Asianet Suvarna News Asianet Suvarna News

From the IAF Vault: ಐಎಎಫ್‌ನ ಮೊದಲ ಫ್ಲೈಯಿಗ್‌ ಇನ್ಸಟ್ರಕ್ಟರ್‌ನ ಕಥೆ

ಭಾರತೀಯ ವಾಯುಪಡೆಯ ಇತಿಹಾಸಕಾರ ಅಂಚಿತ್ ಗುಪ್ತಾ ಅವರು ಐಎಎಫ್‌ನ ಮೊದಲ ಫ್ಲೈಯಿಗ್‌ ಇನ್ಸಟ್ರಕ್ಟರ್‌ ಮತ್ತು ಸ್ವಾತಂತ್ರ್ಯದ ನಂತರದ ಐಎಎಫ್ ತರಬೇತಿ ಕೇಂದ್ರದ ರರೂವಾರಿ ಏರ್ ಕಮೋಡೋರ್ ಜಗದೇವ್ ಚಂದ್ರ ಅವರ ಕಥೆಯನ್ನು ವಿವರಿಸಿದ್ದಾರೆ.

The story of IAFs first flying instructor From the IAF Vault san
Author
First Published May 30, 2023, 7:09 PM IST

ನವದೆಹಲಿ (ಮೇ.30): ಈಗಿನ ಪಾಕಿಸ್ತಾನದಲ್ಲಿರುವ ಗುಜ್ರನ್‌ವಾಲಾದಲ್ಲಿ 1916ರ ಅಕ್ಟೋಬರ್‌ 6 ರಂದು ಪಂಜಾಬಿ ಕುಟುಂಬದಲ್ಲಿ ಜನಿಸಿದವರು ಜಗದೇವ್‌ ಚಂದ್ರ. ಅವರ ತಂದೆ ವೈದ್ಯರು ಮತ್ತು ಸಹೋದರ ಜಗ್‌ ಪ್ರವೇಶ್‌ ಚಂದ್ರ ರಾಜಕಾರಣಿ. ಜೆಆರ್‌ಡಿ ಟಾಟಾ ಸ್ಕೂಲ್‌ನ ಆರಂಭಿಕ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಸೇರಕೊಳ್ಳುವ ಹಾದಿಯಲ್ಲಿ ತಮ್ಮ ವೈದ್ಯಕೀಯ ಶಾಲೆಯನ್ನು ಅವರು ತೊರೆದಿದ್ದರು. ಬಳಿಕ ಲಾಹೋರ್‌ನಲ್ಲಿರುವ ನಾರ್ದರ್ನ್ ಇಂಡಿಯಾ ಫ್ಲೈಯಿಂಗ್ ಕ್ಲಬ್‌ನಿಂದ ತಮ್ಮ ಸಿವಿಲ್ ಫ್ಲೈಯಿಂಗ್ ಪರವಾನಗಿಯನ್ನೂ ಅವರು ಪಡೆದರು. ಭಾರತೀಯ ವಾಯುಪಡೆಯ ವಾಲಂಟೀರ್‌ ರಿಸರ್ವ್‌ಗೆ ಸೇರ್ಪಡೆಯಾದ ಇವರು ಆ ಬಳಿಕ 1940ರ ಆಗಸ್ಟ್‌ನಲ್ಲಿ 4ನೇ ಪೈಲಟ್‌ ಕೋರ್ಸ್‌ಗೆ ನಿಯೋಜಿಸಲ್ಪಟ್ಟಿದ್ದರು. ಅವರು ಐಎಎಎಫ್‌ಗೆ ಸೇರಿದಾಗ, 1 ಸಾವಿರ ಗಂಟೆಗಳ ಹಾರಾಟದ ಅನುಭವ ಅವರಲ್ಲಿತ್ತು. ಐಟಿಎಸ್‌ ವಾಲ್ಟನ್‌ನಲ್ಲಿ ಅವರ ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು  ಮಧ್ಯಂತರ ಫ್ಲೈಯಿಂಗ್‌ ಟ್ರೇನಿಂಗ್‌ಗಾಗಿ ಅಂಬಾಲಾದ ಸರ್ವಿಸ್ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ (SFTS) ಗೆ ಕಳುಹಿಸಲಾಯಿತು. ಮುಖ್ಯ ಇನ್ಸಟ್ರಕ್ಟರ್ ಆಗಿ, ವಿಂಗ್ ಕಮಾಂಡರ್ ವುಕ್ಕುವಾನ್ ಸಿಂಪ್ಸನ್ (ರಾಯಲ್ ಏರ್ ಫೋರ್ಸ್), ಚಂದ್ರ ಅವರ ಸಾಮರ್ಥ್ಯಗಳಿಂದ ಪ್ರಭಾವಿತರಾದರು ಮತ್ತು ಭಾರತೀಯ ಪೈಲಟ್‌ಗಳನ್ನು ಸಹ ಇನ್ಸಟ್ರಕ್ಟರ್‌ ಆಗಿ ನೋಂದಾಯಿಸಿಕೊಳ್ಳುವಂತೆ ಶಿಫಾರಸು ಮಾಡಿದರು. ಚಂದ್ರ ಅವರು ತಮ್ಮ ಫ್ಲೈಯಿಂಗ್‌ ಟ್ರೇನಿಂಗ್‌ ಅನ್ನು 1941ರ ಮೇ ತಿಂಗಳಿನಲ್ಲಿ ಪೂರ್ಣಗೊಳಿಸಿ, ನಂಬರ್‌ 2 ಸ್ಕ್ವಾಡ್ರನ್‌ಗೆ ಸೇರಿದ್ದ ಅವರು, ಅಕ್ಟೋಬರ್‌ವರೆಗೂ ಅಲ್ಲಿಯೇ ಇದ್ದರು.

ಶೀಘ್ರದಲ್ಲೇ, ಅವರಿಗೆ ಫ್ಲೈಯಿಗ್‌ ಇನ್ಸಟ್ರಕ್ಟರ್‌ ಆಗಿ ನೇಮಿಸಲಾಯಿತು. ಇತರ ಮೂವರೊಂದಿಗೆ ಎಸ್‌ಎಫ್‌ಟಿಎಸ್‌ನಲ್ಲಿ ನಾಲ್ಕು ವಾರಗಳ ತರಬೇತಿ ಕಾರ್ಯಕ್ರಮಕ್ಕೆ ಹೋಗಿದ್ದಲ್ಲದೆ ಐಎಎಫ್‌ನಲ್ಲಿ ಮೊದಲ ಫ್ಲೈಯಿಗ್‌ ಇನ್ಸಟ್ರಕ್ಟರ್‌ ಆಗಿ ಹೊರಹೊಮ್ಮಿದರು. ಆ ಬಳಿಕ ಅವರು ಪೇಶಾವರ ಹಾಗೂ ಬರ್ಮಾದಲ್ಲಿ 7 ಸ್ಕ್ವಾಡ್ರನ್‌ನಲ್ಲಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದರೆ,  ನಂತರ ಕಮಾಂಡಿಂಗ್ ಆಫೀಸರ್ ಆಗಿ 4 ಸ್ಕ್ವಾಡ್ರನ್‌ನೊಂದಿಗೆ ಸುದೀರ್ಘ ಅವಧಿ ಸೇವೆ ಸಲ್ಲಿಸಿದರು.

ರಾಯಲ್ ನೌಕಾಪಡೆಯ ವಿಮಾನವಾಹಕ ನೌಕೆಯಲ್ಲಿ ಒಕ್ಯುಪೇಶನ್‌ ಪಡೆಗಳ ಭಾಗವಾಗಿ ಜಪಾನ್‌ಗೆ ಹೋಗಲು ಚಂದ್ರ ಅವರ 4 ಸ್ಕ್ವಾಡ್ರನ್ ಅನ್ನು ಆಯ್ಕೆ ಮಾಡಲಾಯಿತು. ಈ ಹಂತದಲ್ಲಿ ಸ್ಪಿಟ್‌ಫೈರ್‌ ಜೆಟ್‌ಗಳ ರೆಕ್ಕೆಯ ತುದಿಯ ವಿಸ್ತರಣೆಗಳೊಂದಿಗೆ ಅಳವಡಿಸಲಾಗಿತ್ತು ಮತ್ತು ಸಣ್ಣ ಟೇಕ್-ಆಫ್‌ಗಳಿಗೆ ಸೂಕ್ತವಾದ ಸ್ಥಾನದಲ್ಲಿ ಫ್ಲಾಪ್‌ಗಳನ್ನು ಹಿಡಿದಿಡಲು ಮರದ ಪೆಗ್‌ಗಳನ್ನು ಅಭಿವೃದ್ಧಿಪಡಿಸಲಾಯಿತು.. ಸ್ವಾತಂತ್ರ್ಯದ ನಂತರ, ಅವರು ಐಎಎಫ್‌ನಲ್ಲಿ ನಿರ್ಧರಿತ "ಟ್ರೇನಿಂಗ್‌ ಮ್ಯಾನ್‌' ಎಂದು ಹೇಳಲಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ, ಅವರನ್ನು ವಿಂಗ್ ಕಮಾಂಡರ್ (ತರಬೇತಿ) ಆಗಿ ನೇಮಿಸಲಾಗಿತ್ತಲ್ಲದೆ, ಇದು ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ತರಬೇತಿಯ ವಾಸ್ತವಿಕ ಮುಖ್ಯಸ್ಥರಾಗಿದ್ದರು.

ನವೆಂಬರ್ 1955 ರಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ಪಡೆದ ಬಳಿಕ, ಅವರು ಜೋಧ್‌ಪುರದ ಏರ್ ಫೋರ್ಸ್ ಫ್ಲೈಯಿಂಗ್ ಕಾಲೇಜ್‌ನ (AFFC) ಕಮಾಂಡೆಂಟ್ ಆಗಿ ನೇಮಕಗೊಂಡರು, ಅವರು ಸುಮಾರು ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ತರಬೇತಿಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಹಿರಿಯ ಏರ್ ಮತ್ತು ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಆಫೀಸರ್ ಮೆಂಟೆನೆನ್ಸ್ ಕಮಾಂಡರ್ ಮತ್ತು ಸ್ಟೇಷನ್ ಕಮಾಂಡರ್, AFND ಆಗಿ ಸಂಕ್ಷಿಪ್ತ ಅವಧಿಗೆ ಸೇವೆ ಸಲ್ಲಿಸಿದ್ದರು.

From the IAF Vault: ಭಾರತದ ಮೊದಲ ಐಎಎಫ್‌ ಚೀಫ್‌ ಆಯ್ಕೆ ಮಾಡಿದ್ದು ಹೇಗೆ?

ಅಂತಿಮವಾಗಿ, ಅವರನ್ನು ಹಿರಿಯ ಏರ್ ಸ್ಟಾಫ್ ಅಧಿಕಾರಿಯಾಗಿ ಟ್ರೇನಿಂಗ್‌ ಕಮಾಂಡ್‌ಗೆ ನಿಯೋಜಿಸಲಾಯಿತು. ಅವರು ಅಲ್ಲಿಂದ ಎಲ್ಲಿಗೆ ತೆರಳಿದರು ಎಂಬುದು ಅಸ್ಪಷ್ಟವಾಗಿದೆ ಆದರೆ 1968 ರಲ್ಲಿ ಐಎಎಫ್‌ನಿಂದ ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆದರು ಮತ್ತು 1991 ರಲ್ಲಿ ನಿಧನರಾದರು. ಅವರ ವೃತ್ತಿಜೀವನದ ಅವಧಿಯಲ್ಲಿ ಅವರು ಸುಮಾರು 20 ವಿವಿಧ ವಿಮಾನಗಳನ್ನು ಹಾರಿಸಿದ್ದರು ಮತ್ತು 3,000 ಫ್ಲಯಿಂಗ್‌ ಅವರ್ಸ್‌ ಕಾಲ ಹಾರಾಟ ನಡೆಸಿದರು. ಐಎಎಫ್‌ನಲ್ಲಿ ತರಬೇತಿಯ ವಿಭಾಗದ ದೊಡ್ಡ ವ್ಯಕ್ತಿಯಾಗಿ ಅವರು ಬಹುಶಃ ಹೆಚ್ಚಿನ ಕ್ರೆಡಿಟ್ ಮತ್ತು ಪ್ರಚಾರಕ್ಕೆ ಅರ್ಹರಾಗಿದ್ದರು.

ಗಲ್ವಾನ್ ಘರ್ಷೆಣೆಯಲ್ಲಿ ಭಾರತಕ್ಕೆ ನೆರವಾಗಿದ್ದು 1948ರಲ್ಲಿ ನಿರ್ಮಾಣವಾದ ಏರ್‌ಸ್ಟ್ರಿಪ್!

Follow Us:
Download App:
  • android
  • ios