Asianet Suvarna News Asianet Suvarna News

ಕಳ್ಳನ ಕೈಚಳಕ ಅಲ್ಲ ಮೈಚಳಕ ಇದು... ವಿಡಿಯೋ ನೋಡಿ

  • ಕಬ್ಬಿಣದ ಸರಳು ಹಾಕಿದ ಕಿಟಕಿ ನಡುವೆ  ತೂರಿಹೋದ ಕಳ್ಳ 
  •  ಐಪಿಎಸ್‌ ಅಧಿಕಾರಿ ರುಪಿನ್‌ ಶರ್ಮಾ ಶೇರ್‌ ಮಾಡಿದ ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
     
Thief Shows How He Breaks Into House Through Barred Window akb
Author
Bangalore, First Published Jan 21, 2022, 7:50 PM IST

ಕಳ್ಳರ ಕೈಚಳಕದ ಬಗ್ಗೆ ಹೆಚ್ಚೇನು ಉದಾಹರಣೆ ನೀಡಬೇಕಾಗಿಲ್ಲ. ಏಕೆಂದರೆ ಕಳ್ಳರು ತಮ್ಮ ಕೈ ಚಳಕ ತೋರಿದ ಸಾವಿರಾರು ನಿದರ್ಶನಗಳು ನಮ್ಮ ಮುಂದಿವೆ. ಕಳ್ಳತನ  ಅಪರಾಧವೇ ಆದರೂ  ಕಳ್ಳತನಕ್ಕೆ ಇಳಿಯುವ ಕಳ್ಳರ ಬುದ್ಧಿವಂತಿಕೆ ಹಾಗೂ ಸಾಹಸವನ್ನು ನೋಡಿದರೆ ಆ ಸಾಹಸಕ್ಕಾದರೂ ಅವರನ್ನು ಮೆಚ್ಚಲೇಬೇಕೆನಿಸುವುದು. ಹಾಗೆಯೇ ಇಲ್ಲೊಬ್ಬ ಮನೆ ಕಳವಿಗೆ ಬಂದ ಕಳ್ಳ ಹೇಗೆ ಬೀಗ ಹಾಕಿದ ಮನೆಯೊಳಗೆ ಇಳಿದ ಎಂಬುದನ್ನು ನೋಡಿದರೆ ಎಲ್ಲರೂ ಗಾಬರಿಯಾಗುವುದಂತು ಸತ್ಯ. ಹೌದು ಕಳ್ಳನೋರ್ವ ಕಬ್ಬಿಣದ ಸರಳು ಹಾಕಿದ್ದಂತಹ ಸಣ್ಣದಾದ ಕಿಟಕಿಯೊಳಗೆ ಹೇಗೆ ತೂರಿದ್ದಾನೆ ಎಂಬುದು ಈ ವಿಡಿಯೋದಲ್ಲಿ ಸೆರೆಯಾಗಿದೆ. 

ಈ ವಿಡಿಯೋವನ್ನು ಐಪಿಎಸ್‌ ಅಧಿಕಾರಿ ರುಪಿನ್‌ ಶರ್ಮಾ ( Rupin Sharma) ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಳ್ಳತನವೂ ಸುಲಭದ ಕೆಲಸವೇನಲ್ಲ. ಇದಕ್ಕೂ ಕಷ್ಟ ಇದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಪೊಲೀಸರು, ಮನೆಕಳವು ಮಾಡಿದ ಕಳ್ಳನನ್ನು ಹೇಗೆ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದಾನೆ ಎಂಬುದನ್ನು ತೋರಿಸುವುದಕ್ಕಾಗಿ ಸ್ಥಳ ಮಹಜರಿಗೆ ಘಟನಾ ಸ್ಥಳಕ್ಕೆ ಕರೆ ತಂದಿದ್ದಾರೆ. ಬಳಿಕ ಆತನ ಕೈಯಿಂದ ಕೋಳವನ್ನು ತೆಗೆದು ಹೇಗೆ ಕಳ್ಳತನ ಮಾಡಿದೆ ಎಂದು ತೋರಿಸು ಎಂದಿದ್ದಾರೆ. ಈ ವೇಳೆ ತಾನು ಹೇಗೆ ಮನೆಯನ್ನು ನುಗ್ಗಿದೆ ಎಂಬುದನ್ನು ಕಳ್ಳನು ತೋರಿಸಿದ್ದಾನೆ. ಟೆರೇಸ್‌ ಮನೆಯಲ್ಲಿ ಬಾಗಿಲು ಒಡೆಯದೆಯೇ ಈ ಕಳ್ಳತನವಾಗಿದೆ. ಕಬ್ಬಿಣದ ಸರಳುಗಳನ್ನು ಹಾಕಿದ ಕಿಟಕಿ ಇದಾಗಿದ್ದು, ಎರಡು ಸರಳುಗಳ ಮಧ್ಯೆ ಸ್ವಲ್ಪ ಜಾಗವಷ್ಟೇ ಇದೆ. ಆದರೂ ಕಳ್ಳ ಈ ಎರಡು ಸರಳುಗಳ ಮಧ್ಯೆ ಹೇಗೆ ತನ್ನ ದೇಹವನ್ನು ನುಗ್ಗಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.

Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಪೊಲೀಸರು ಕೋಳ ಬಿಚ್ಚಿದಂತೆ ಕಿಟಕಿ ಹತ್ತಿದ ಆತ ಮೊದಲಿಗೆ ತನ್ನ ಒಂದು ಕಾಲನ್ನು ಸರಳುಗಳ ಮಧ್ಯೆ ಹಾಕುತ್ತಾನೆ. ನಂತರ ಇನ್ನೊಂದು ಕಾಲನ್ನು ಕೂಡ ಒಳಕ್ಕೆಳೆದುಕೊಂಡು ಮೆಲ್ಲನೆ ತನ್ನ ಪೂರ್ತಿ ದೇಹವನ್ನು ಕೇವಲ ಒಂದು ನಿಮಿಷದೊಳಗೆ ಕಿಟಕಿಯೊಳಗೆ ತೂರಿಸಿಕೊಂಡು ಒಳನುಗ್ಗಿದ್ದಾನೆ. ಆದರೆ ಈ ಕಿಟಕಿಯನ್ನು ನೋಡಿದರೆ ಸಣ್ಣ ಮಕ್ಕಳ ಹೊರತಾಗಿ ದೊಡ್ಡವರು ಯಾರೂ ಈ ಕಿಟಕಿಯಲ್ಲಿ ನುಗ್ಗಲು ಸಾಧ್ಯವಿಲ್ಲದಷ್ಟು ಸಣ್ಣ ಗಾತ್ರದಲ್ಲಿದೆ. ಆದಾಗ್ಯೂ ಕಳ್ಳ ಮಾತ್ರ ತನ್ನ ದೇಹವನ್ನು ಎಲ್ಲ ರೀತಿ ಬಾಗಿ ಬೆಂಡಾಗುವಂತೆ ರೂಪಿಸಿಕೊಂಡಿದ್ದಾನೆ ಎಂಬುದನ್ನು ಈ ವಿಡಿಯೋ ನೋಡಿದರೆ ತಿಳಿಯುವುದು.

Mirage Fighter Jet ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕದ್ದಿದ್ದೇಕೆ ಅಂದ್ರೆ ಹೀಗನ್ನೋದಾ?

ಈ ಕಳ್ಳ ವಿಂಡೋ ಮೂಲಕ ಒಳ ನುಗ್ಗಿದ್ದು, ಆತ ಈಗ ಡೆಮೋ ತೋರಿಸುತ್ತಿದ್ದಾನೆ ಎಂದು ಐಪಿಎಸ್ ಅಧಿಕಾರಿ ರುಪಿನ್‌ ಶರ್ಮಾ ಈ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಈ ಕಳ್ಳನಿಗೆ ಬಹುಮಾನ ನೀಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios