Asianet Suvarna News Asianet Suvarna News

ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಮತ್ತೆ ಸಿಡಿದೆದ್ದ ತಮಿಳ್ನಾಡು ಸಿಎಂ

ಆಡಳಿತದಲ್ಲಿ ಹಿಂದಿ ಬಳಕೆ ಉತ್ತೇಜನ ಕುರಿತು ಕೇಂದ್ರ ಸರ್ಕಾರಿ ಸ್ವಾಮ್ಯದ ‘ದ ನ್ಯೂ ಇಂಡಿಯಾ ಅಶ್ಯೂರೆನ್ಸ್‌’ ಹೊರಡಿಸಿರುವ ಸುತ್ತೋಲೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ‘ತಮಿಳುನಾಡು ಮತ್ತು ಡಿಎಂಕೆಯು ಹಿಂದೆ ಹೇರಿಕೆಯನ್ನು ತಡೆಗಟ್ಟಲು ಬೇಕಾದ ಎಲ್ಲ ಕ್ರಮವನ್ನೂ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದ್ದಾರೆ.

The Tamil Nadu CM who again burst out against the Center's imposition of Hindi Govt is shoving Hindi down our throats Stalin akb
Author
First Published Jun 13, 2023, 7:04 AM IST

ಚೆನ್ನೈ: ಆಡಳಿತದಲ್ಲಿ ಹಿಂದಿ ಬಳಕೆ ಉತ್ತೇಜನ ಕುರಿತು ಕೇಂದ್ರ ಸರ್ಕಾರಿ ಸ್ವಾಮ್ಯದ ‘ದ ನ್ಯೂ ಇಂಡಿಯಾ ಅಶ್ಯೂರೆನ್ಸ್‌’ ಹೊರಡಿಸಿರುವ ಸುತ್ತೋಲೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ‘ತಮಿಳುನಾಡು ಮತ್ತು ಡಿಎಂಕೆಯು ಹಿಂದೆ ಹೇರಿಕೆಯನ್ನು ತಡೆಗಟ್ಟಲು ಬೇಕಾದ ಎಲ್ಲ ಕ್ರಮವನ್ನೂ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದ್ದಾರೆ.

ವಿಮಾ ಸಂಸ್ಥೆಯ ಸುತ್ತೋಲೆಯನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸ್ಟಾಲಿನ್‌, ‘ಕೇಂದ್ರ ಸರ್ಕಾರವು ತನ್ನ ಅಮೂಲ್ಯವಾದ ಸಂಪನ್ಮೂಲಗಳನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಬಳಸುವುದನ್ನು ಬಿಟ್ಟು ‘ನಮ್ಮ ಗಂಟಲಿಗೆ ಹಿಂದಿ ಹೇರಲು’ ಖರ್ಚು ಮಾಡುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ಮಾತ್ರ ತಮಗೆ ಸಾಧ್ಯವಿರುವ ಎಲ್ಲಾ ಮಾರ್ಗಗಳಲ್ಲೂ ಉಳಿದ ಭಾರತೀಯ ಭಾಷೆಗಳಿಗಿಂತ ಹಿಂದಿಗೆ ‘ಅನವಶ್ಯಕ ಮತ್ತು ಅನ್ಯಾಯ’ವಾಗಿ ಅನುಕೂಲ ನೀಡುತ್ತಿವೆ’ ಎಂದು ಕಿಡಿಕಾರಿದ್ದಾರೆ.

ಕೆಎಂಎಫ್‌ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ: ಸರಣಿ ಟ್ವೀಟ್‌ ಮೂಲಕ ಕುಮಾರಸ್ವಾಮಿ ಕಿಡಿ

ಅಲ್ಲದೇ ‘ಇದೊಂದು ಸಂಸ್ಥೆಯ ಅನ್ಯಾಯದ ಸುತ್ತೋಲೆ. ತಕ್ಷಣವೇ ಇದನ್ನು ಹಿಂಪಡೆಯಬೇಕು ಮತ್ತು ದೇಶದ ಹಿಂದಿಯೇತರ ಭಾಷಿಕರಿಗೆ ಹಾಗೂ ತಮ್ಮದೇ ಸಂಸ್ಥೆಯ ಹಿಂದಿಯೇತರ ಉದ್ಯೋಗಿಗಳಿಗೆ ಅವಮಾನ ತೋರಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷೆ ನೀರ್ಜಾ ಕಪೂರ್‌ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯು ‘ನಾವು ಎಲ್ಲ ಜಾಹೀರಾತುಗಳು, ಟೆಂಡರ್‌ಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಹಿಂದಿ, ಇಂಗ್ಲಿಷ್‌ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಹೊರಡಿಸುತ್ತೇವೆ. ನಮ್ಮ ಸಂಸ್ಥೆಯು ಎಲ್ಲಾ ಸ್ಥಳೀಯ ಭಾಷೆಗಳನ್ನು ಗೌರವಿಸುತ್ತದೆ’ ಎಂದಿದೆ.

ನನ್ನ ಕನ್ನಡವನ್ನು ಅವಮಾನಿಸಿ, ನಿಮ್ಮ ಭಾಷೆ ಹೇರಿದರೆ....: ನಟ ಪ್ರಕಾಶ್ ರಾಜ್ ಎಚ್ಚರಿಕೆ

Follow Us:
Download App:
  • android
  • ios