ಡೌಟ್ ಪಟ್ಟೋರೆಲ್ಲಾ ವ್ಯಾಕ್ಸೀನ್‌ಗಾಗಿ ಓಡ್ತಿದ್ದಾರೆ: ಯೋಗಿ

  • ಲಸಿಕೆ ಬಗ್ಗೆ ಡೌಟ್ ಪಟ್ಟು ಈಗ ಲಸಿಕಾ ಕೇಂದ್ರಗಳಿಗೆ ಓಡ್ತಿರೋರ ಬಗ್ಗೆ ಯೋಗಿ ಟೀಕೆ
  • ಲಸಿಕೆಯನ್ನು ಬಿಜೆಪಿ ಲಸಿಕೆ ಎಂದಿದ್ದ ಅಖಿಲೇಶ್ ಯಾದವ್
Those Doubting Covid Vaccines Are Rushing For Them Now says Yogi Adityanath dpl

ಲಕ್ನೋ(ಮೇ.23): ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಪ್ರತಿಪಕ್ಷಗಳು ನಕಲು ಅಭ್ಯಾಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಮೊದಲು ಲಸಿಕೆಗಳನ್ನು ವಿರೋಧಿಸುತ್ತಿದ್ದವರು ಈಗ ಅವುಗಳನ್ನು ಉಚಿತವಾಗಿ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರ ತವರೂರಾದ ಇಟವಾ ಜಿಲ್ಲೆಯ ಸೈಫೈಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆಗಳನ್ನು ವಿರೋಧಿಸಿ ಯಾದವ್ ಅವರು "ಬಿಜೆಪಿ ಲಸಿಕೆ" ಎಂದು ಕರೆದು ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದು ಭಾರಿ ಟೀಕೆಗೊಳಗಾಗಿತ್ತು.

ಯಾಸ್ ಚಂಡಮಾರುತ: ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮೋದಿ ಸೂಚನೆ!

ಕಾಂಗ್ರೆಸ್ ವಕ್ತಾರ ಸಲ್ಮಾನ್ ನಿಯಾಜಿ ಕೂಡ ಲಸಿಕೆಯನ್ನು "ವಂಚನೆ" ಎಂದು ಕರೆದಿದ್ದರೆ, ಕಾಂಗ್ರೆಸ್ ನ ಮತ್ತೊಬ್ಬ ನಾಯಕ ರಶೀದ್ ಅಲ್ವಿ ಅವರು ಶ್ರೀ ಯಾದವ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು.

ಈ ಮೊದಲು ಲಸಿಕೆಯನ್ನು ವಿರೋಧಿಸುತ್ತಿದ್ದವರು, ಈಗ ಅದನ್ನು ಪಡೆಯುತ್ತಿದ್ದಾರೆ. ಅವರು ಅದನ್ನು ಉಚಿತವಾಗಿ ಕೇಳುತ್ತಿದ್ದಾರೆ. ಇದು ಅವರ ದ್ವಂದ್ವ ಸ್ವರೂಪವನ್ನು ತೋರಿಸುತ್ತದೆ. ಲಸಿಕೆ ಒಂದು ಸುರಕ್ಷತೆಯಾಗಿರುವುದರಿಂದ ಜನರು ಈಗ ಬೆಂಬಲಕ್ಕೆ ಬಂದಿದ್ದಾರೆ. ಎಲ್ಲರೂ ಲಸಿಕೆ ಪಡೆಯುವಂತೆ ಕೋರುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios