Asianet Suvarna News Asianet Suvarna News

ತಮಿಳುನಾಡಿನಲ್ಲಿ ಕಾರು ಸ್ಫೋಟಕ್ಕೆ ಬಲಿಯಾದವ ಆತ್ಮಾಹುತಿ ಬಾಂಬರ್

ತಮಿಳುನಾಡಿನ 2ನೇ ಅತಿದೊಡ್ಡ ನಗರವಾಗಿರುವ ಕೊಯಮತ್ತೂರಿನಲ್ಲಿ ಅ.23ರಂದು ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಮತ್ತೊಂದು ಮಹತ್ತರ ತಿರುವು ದೊರೆತಿದೆ.

The victim of a car blast in Tamil Nadu is a suicide bomber, Inexperience Missed Disaster, Investigative Agency Given Explosive Information akb
Author
First Published Oct 30, 2022, 7:12 AM IST

ಕೊಯಮತ್ತೂರು: ತಮಿಳುನಾಡಿನ 2ನೇ ಅತಿದೊಡ್ಡ ನಗರವಾಗಿರುವ ಕೊಯಮತ್ತೂರಿನಲ್ಲಿ ಅ.23ರಂದು ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಮತ್ತೊಂದು ಮಹತ್ತರ ತಿರುವು ದೊರೆತಿದೆ. ಅಂದು ದೇಗುಲದ ಎದುರು ಕಾರು ಸ್ಫೋಟದಲ್ಲಿ ಬಲಿಯಾದ 29 ವರ್ಷದ ಎಂಜಿನಿಯರಿಂಗ್‌ ಪದವೀಧರನು ಓರ್ವ ಆತ್ಮಾಹುತಿ ಬಾಂಬರ್‌. ದೇಗುಲ ಹಾಗೂ ಅದರ ಸುತ್ತಲಿನ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಆತ ಬಂದಿದ್ದ ಎಂದು ತನಿಖಾಧಿಕಾರಿಗಳು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಕಾರು ಸ್ಫೋಟದಲ್ಲಿ ಬಲಿಯಾದ ಜಮೀಶಾ ಮುಬಿನ್‌ನನ್ನು (Jamisha Mubin) 2019ರಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) (National Investigation Agency) ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಒಳಪಡಿಸಿತ್ತು. ಈತನೇ ಕೊಯಮತ್ತೂರಿನ (Coimbatore) ಕೊಟ್ಟೈಮೇಡುವಿನಲ್ಲಿರುವ (Kottaimedu) ಸಂಗಮೇಶ್ವರ ದೇಗುಲದ (Sangameshwara temple)ಬಳಿ ಕಾರು ಸ್ಫೋಟಕ್ಕೆ ಅ.23ರ ನಸುಕಿನ ಜಾವ 4ಕ್ಕೆ ಬಲಿಯಾಗಿದ್ದ. ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಗಿದ್ದ.

ಮುಬಿನ್‌ ಯೋಜಿಸಿದ್ದಂತೆ ಕಾರಿನಲ್ಲಿದ್ದ ಎರಡೂ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ ದೇಗುಲ ಹಾಗೂ ಅದರ ಸುತ್ತಲಿರುವ ಸಾಲು ಮನೆಗಳಿಗೆ ಭಾರಿ ಹಾನಿಯಾಗಿಬಿಡುತ್ತಿತ್ತು. ಆದರೆ ಸ್ಫೋಟಕ್ಕೆ ಸಂಬಂಧಿಸಿದಂತೆ ಆತನಿಗೆ ಅನುಭವ ಇಲ್ಲದೇ ಇರುವ ಕಾರಣ ಘೋರ ದುರಂತ ತಪ್ಪಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖಾಧಿಕಾರಿಗಳು ಹೇಳುವ ಪ್ರಕಾರ, ‘ಐಸಿಸ್‌ ಸಾಹಿತ್ಯವನ್ನು ಓದಿ ಮುಬಿನ್‌ ಮೂಲಭೂತವಾದಿಯಾಗಿದ್ದ. ಆದರೆ ಆತನಿಗೆ ಭಯೋತ್ಪಾದಕ ಕೃತ್ಯ ಕುರಿತಂತೆ ತರಬೇತಿಯಾಗಿರಲಿಲ್ಲ. ಹೀಗಾಗಿ ಇಂಟರ್ನೆಟ್‌ನಲ್ಲಿ ಬಾಂಬ್‌ ತಯಾರಿ ಕುರಿತು ಲಭ್ಯವಿರುವ ಮಾಹಿತಿಯನ್ನು ಓದಿ ಸ್ಫೋಟಕ ನಿರ್ವಹಣೆ ಬಗ್ಗೆ ತಿಳಿದಿದ್ದ’ ಎಂದು ಹೇಳಿದ್ದಾರೆ.

ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡ, NIA ತನಿಖೆಗೆ ಆದೇಶಿಸಿದ ಸಿಎಂ ಸ್ಟಾಲಿನ್!

‘ಈವರೆಗೆ ಐಸಿಸ್‌ ಬಗ್ಗೆ ಸಹಾನುಭೂತಿ ಹೊಂದಿದ್ದ ಆರು ಮಂದಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಅವರ ಹೇಳಿಕೆಯ ಪ್ರಕಾರ, ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ತನ್ನ ಯೋಜನೆ ಸಾಕಾರವಾದರೆ ದೇಗುಲದ ಸುತ್ತಲಿನ 50ರಿಂದ 100 ಮೀಟರ್‌ ಪ್ರದೇಶ ಸಂಪೂರ್ಣ ನಾಶವಾಗಲಿದೆ. ಅದರಲ್ಲಿ ದೇಗುಲ, ವಸತಿ ಕಟ್ಟಡಗಳೂ ಇರಲಿವೆ ಎಂದು ಮುಬಿನ್‌ ಬಲವಾಗಿ ನಂಬಿದ್ದ’ ಎನ್ನಲಾಗಿದೆ.

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ, ತನಿಖೆಯಲ್ಲಿ ಬಯಲಾದ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್!

Coimbatore car blast case ಎನ್ಐಎ ತಂಡ ಸ್ಥಳಕ್ಕೆ ಭೇಟಿ, 6ನೇ ಆರೋಪಿ ಅರೆಸ್ಟ್!

Follow Us:
Download App:
  • android
  • ios