Asianet Suvarna News Asianet Suvarna News

ಕಾಲೇಜಿನನಲ್ಲಿ ಬುರ್ಖಾ ನಿಷೇಧಿಸುವವರಿಗೆ ಬೆತ್ತಲೆ ಮೆರವಣಿಗೆ ಶಿಕ್ಷೆ, ನಾಯಕನ ವಿವಾದ!

ಹಿಜಾಬ್ ನಿಷೇಧ, ಬುರ್ಖಾ ನಿಷೇಧ ವಿವಾದ ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಕಾಲೇಜಿನಲ್ಲಿ ಬುರ್ಖಾ ನಿಷೇಧ ಮಾಡಿರುವ ಕ್ರಮವನ್ನು ಪ್ರಶ್ನಿಸಿದ ಮಾಜಿ ಸಚಿವ, ಬುರ್ಖಾ ವಿರೋಧಿಸಿದವರನ್ನು ಬೆತ್ತಲೆ ಮರವಣಿಗೆ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ್ದಾರೆ.

Those who oppose burqa should be paraded naked says Samajwadi Party leader after Moradabad college ban Muslims outfit ckm
Author
First Published Jan 19, 2023, 6:35 PM IST

ಅಲಿಘಡ(ಜ.19): ಕರ್ನಾಟಕದಲ್ಲಿ ಹಿಜಾಬ್, ಬುರ್ಖಾ ನಿಷೇಧ ಗದ್ದಲ ಸೈಲೆಂಟ್ ಆಗುತ್ತಿದ್ದಂತೆ ಇದೀಗ ಉತ್ತರ ಕರ್ನಾಟಕದ ಮೊರಾಬಾದ್‌ನಲ್ಲಿ ಹೋರಾಟ ಆರಂಭಗೊಂಡಿದೆ. ಮೊರಾಬಾದ್‌ನ ಕಾಲೇಜಿನಲ್ಲಿ ಬುರ್ಖಾ ಧರಿಸಿ ಕಾಲೇಜು ಪ್ರವೇಶಕ್ಕೆ ನಿಷೇಧ ಹೇರಿದೆ. ಇದು ಭಾರಿ ಗದ್ದಲಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿವಾದ ಸೃಷ್ಟಿಯಾಗುತ್ತಿದ್ದಂತ ರಾಜಕೀಯ ನಾಯಕರು ಸಿಕ್ಕಿದದೇ ಚಾನ್ಸ್ ಎಂದು ಒಬ್ಬರ ಹಿಂದೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಸಮಾಜವಾದಿ ಪಾರ್ಟಿ ನಾಯಕ, ಮಾಜಿ ಸಚಿವ ಜಮೀರುಲ್ಲಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾರು ಬುರ್ಖಾ ನಿಷೇಧಿಸುತ್ತಾರೋ, ಯಾರು ಬರ್ಖಾ ವಿರೋಧಿಸುತ್ತಾರೋ ಅವರನ್ನು ನಡು ಬೀದಿಯಲ್ಲಿ ಬೆತ್ತಲೆ ಮರೆವಣಿಗೆ ಮಾಡಬೇಕು ಎಂದಿದ್ದಾರೆ. 

ಬುರ್ಖಾ ನಿಷೇಧಿಸುವುದು ತಪ್ಪು. ಇದು ಒಂದು ಸಮುದಾಯ ವಿರುದ್ಧ ತೆಗೆದುಕೊಂಡ ನಿರ್ಧಾರವಾಗಿದೆ. ಹುಡುಗಿಯರು ಬುರ್ಖಾ ಧರಿಸಿ ಕಾಲೇಜು ಹೋಗಲು ಅವಕಾಶ ನೀಡಬೇಕು. ಹಿಜಾಬ್‌ಗೆ ನಿಷೇಧ ಹೇರಿಲ್ಲ. ಇದೀಗ ಬುರ್ಖಾಗೆ ಬ್ಯಾನ್ ಮಾಡಿದ್ದೇಕೆ? ಯಾರು ಬುರ್ಖಾ ನಿಷೇಧಿಸುತ್ತಾರೋ ಅವರನ್ನು ಬೀದಿಯಲ್ಲಿ ಬೆತ್ತಲೆ ಮರೆವಣಿಗೆ ಮಾಡಬೇಕು. ಅವರಿಗೆ ವಸ್ತ್ರ ಇಲ್ಲದಿರುವಾಗದ ಅನುಭವ ಆಗಬೇಕು. ದೇಹವನ್ನ ಪೂರ್ತಿ ಮುಚ್ಚಿಕೊಳ್ಳುವುದು ಭಾರತದ ಸಂಸ್ಕೃತಿ ಎಂದು ಜಮಿರುಲ್ಲಾ ಖಾನ್ ಹೇಳಿದ್ದಾರೆ.

ಕರ್ನಾಟಕ ಬಳಿಕ ಈಗ ಯುಪಿಯಲ್ಲಿ ಹಿಜಾಬ್‌ ಗಲಾಟೆ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ..!

ಬೆತ್ತಲೆ ಮರೆವಣಿ ಮಾಡಿದಾಗ ಅವರಿಗ ದೇಹವನ್ನು ಮುಚ್ಚಿಕೊಳ್ಳುವ ಅಗತ್ಯತೆ ಹಾಗೂ ಅನಿವಾರ್ಯತೆ ಅರ್ಥವಾಗಲಿದೆ ಎಂದು ಜಮೀರುಲ್ಲಾ ಖಾನ್ ಹೇಳಿದ್ದಾರೆ. ಮುಸ್ಲಿಮ್ ಸಮುದಾಯವನ್ನು ಟಾರ್ಗೆಟ್ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಬುರ್ಖಾ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಮೀರುಲ್ಲಾ ಖಾನ್ ಹೇಳಿದ್ದಾರೆ. 

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಭಾರಿ ಗದ್ದಲ ಸೃಷ್ಟಿಸಿತು. ಇದೀಗ ಉತ್ತರ ಪ್ರದೇಶದಲ್ಲಿ ಮತ್ತೆ ಬುರ್ಖಾ ಸದ್ದು ಮಾಡತೊಡಗಿದೆ. ಇತ್ತೀಚೆಗೆ ಹಲವು ಕಡೆಗಳಲ್ಲಿ ಬುರ್ಖಾ, ಹಿಜಾಬ್, ಅಬಯಾ ನಿಷೇಧಿಸಲಾಗುತ್ತಿದೆ. ಇದರ ವಿರುದ್ಧ ಪರ ವಿರೋಧಗಳು ಕೇಳಿಬರುತ್ತದೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಅಬಾಯಾ ನಿಷೇಧಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಅಭಾಯಾ ಧರಿಸಿ ಬರುವುದು ನಿಷೇಧಿಸಲಾಗಿತ್ತು. ಈ ಕುರಿತು ಶಿಕ್ಷಣ ಇಲಾಖೆ ಆದೇಶ ನೀಡಿತ್ತು.  

 

ಬುರ್ಖಾ ನಿಷೇಧ, ಸ್ವಿಸ್ ನಿಯಮ ಉಲ್ಲಂಘಿಸಿದರೆ 83,000 ರೂ ದಂಡ!

ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರಕ್ಕೆ ಮೊದಲ ಆದ್ಯತೆ. ಹೀಗಾಗಿ ಸಮವಸ್ತ್ರದ ಬದಲು ಧಾರ್ಮಿಕ ಉಡುಗೆ ತರವಲ್ಲ ಎಂಬ ಅಂಶಕ್ಕೆ ಒತ್ತು ನೀಡಿ ಈ ಆದೇಶ ಹೊರಡಿಸಲಾಗಿದೆ. ಸೌದಿ ರಾಜಕುವರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಧ್ಯೇಯ ಹೊಂದಿದ್ದು, ಅವರ ಸೂಚನೆ ಮೇರೆಗೆ ಆದೇಶ ಹೊರಬಿದ್ದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ ಅಬಾಯಾಗೆ ಮಾತ್ರ ನಿಷೇಧ ಹೇರಲಾಗಿದ್ದು, ಹಿಜಾಬ್‌ ಬಗ್ಗೆ ಇಲ್ಲಿ ಪ್ರಸ್ತಾಪ ಇಲ್ಲ.

ಅಬಾಯಾ ಎಂಬುದು ಕುತ್ತಿಗೆಯಿಂದ ಕಾಲಿನ ವವರೆಗೆ ದೇಹ ಮುಚ್ಚುವ ಬುರ್ಖಾವನ್ನೇ ಹೋಲುವ ಉಡುಗೆಯಾಗಿದೆ. ಆದರೆ ಇದು ತಲೆಗೆ ಅನ್ವಯಿಸುವುದಿಲ್ಲ. ಇನ್ನು ಹಿಜಾಬ್‌ ಎಂಬುದು ತಲೆಯನ್ನು ಮುಚ್ಚುವ ವಸ್ತ್ರವಾಗಿದೆ.

Follow Us:
Download App:
  • android
  • ios