ಮನೆಗೆ ಕನ್ನಹಾಕಲು ಬಂದವ ಕ್ಷಮಾಪಣೆ ಬರೆದು ಹೋದ!, ಕಾರಣವೇನು? ಇಲ್ಲಿದೆ ವಿವರ

ಕೊಚ್ಚಿ[ಫೆ.22]: ಐದು ಅಂಗಡಿಗಳಿಗೆ ಯಶಸ್ವಿಯಾಗಿ ಕನ್ನ ಹಾಕಿದ್ದ ಕಳ್ಳನಿಗೆ ಆರನೇ ಕಡೆ ಕಳವು ಮಾಡಲು ಹೋದಾಗ ತಾನು ತಪ್ಪು ಮಾಡುತ್ತಿದ್ದೇನೆ ಎಂಬ ಜ್ಞಾನೋದಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕೆಂದರೆ ಆತ ಕಳವು ಮಾಡಲು ಬಂದಿದ್ದ ಮನೆ ಮಾಜಿ ಯೋಧನೊಬ್ಬನ ಮನೆ ಆಗಿತ್ತು. ಹೀಗಾಗಿ ಆತ ಆ ಮನೆಯಲ್ಲಿ ಯಾವ ವಸ್ತುಗಳನ್ನೂ ಕಳವು ಮಾಡದೇ ಒಂದು ಗ್ಲಾಸ್‌ ಮದ್ಯ ಕುಡಿದು ಮನೆಯಿಂದ ಹೊರಬಂದಿದ್ದಾನೆ. ಅಲ್ಲದೇ ಮನೆಯ ಗೋಡೆಯ ಮೇಲೆ ಕ್ಷಮಾಪಣೆಯನ್ನು ಬರೆದಿದ್ದಾನೆ.

ಶೌಚಾಲಯಕ್ಕೆ ತೆರಳಿದ್ದ ಯುವತಿಯ ವಿಡಿಯೋ ಮಾಡಿದ ಭೂಪ ಅಂದರ್

ಕೇರಳದ ಎರ್ನಾಕುಲಂ ಜಿಲ್ಲೆಯ ತಿರುವನಕುಲಂನಲ್ಲಿರುವ ಮಾಜಿ ಯೋಧ ಇಸಾಕ್‌ ಮಣಿ ಎನ್ನುವವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿತ್ತು. ಮರುದಿನ ಮನೆಯ ಕೆಲಸದಾಕೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಕಂಡು ಬಂದಿದೆ.