ದಾನ ಕೇಳುತ್ತಾ ಬಂದ ಕಳ್ಳ ಹಣ ನೀಡಲು ನಿರಾಕರಿಸಿದ ಅಂಗಡಿಯಾತ ಚಪ್ಪಲಿಯನ್ನೇ ಎಗರಿಸಿದ ಖದೀಮ
ಕಳ್ಳನೋರ್ವ ಅಂಗಡಿ ಮುಂದೆ ತನ್ನಿಬ್ಬರು ಸಂಗಡಿಗರೊಂದಿಗೆ ದಾನ ಕೇಳುತ್ತಾ ಬಂದಿದ್ದಾನೆ. ಆದರೆ ಅಂಗಡಿ ಮಾಲೀಕ ಹಣ ಕೊಡಲು ನಿರಾಕರಿಸಿದ್ದಾನೆ. ಆದರೆ ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನೆ ಹೋಗಲು ಸಿದ್ಧವಿರದ ಆತ ಅಂಗಡಿಯಾತನ ಚಪ್ಪಲಿಯನ್ನೇ ಕಾಲಿಗೆ ಹಾಕಿಕೊಂಡು ಹೋಗಿದ್ದಾನೆ. ಈ ವಿಡಿಯೋ ನೋಡುಗರಲ್ಲಿ ನಗು ಉಕ್ಕಿಸುತ್ತಿದೆ.
ವಂಚಕನೊಬ್ಬ ಅಂಗಡಿಗೆ ಹೋಗಿ ಮಾಲೀಕನಿಗೆ ಸ್ವಲ್ಪ ಹಣವನ್ನು ದೇಣಿಗೆ ನೀಡುವಂತೆ ಕೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆದಾಗ್ಯೂ, ಮಾಲೀಕರು ಆ ವ್ಯಕ್ತಿಗೆ ಯಾವುದೇ ದೇಣಿಗೆ ನೀಡಲು ನಿರಾಕರಿಸುತ್ತಾರೆ. ಆದರೆ ಆತನಿಗೆ ಖಾಲಿ ಕೈಯಲ್ಲಿ ಅಲ್ಲಿಂದ ಹೋಗಲು ಇಷ್ಟವಿರಲಿಲ್ಲ. ಅಂಗಡಿಯವನ ದಿಕ್ಕು ತಪ್ಪಿಸಲು ಆತನೊಂದಿಗೆ ಮಾತನಾಡುತ್ತಲೆ ಇದ್ದ ಆತ ಆ ಗ್ಯಾಪ್‌ನಲ್ಲಿಯೇ ಅಂಗಡಿಯ ಹೊರಗೆ ಅಂಗಡಿಯವ ಬಿಚ್ಚಿಟ್ಟಿದ್ದ ಚಪ್ಪಲಿಯನ್ನು ಕದಿಯುತ್ತಾನೆ.ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಜನಪ್ರಿಯ ಮೆಮೆ ಪೇಜ್ 'ಘಂಟಾ' ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ. ಈ ವಿಡಿಯೋವನ್ನು 47,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ವೈರಲ್ ಆಗುತ್ತಿದೆ. ಜನ ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಅಪ್ಸರೆಯರ ಬಳಿ ಮಸಾಜ್ ಮಾಡಿಸಿಕೊಳ್ಳಲು ಕಳ್ಳತನ
ಮಸಾಜ್ ಪಾರ್ಲರ್ ಗೆ (Massage parlor) ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ. ಮಾಡ್ತಾ ಇದ್ದಿದ್ದು(Robbery) ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದರು. ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು (Bengaluru Police) ಬಂಧಿಸಿದ್ದಾರೆ.
Bengaluru Crime: ಸ್ನೇಹಿತೆಯ ಮನೆಗೇ ಕನ್ನ ಹಾಕಿದ್ದ ಖದೀಮರ ಬಂಧನ
ಜಾನ್ ಮೆಲ್ವಿನ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು . ಮಸಾಜ್ ಪಾರ್ಲರ್ ಗೆ ಹೋಗಿ ಇವ್ರು ಕೊಡ್ತಿದ್ದ ಟಿಪ್ಸ್ ಕೇಳಿದ್ರೆ ಆಘಾತವಾಗಲೇಬೇಕು. ಅದು ಬಾರಿ ಮಸಾಜ್ ಪಾರ್ಲರ್ ಹೋಗಿ 10 ರಿಂದ 15 ಸಾವಿರ ಟಿಪ್ಸ್ ಕೊಟ್ಟು ಬರುತ್ತಿದ್ದರು. ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.