Asianet Suvarna News Asianet Suvarna News

ಗೆಳೆಯನ ಪ್ರಾಣ ಉಳಿಸಲು ಇದು ಅನಿವಾರ್ಯ; ಪೊಲೀಸ್ ಮನೆ ದೋಚಿದ ಕಳ್ಳನ ಭಾವುಕ ಪತ್ರ!

  • ಪೊಲೀಸ್ ಮನೆಗೆ ಕನ್ನ ಹಾಕಿದ ಚಾಲಾಕಿ ಕಳ್ಳ
  • ಗೆಳಯನ ಪ್ರಾಣ ಉಳಿಸಲು ಕಳ್ಳತನ, ಮರಳಿ ನೀಡುತ್ತೇನೆ ಎಂದ ಕಳ್ಳ
  • ಭಾವುಕ ಪತ್ರ ಬರೆದಿಟ್ಟು ಕಳ್ಳತನ ಮಾಡಿದ ಕಳ್ಳ
Thief left behind an apology letter and stolen money from police house Madhya pradesh ckm
Author
Bengaluru, First Published Jul 6, 2021, 9:35 PM IST

ಮಧ್ಯ ಪ್ರದೇಶ(ಜು.06): ಪೊಲೀಸ್ ಮನೆಗೆ ಕನ್ನ ಹಾಕಿ ಹಣ, ಒಡವೆ ದೋಚಿದ ಕಳ್ಳ ಭಾವುಕ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಈ ಪತ್ರ ನೋಡಿದರೆ ಒಂದು ಕ್ಷಣ ಯಾರ ಹೃದಯವೂ ಕರಗದೇ ಇರುವುದಿಲ್ಲ. ಈ ವಿಚಿತ್ರ ಘಟನೆ ಮಧ್ಯ ಪ್ರದೇಶದ ಭಿಂದ್ ಪಟ್ಟಣದಲ್ಲಿ ನಡೆದಿದೆ.

ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿ ಚಿನ್ನಾಭರಣ ಸಮೇತ ಅರೆಸ್ಟ್

ಮಧ್ಯಪ್ರದೇಶ ಭಿಂದ್ ಪಟ್ಟಣದ ನಿವಾಸಿಯಾಗಿರುವ ಈ ಪೊಲೀಸ್ ಅಧಿಕಾರಿಗೆ ಚತ್ತೀಸಘಡದಲ್ಲಿ ಕರ್ತವ್ಯ. ಇನ್ನು ಮನೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳು ಕುಟುಂಬಸ್ಥರ ಮನೆಗೆ ತೆರಳಿದ ವೇಳೆ ಕಳ್ಳತನ ನಡೆದಿದೆ. ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

ಮಾಹಿತಿ ತಿಳಿದು ಕೋತ್ವಾಲಿ ಪೊಲೀಸ್ ಠಾಣೆ ಎಎಸ್ಐ ಕಮಲೇಶ್ ಕಟಾರೆ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಪತ್ರವೊಂದು ದೊರೆತಿದೆ. ಈ ಪತ್ರದಲ್ಲಿ ಕಳ್ಳ, ಕ್ಷಮಿಸಿ,  ನಾನು ಅನಿವಾರ್ಯವಾಗಿ ಈ ಕಳ್ಳತನ ಮಾಡುತ್ತಿದ್ದೇನೆ. ನಾನು ಈ ಕೆಲಸ ಮಾಡದಿದ್ದರೆ, ನನ್ನ ಗೆಳೆಯನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಗೆಳೆಯನ ಪ್ರಾಣ ಉಳಿಸಲು ಕಳ್ಳತನ ಮಾಡಿದ್ದೇನೆ. ಆತಂಕ ಬೇಡ, ನನಗೆ ಹಣ ಸಿಕ್ಕಾಗ ತಕ್ಷಣವೇ ನಾನು ಮರಳಿ ನೀಡುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾನೆ.

ಕೊಲೆ ಮಾಡಿ 15 ವರ್ಷ ಮೃತದೇಹದ ಜೊತೆಯೇ ವಾಸಿಸಿದ್ದ

ಮನೆಯ ಲಾಕರ್, ಡ್ರವರ್ ಮುರಿದು ಚಿನ್ನ, ಬೆಳ್ಳಿ ಹಾಗೂ ನಗದು ದೋಚಲಾಗಿದೆ. ಈ ಕಳ್ಳತನದಲ್ಲಿ ಕುಟುಂಬಸ್ಥರ ಕೈವಾಡವಿದೆ ಎಂದು ಮನೆ ಕಳ್ಳತನವಾದ ಪೊಲೀಸ್ ಅಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ  ಕೋತ್ವಾಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
 

Follow Us:
Download App:
  • android
  • ios