ಪ್ರಜಾಪ್ರಭುತ್ವದ ಯಶಸ್ಸಿಂದ ಕೆಲವರಿಗೆ ಘಾಸಿ, ಹೀಗಾಗಿ ಅದರ ಮೇಲೆ ದಾಳಿ: ಮೋದಿ

ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸಿನಿಂದ ಕೆಲವು ವ್ಯಕ್ತಿಗಳು ಘಾಸಿಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಅವುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

The success of democracy hurts someone so they attacked on it PM modi slams Rahul gandhi akb

ನವದೆಹಲಿ: ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸಿನಿಂದ ಕೆಲವು ವ್ಯಕ್ತಿಗಳು ಘಾಸಿಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಅವುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಈ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ತುತ್ತಾಗುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲಂಡನ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ (Prime Minister), ‘ದೇಶ ಅತ್ಯಂತ ಆತ್ಮವಿಶ್ವಾಸದಲ್ಲಿ ಇರುವ ಸಂದರ್ಭದಲ್ಲಿ, ಇಡೀ ವಿಶ್ವದ ಬೌದ್ಧಿಕ ಸಮುದಾಯ ಭಾರತದ ಬಗ್ಗೆ ಆಶಾಭಾವನೆ ಹೊಂದಿರುವಾಗ, ನಿರಾಶವಾದದ ಬಗ್ಗೆ ಮಾತನಾಡುವ, ದೇಶವನ್ನು ಅತ್ಯಂತ ಕೀಳಾಗಿ ಬಿಂಬಿಸುವ ಮತ್ತು ದೇಶದ ಮನೋಬಲವನ್ನು ಕುಗ್ಗಿಸುವಂಥ ಕೆಲಸಗಳು ನಡೆಯುತ್ತಿವೆ’ ಎಂದು ಹೆಸರು ಹೇಳದೆಯೇ ಇತ್ತೀಚಿನ ಲಂಡನ್‌ ಪ್ರವಾಸದಲ್ಲಿನ ರಾಹುಲ್‌ ಭಾಷಣದ (Rahul Gandhi speech) ವಿರುದ್ಧ ಕುಟುಕಿದರು.

ಏನಾದರು ಶುಭ ಕಾರ್ಯಗಳು ನಡೆಯುವಾಗ ಹಣೆಗೆ ಕಪ್ಪು ತಿಲಕ ಇಡುವ ಸಂಪ್ರದಾಯ ಇದೆ. ಹೀಗಾಗಿಯೇ ಇದೀಗ ದೇಶದಲ್ಲಿ ಹಲವು ಶುಭ ಘಟನೆಗಳು ನಡೆಯುತ್ತಿದೆ ಎನ್ನುವ ಕಾರಣಕ್ಕಾಗಿ ಕೆಲವರು ಕಪ್ಪು ತಿಲಕ ಇಡುವ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಯಾರ ಹೆಸರು ಹೇಳದೆಯೇ ಪ್ರಧಾನಿ ವ್ಯಂಗ್ಯವಾಡಿದರು. ಪ್ರಜಾಪ್ರಭುತ್ವದ (democracy) ಸಾಮರ್ಥ್ಯವನ್ನು ಭಾರತ ಇಡೀ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಆದರೆ ಈ ಯಶಸ್ಸು, ಕೆಲವರನ್ನು ಘಾಸಿಗೊಳಿಸಿದೆ. ಹೀಗಾಗಿಯೇ ಅವರು ಅದರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ ಇಂಥ ದಾಳಿಯ ಹೊರತಾಗಿಯೂ ತನ್ನ ಗುರಿಯನ್ನು ಮುಟ್ಟಲು ದೇಶ ಮುಂದಡಿ ಇಡಲಿದೆ ಎಂದು ಮೋದಿ ಹೇಳಿದರು.

ನೆಹರೂ ಕುಟುಂಬ ಕುರಿತ ಹೇಳಿಕೆ: ಮೋದಿ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಹಕ್ಕಚ್ಯುತಿ ಅಸ್ತ್ರ

ಇದೇ ವೇಳ ಇಡೀ ವಿಶ್ವ, ಇದು ಭಾರತದ ಯುಗ ಎಂದು ಬಣ್ಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಭರವಸೆಯ ಬದಲಾವಣೆ ಮತ್ತು ದೇಶದೊಳಗಿನ ಸಾಧನೆ. ಎಲ್ಲಾ ಸರ್ಕಾರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ತಕ್ಕ ಫಲಿತಾಂಶ ಪಡೆದವು. ಆದರೆ ನಮ್ಮ ಸರ್ಕಾರ ಹೊಸ ಫಲಿತಾಂಶ ಪಡೆಯಲು ವಿಭಿನ್ನ ವೇಗ ಮತ್ತು ಅಗಾಧತೆಯಲ್ಲಿ ಕೆಲಸ ಮಾಡಿತು ಎಂದು ಸರ್ಕಾರದ ಸಾಧನೆಯ್ನನು ಬಣ್ನಿಸಿದರು. ಈ ಹಿಂದೆ ಹಗರಣಗಳೇ ಸುದ್ದಿಯಾಗುತ್ತಿದ್ದವು. ಆದರೆ ಇದೀಗ ತಮ್ಮ ಮೇಲಿನ ತನಿಖಾ ಸಂಸ್ಥೆಗಳ ದಾಳಿಗಳ ಬಳಿಕ ಇಂಥ ಭ್ರಷ್ಟರು ಪರಸ್ಪರ ಕೈಜೋಡಿಸುತ್ತಿರುವ ವಿಷಯ ಸುದ್ದಿಯಾಗುತ್ತಿದೆ ಎಂದು ವಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ

Latest Videos
Follow Us:
Download App:
  • android
  • ios