್ ಗ್ರಾಮಪಂಚಾಯತ್‌ ವ್ಯಾಪ್ತಿಯ ಸರ್ಪಂಚ್ ಮಂಜಿತ್ ಕೌರ್ ಇದೀಗ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಪ್ರತಿ ಮನೆಯಿಂದ ಕನಿಷ್ಠ ಒಬ್ಬರನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸೂಚಿಸಿದ್ದಾರೆ.

ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!

ಯಾರಾದರೂ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ, 1,500 ರೂಪಾಯಿ ದಂಡದ ರೂಪದಲ್ಲಿ ನೀಡಬೇಕು. ಇನ್ನು ದಂಡ ನೀಡಲು ಸಾಧ್ಯವಾಗದಿದ್ದರೆ, ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ ಎಂದು ಮಂಜಿತ್ ಕೌರ್ ಹೇಳಿದ್ದಾರೆ.

 

ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಪ್ರತಿಮನೆಯಿಂದ ಒಬ್ಬೊಬ್ಬರು ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದ್ದರು. ಈ ಸೂಚನೆ ಬಳಿಕ ಪಂಜಾಬ್ ಹಳ್ಳಿ ಹಳ್ಳಿಗಳ ಗ್ರಾಮ ಪಂಚಾಯತ್‌ನಲ್ಲಿ ಈ ಸೂಚನೆ ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.