Asianet Suvarna News Asianet Suvarna News

ಆಕ್ಸಿಜನ್ ಸಿಲಿಂಡರ್ ತಂದು ಕೊಡುವ ರೆಹಮಾನ್ ಟ್ರಸ್ಟ್.. ಒಂದೊಳ್ಳೆ ಕೆಲಸ

ಸೂರತ್ ನಲ್ಲೊಂದು ಸಂಘಟನೆ/ ಆಕ್ಸಿಜನ್ ಸಿಲಿಂಡರ್ ಪೂರೈಸುವ ಸಂಘಟನೆ/ ಬಡವರ ನೆರವಿಗೆ ನಿಲ್ಲುವ ಕೆಲಸ/ ಔಷಧಿಗಳನ್ನು ನೀಡುತ್ತಾ ಬಂದಿದೆ/ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಸ್ಥೆ

This Muslim trust in Surat is helping Covid patients breathe easy mah
Author
Bengaluru, First Published Apr 26, 2021, 11:27 PM IST

ಸೂರತ್ (ಏ. 26)  ಇಡೀ ದೇಶವೇ ಕೊರೋನಾ ಸಂಕಟದಲ್ಲಿದೆ. ಆಕ್ಸಿಜನ್ ಸಿಲಿಂಡರ್ ಸಿಗುತ್ತಿಲ್ಲ ಎಂಬ ದೂರುಗಳು ಮೇಲಿಂದ ಮೇಲೆ ಕೇಳಿಬರುತ್ತಲೇ ಇದೆ. 

ಮೂವತ್ತೆರಡು ವರ್ಷದ ಮಿಥಿಲ್ ಥಕ್ಕರ್ ತನ್ನ ಕೋವಿಡ್ ಪಾಸಿಟಿವ್ ಗೆ ತುತ್ತಾಗಿ ಆಮ್ಲಜನಕದ ಕೊರತೆ ಅನುಭವಿಸುತ್ತಿದ್ದರು.  ಯಾರೋ ಒಬ್ಬರು ರೆಹಮಾನ್ ಎಜಿಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಪರ್ಕ ಮಾಡಲು ತಿಳಿಸಿದ್ದಾರೆ.

ನನಗೆ ಮೊದಲು ನಂಬಿಕೆ ಬರಲಿಲ್ಲ. ಆದರೆ ಕೆರೆ ಮಾಡಿದೆ.  ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ಸಿಕ್ಕಿತು.ಮಿಥಿಲ್ ಥಕ್ಕರ್  ಮಾತ್ರವಲ್ಲ ಈ ರೀತಿ ಅನೇಕ ಜನರಿಗೂ ನೆರವು ನೀಡಿದ್ದಾರೆ.

32 ವರ್ಷದ ಅರ್ಮಾನ್ ಬಕ್ಷು ಪಟೇಲ್ 15 ದಿನಗಳಿಂದ ಕೊರೋನಾ ಸೋಂಕಿಗೆ ಗುರಿಯಾಗಿದ್ದು ಸಮಸ್ಯೆ ಅನುಭವಿಸುತ್ತೊಇದ್ದರು. ಅವರ ನೆರವಿಗೂ ಟ್ರಸ್ಟ್ ನಿಲ್ಲಿತು. ನಮ್ಮ ಬಳಿ ಇದ್ದ ಸಿಲಿಂಡರ್ ಅನ್ನು ಟ್ರಸ್ಟ್ ರೀಫಿಲ್ ಮಾಡಿಕೊಟ್ಟಿತು ಎಂಸು ಸ್ಮರಿಸಿಕೊಂಡಿದ್ದಾರೆ.

ರಫ್ತಾಗಿರುವುದು ಕೈಗಾರಿಕಾ ಆಮ್ಲಜನಕ, ಕೇಂದ್ರದ ಸ್ಪಷ್ಟನೆ

ಟ್ರಸ್ಟ್ ಕೇವಲ ಆಕ್ಸಿಜನ್ ಸಿಲಿಂಡರ್ ಮಾತ್ರವಲ್ಲ ಮೆಡಿಸಿನ್ ಗಳನ್ನು ನೀಡುತ್ತಾ ಬಂದಿದೆ. ರೆಮಿಡಿಸಿವರ್ ಕೊರತೆಯುನ್ನು ನೀಗಿಸಿದೆ. ಇಲ್ಲಿಯವರೆಗೆ ಮೂನ್ನೂರು ಆಕ್ಸಿಜನ್ ಸಿಲಿಂಡರ್ ಪೂರೈಸಿದೆ. ಕೊರೋನಾಕ್ಕೆ ಬಲಿಯಾದವರ ಅಂತ್ಯಕ್ರಿಯೆಗೂ ನೆರವು ನೀಡಿದೆ.

ಟೆಂಪೋ ಚಾಲಕರು ಸಹ ಈ ಟ್ರಸ್ಟ್ ನೊಂದಿಗೆ  ಕೈ  ಜೋಡಿಸಿದ್ದಾರೆ.  ಕೊಸಂಬಾ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರಿಗೆ 300 ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ.

ಸೂರತ್‌ನಿಂದ 52 ಕಿ.ಮೀ ದೂರದಲ್ಲಿರುವ ಕೊಸಂಬಾದಲ್ಲಿ ಧಾರ್ಮಿಕ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸರೋಡಿ ಅವರು ಐದು ವರ್ಷಗಳ ಹಿಂದೆ ರೆಹಮಾನ್ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಎಲ್ಲಾ ಸಮುದಾಯದ ಜನರಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಲ್ಲಿ ಇದು ಕೆಲಸ ಮಾಡಿಕೊಂಡು ಬಂದಿದೆ.  41 ವರ್ಷದ ಮೌಲ್ವಿ ಮೊಹಮ್ಮದ್ ಇಲಿಯಾಸ್, ಟ್ರಸ್ಟ್ ಜಾತಿ ಧರ್ಮ ಮೀರಿ ಕೆಲಸ ಮಾಡಿಕೊಂಡು ಬಂದಿದೆ ಎಂದು ಹೇಳುತ್ತಾರೆ.

ಕೊರೋನಾ ಸಂದರ್ಭದಲ್ಲಿ ಸಹಾಯ ಹಸ್ತಗಳು ಎಷ್ಟು ಇದ್ದರೂ ಸಾಕಾಗುವುದಿಲ್ಲ.  ಬಡವರಿಗೆ ಮತ್ತು  ನೋಮದವರ ನೆರವಿಗೆ ನಿಲ್ಲುತ್ತಿರುವ ಇಂಥ ಸಂಸ್ಥೆಗಳು  ನೂರಾರು ಬೆಳೆಯಬೇಕು .

 

Follow Us:
Download App:
  • android
  • ios