ನವದೆಹಲಿ(ಜ.30) ಗಾಜಿಯಾಬಾದ್‌ನ ಲೋನಿ ಕ್ಷೇತ್ರದ ಶಾಸಕ ನಂದ್ ಕಿಶೋರ್ ಗುರ್ಜರ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಹೌದು ರೈತರು ಪ್ರತಿಭಟನೆಯನ್ನು ನಿಲ್ಲಿಸಿ, ಜಾಗ ಖಾಲಿ ಮಾಡಲು ಸಜ್ಜಾಗಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ್ದ ಕಿಶೋರ್ ಗುರ್ಜರ್ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಕೂಡಾ ಅವರ ವಿರುದ್ಧ ಗಂಭೀರ ಆರೋಪ ಮಾಡುತ್ತಾ ಶಾಸಕರು ಆಡಳಿತಾಧಿಕಾರಿಗಳೊಂದಿಗೆ ಸೇರಿ ಪಿತೂರಿ ನಡೆಸುತ್ತಿದ್ದಾರೆಂಬ ಆರೋಪವನ್ನೂ ಮಾಡಿದ್ದಾರೆ.

ಭಾರತೀಯ ರೈತ ಒಕ್ಕೂಟವು ಶಾಸಕ ನಂದ್ ಕಿಶೋರ್ ಗುರ್ಜರ್ ಹಾಗೂ ಸಾಹಿಬಾಬಾದ್ ಶಾಸಕ ಸುನೀಲ್ ಶರ್ಮಾ ವಿರುದ್ಧ ಷಡ್ಯಂತ್ರ ರೂಪಿಸಿರುವ ಆರೋಪವನ್ನೂ ಮಾಡಿದ್ದಾರೆ. ಅಲ್ಲದೇ ಕೌಶಾಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿಯೂ ಹೇಳಿದ್ದಾರೆ. ಇನ್ನು ಅತ್ತ ಬಿಜೆಪಿ ಪ್ರಾದೇಶಿಕ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಈ ಎಲ್ಲದರ ಕುರಿತು ಸ್ಪಷ್ಟನೆ ನಿಡುವಂತೆ ಆದೇಶಿಸಿದ್ದಾರೆ. ಇನ್ನು ತಾವು ಈಗಾಗಲೇ ಸ್ಪಷ್ಟನೆಯನ್ನು ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ.

ನೂರು ಮಂದಿ ಜೊತೆ ಬಂದಿದ್ದ ಶಾಸಕ

ರಾಕೇಶ್ ಟಿಕಾಯತ್ ಹಾಗೂ ಅಧಿಕಾರಿಗಳ ನಡುವಿನ ಮಾತುಕತೆ ಸರಿಯಾಗೇ ನಡೆಯುತ್ತಿತ್ತು. ಅಲ್ಲದೇ ಟಿಕಾಯತ್‌ರವರು ಪ್ರತಿಭಟನಾ ಸ್ಥಳ ಖಾಲಿ ಮಾಡಲು ಬಹುತೇಕ ಒಪ್ಪಿಕೊಂಡಿದ್ದರು ಕೂಡಾ. ಆಧರೆ ಇದ್ದಕ್ಕಿದ್ದಂತೆಯೇ ಎಲ್ಲವೂ ಉಲ್ಟಾ ಹೊಡೆದಿತ್ತು. ಈ ಬಗ್ಗೆ ಆರೋಪಿಸಿರುವ ಟಿಕಾಯತ್ ಶಾಸಕ ನಂದ್ ಕಿಶೋರ್ ಏಕಾಏಕಿ ಸುಮಾರು ನಮೂರು ಜನರೊಂದಿಗೆ ನಾವಿದ್ದ ಸ್ಥಳಕ್ಕೆ ನುಗ್ಗಿದ್ದಾರೆ. ಅವರ ವರ್ತನೆಯಿಂದ ಮಾತುಕತೆ ನಡುವೆಯೇ ನಿಂತು ಹೋಯ್ತು, ಹಾಗೂ ಮತ್ತೆ ಪ್ರತಿಭಟನೆ ಆರಂಭವಾಯ್ತು ಎಂದಿದ್ದಾರೆ. ಇದೇ ಆರೋಪ ಶಾಸಕ ಸುನೀಶ್ ಶರ್ಮಾ ವಿರುದ್ಧವೂ ಕೆಳಿ ಬಂದಿದೆ.

ಇನ್ನು ಲೋನಿ ಶಾಸಕ ನಂದ್ ಕಿಶೋರ್ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಧರಣಿ ಹೂಡಿ ಸದ್ದು ಮಾಡಿದ್ದಾರೆ. ನಂದ್ ಕಿಶೋರ್ ವಿಧಾನಸಭೆಯಲ್ಲಿ ಪೊಲೀಸರ ನಡೆ ಬಗ್ಗೆ ವಿಧಾನಸಭೆಯಲ್ಲಿ ಅದೇನೋ ಹೇಳಿಲು ಹಾತೊರೆಯುತ್ತಿದ್ದರು. ಆದರೆ ಇದಕ್ಕೆ ಅವಕಾಶ ಹಾಗೂ ಸಮಯ ಸಿಗದಾಗ ಧರಣಿ ಹೂಡಿದ್ದರು.