ನವದೆಹಲಿ ( ಜ.  13)  ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿದ್ದ ಕೃಷಿ ಕಾಯಿದೆ ತಿದ್ದುಪಡಿ, ಎಪಿಎಂಸಿ ಬಿಲ್ ಮತ್ತು ಭೂಸುಧಾರಣೆ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ರೈತರ ಪ್ರತಿಭಟನೆ ಮಾತ್ರ  ನಿಂತಿಲ್ಲ.  ರೈತರ ಪ್ರತಿಭಟನೆ ಬಗ್ಗೆ ಸಂಸದೆ, ನಟಿ ಹೇಮಾ ಮಾಲಿನಿ ಮಾತನಾಡಿದ್ದಾರೆ.

ತಮಗೆ ಏನು ಬೇಕು ಎನ್ನುವುದು ಗೊತ್ತಿಲ್ಲದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.. ಕಾಣದ ಕೈಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಕೃಷಿ ಮಸೂದೆ ಪ್ರತಿ ಸುಟ್ಟು ಹಬ್ಬ ಆಚರಿಸಿದ ರೈತರು! ಹಿಂದೆ ಸರಿಯುವ ಮಾತೇ ಇಲ್ಲ

ತಾವು ಏತಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿದಿಲ್ಲ ಹೀಗಿದ್ದರೂ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.  ರೈತರು ತಮಗೆ ಏನು ಬೇಕು ಎಂಬುದನ್ನು ಮತ್ತು ಕೃಷಿ ಕಾನೂನುಗಳಿಂದ ಅವರಿಗೆ ಉಂಟಾಗಲಿರುವ ಸಮಸ್ಯೆ ಏನು ಎಂಬುದು  ಕೂಡಾ ಅವರಿಗೆ ತಿಳಿದಿಲ್ಲ. ಯಾರೋ ಹೇಳಿದ ಮಾತು ಕೇಳಿಕೊಂಡು ಧರಣಿ ಮಾಡುತ್ತಿದ್ದಾರೆ ಎನ್ನುವುದು ಹೇಮಾ ಅಭಿಪ್ರಾಯ.

ಪ್ರತಿಭಟನೆ ನಡೆಸುತ್ತಿರುವವರು ನಕಲಿ ರೈತರು ಎಂದು ಬಿಜೆಪಿ ಸಂಸದ ಮುನಿಸ್ವಾಮಿನ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಮಾ ಮಾಳಿನಿ ಹಿಂದೊಮ್ಮೆ ಜೋಳದ ಹೊಲದಲ್ಲಿ ಇದ್ದ ಪೋಟೋ ವನ್ನು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿ ಠಕ್ಕರ್ ನೀಡಿತ್ತು. 

ಸರ್ಕಾರ ಮಾತುಕತೆಗೆ ಕರೆದರೂ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ರೈತರಿಗೆ ತಮ್ಮದೇ ಆದ ಅಜೆಂಡಾವೂ ಇಲ್ಲ ಎಂದು ಹೇಮಾಮಾಲಿನಿ  ಹೇಳಿದ್ದಾರೆ.