Aurangzeb: ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ಬಳಿಕ ಔರಂಗಜೇಬ್ ಕುರಿತು ಚರ್ಚೆಗಳು ನಡೆಯುತ್ತಿವೆ. ಔರಂಗಜೇಬ್ ತನ್ನ ಮಗಳನ್ನು 20 ವರ್ಷ ಜೈಲಿನಲ್ಲಿಟ್ಟಿದ್ದ ಮತ್ತು ಆತನ ಕ್ರೂರ ನೀತಿಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

Aurangzeb: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಛಾವಾ ಸಿನಿಮಾ ಬಳಿಕ ಮೊಘಲ ರಾಜ ಔರಂಗಜೇಬ್ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಜನರು ಸಹ ಮೊಘಲ್ ರಾಜ ಔರಂಗಜೇಬ್ ಕುರಿತು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಔರಂಗಜೇಬನ ಪೂರ್ಣ ಹೆಸರು ಅಬ್ದುಲ್ ಮುಜಾಫರ್ ಮುಹಿಯುದ್ದೀನ್ ಔರಂಗಜೇಬ್ ಅಲಂಗೀರ್. ಮೊಘಲ್ ಸಾಮ್ರಾಜ್ಯದ ಆರನೇ ದೊರೆಯಾದ ಔರಂಗಜೇಬ್, ತನ್ನ ಕಠಿಣ ನೀತಿಗಳು ಮತ್ತು ಕಟ್ಟುನಿಟ್ಟಿನ ನಿಯಮಗಳಿಗೆ ಹೆಸರುವಾಸಿಯಾಗಿದ್ದನು. ಅಧಿಕಾರಕ್ಕಾಗಿ ಸೋದರನ ಕೊಲೆ, ತಂದೆ ಷಹಜಾನ್‌ಗೆ ಜೈಲುವಾಸ, ಸ್ವಂತ ಮಗಳು ಜೆಬುನ್ನಿಸಾಳನ್ನೇ 20 ವರ್ಷ ಜೈಲಿಗೆ ಹಾಕಿದ್ದನು. 20 ವರ್ಷದ ಬಳಿಕ ಮಗಳನ್ನು ಏನು ಮಾಡಿದ ಅಂತ ತಿಳಿದ್ರೆ ನಿಮ್ಮ ರೋಮ ರೋಮಗಳಲ್ಲಿ ಆಕ್ರೋಶದ ಜ್ವಾಲೆ ಹುಟ್ಟಿಕೊಳ್ಳುತ್ತದೆ. 

ಮೊಘಲ್ ಚಕ್ರವರ್ತಿ ಔರಂಗಜೇಬನ ಕ್ರೂರ ನೀತಿಗಳು ಮತ್ತು ದೌರ್ಜನ್ಯಗಳು

1.ಅಧಿಕಾರ ಪಡೆದುಕೊಳ್ಳಲು ತನ್ನ ಸೋದರ ದಾರಾಶಿಕೋನನ್ನು ಕೊಲ್ಲಿಸುತ್ತಾನೆ. ಅಧಿಕಾರಕ್ಕೆ ಅಡ್ಡಿಯಾದ ತಂದೆ ಷಹಜಹಾನ್‌ನನ್ನು ಆಗ್ರಾ ಕೋಟೆಯಲ್ಲಿ ಗೃಹಬಂಧನದಲ್ಲಿರಿಸುತ್ತಾನೆ. ಇದರಿಂದಾಗಿ ಷಹಜಹಾನ್ ಗೃಹಬಂಧನದಲ್ಲಿಯೇ ಸಾಯುತ್ತಾನೆ.

2.ಛತ್ರಪತಿ ಸಂಭಾಜಿ ಮಹಾರಾಜರನ್ನು ಸೆರೆಹಿಡಿದ ನಂತರ ಅವರಿಗೆ ಕ್ರೂರ ಚಿತ್ರಹಿಂಸೆ ನೀಡಲಾಯ್ತು. ಛತ್ರಪತಿ ಸಂಭಾಜಿ ಮಹಾರಾಜರ ಕಣ್ಣುಗಳನ್ನು ಕಿತ್ತು, ನಾಲಿಗೆಯನ್ನು ಕತ್ತರಿಸಲಾಯ್ತು. ನಂತರ ಅವರ ದೇಹವನ್ನು ಸಂಪೂರ್ಣವಾಗಿ ವಿರೂಪಗೊಳಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಮರಾಠಾ ಯೋಧರ ವಿರುದ್ಧ ಕ್ರೌರ್ಯ ತೋರಿಸಲಾಗುತ್ತದೆ.

3. ಗುರು ತೇಜ್ ಬಹದ್ದೂರ್ ಅವರನ್ನು ಇಸ್ಲಾಂ ಧರ್ಮ ಸ್ವೀಕರಿಸಲು ಬಲವಂತವಾಗಿ ಒತ್ತಡ ಹಾಕಲಾಗುತ್ತದೆ. ಇಸ್ಲಾಂಗೆ ಮತಾಂತರಗೊಳ್ಳಲು ಒಪ್ಪದಿದ್ದಾಗ ಗುರು ತೇಜ್ ಬಹದ್ದೂರ್‌ ಅವರನ್ನು ಜೈಲಿನಲ್ಲಿರಿಸಿ ಚಿತ್ರಹಿಂಸೆ ನೀಡಿ ಕೊಲ್ಲಲಾಯ್ತು. 

4.ರಾಜ ಅಕ್ಬರ್ ರದ್ದುಗೊಳಿಸಿದ ಜಜಿಯಾ ತೆರಿಗೆಯನ್ನು ಔರಂಗಜೇಬ್ ಮತ್ತೆ ವಿಧಿಸುತ್ತಾನೆ. ಇದರಿಂದ ಹಿಂದೂಗಳು ಭಾರೀ ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಔರಂಗಬೇಬ್ ಆಡಳಿತಾವಧಿಯಲ್ಲಿ ಕಾಶಿ ವಿಶ್ವನಾಥ, ಕೃಷ್ಣ ಜನ್ಮಭೂಮಿ ಮತ್ತು ಸೋಮನಾಥದಂತಹ ಅನೇಕ ಪ್ರಮುಖ ದೇವಾಲಯಗಳು ನಾಶವಾದವು ಎಂದು ಹೇಳಲಾಗುತ್ತದೆ.

5.ಮೇವಾರ್ ಮತ್ತು ಮಾರ್ವಾರ್‌ನ ರಜಪೂತ ಆಡಳಿತಗಾರರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲಾಯಿತು. ಮಾರ್ವಾರ್‌ನ ರಾಣಿ, ಅಜಿತ್ ಸಿಂಗ್‌ನ ತಾಯಿ ಕೂಡ ಅಮಾನವೀಯ ವರ್ತನೆಯನ್ನು ಸಹಿಸಬೇಕಾಯಿತು. 

6.ಅನೇಕ ಭಕ್ತಿ ಸಂತರು, ವಿಶೇಷವಾಗಿ ಸಂತ ರಾಮದಾಸರು, ಕಿರುಕುಳಕ್ಕೊಳಗಾದರು. ಹಿಂದೂ ಆಶ್ರಮಗಳು ಮತ್ತು ದೇವಾಲಯಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

7.ಬಿಜಾಪುರ ಮತ್ತು ಗೋಲ್ಕೊಂಡದಂತಹ ರಾಜ್ಯಗಳನ್ನು ಆಕ್ರಮಿಸಿ ಅವುಗಳ ಆಡಳಿತಗಾರರನ್ನು ತೆಗೆದುಹಾಕಿದರು. ಯುದ್ಧದ ಸಮಯದಲ್ಲಿ ಸೈನಿಕರು ಮಹಿಳೆಯರನ್ನು ಲೂಟಿ ಮಾಡಿದರು, ಕೊಂದರು ಮತ್ತು ಹಿಂಸಿಸಿದರು.

8.ಲಕ್ಷಾಂತರ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಪ್ರಯತ್ನಗಳು ನಡೆದವು. ಸಾರ್ವಜನಿಕರ ಮೇಲಿನ ದೌರ್ಜನ್ಯಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಸಾಮಾನ್ಯವಾಗಿದ್ದವು. 

ಇದನ್ನೂ ಓದಿ: 300 ವರ್ಷಗಳಿಂದ ಔರಂಗಜೇಬ್ ಸಮಾಧಿ ನಿರ್ವಹಿಸುತ್ತಿರೋ ಕುಟುಂಬಕ್ಕೆ ಸಿಗ್ತಿರೋ ಸಂಬಳ ಎಷ್ಟು?

ಜೆಬುನ್ನೀಸಾ ಯಾರು?
ಔರಂಗಜೇಬನ ಹಿರಿಯ ಮತ್ತು ಅತ್ಯಂತ ಬುದ್ಧಿವಂತ ಮಗಳೇ ಜೆಬುನ್ನೀಸಾ. 1638 ರ ಫೆಬ್ರವರಿ 15 ರಂದು ಜನಿಸಿದ ಜೆಬುನ್ನೀಸಾ, ಬಾಲ್ಯದಿಂದಲೂ ಅಧ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿದ್ದಳು. ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದ ಜೆಬುನ್ನೀಸಾ, ತನ್ನ 7ನೇ ವಯಸ್ಸಿನಲ್ಲಿ ಹಫೀಜ್ (ಕುರಾನ್ ಓದಿದ ಪರಿಣಿತೆ) ಆಗಿದ್ದಳು. ಆರಂಭದಲ್ಲಿ ಮಗಳಿಗೆ ಔರಂಗಜೇಬ್ ಪ್ರೋತ್ಸಾಹ ನೀಡುತ್ತಿದ್ದನು. ಆದ್ರೆ ನಂತರದ ದಿನಗಳಲ್ಲಿ ಜೆಬುನ್ನೀಸಾ ಆಸಕ್ತಿ ಸಾಹಿತ್ಯ, ಸೂಫಿ ಚಿಂತನೆಗಳು ಮತ್ತು ಇತರ ಧರ್ಮಗಳ ಬೋಧನೆಗಳಲ್ಲಿ ಹೆಚ್ಚಾಯ್ತು. ಇದು ಔರಂಗಜೇಬ್‌ನ ಕೋಪಕ್ಕೆ ಕಾರಣವಾಯ್ತು. ಪರ್ಷಿಯನ್ ಮತ್ತು ಅರೇಬಿಕ್ ಸಾಹಿತ್ಯದಲ್ಲಿ ಪ್ರಾವಿಣ್ಯತೆ ಹೊಂದಿದ್ದ, ಜೆಬುನ್ನೀಸಾ ಬರೆದ ಕವಿತೆಗಳು "ಮಖ್ಫಿ" (ರಹಸ್ಯ) ಎಂಬ ಹೆಸರಿನಿಂದ ಫೇಮಸ್ ಆಗಿದ್ದವು.

ಮಗಳನ್ನು ಜೈಲಿಗೆ ಹಾಕಿದ್ದೇಕೆ?
ಇತಿಹಾಸದ ಕೆಲವು ವರದಿಗಳ ಪ್ರಕಾರ, ಬುಂದೇಲ್‌ಖಂಡದ ಮಹಾರಾಜ ಛತ್ರಸಾಲನತ್ತ ಜೆಬುನ್ನೀಸಾ ಆಕರ್ಷಿತಳಾಗಿದ್ದಳು. ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಬಳಿಕ ಜೆಬುನ್ನೀಸಾಗೆ ಬುಂದೇಲ್‌ಖಂಡದ ರಾಜನ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗುತ್ತದೆ. ಇನ್ನು ಕೆಲವು ಇತಿಹಾಸಕಾರರ ಪ್ರಕಾರ, 1666 ರ ಮೇ 12 ರಂದು ಆಗ್ರಾ ಕೋಟೆಯಲ್ಲಿ ಔರಂಗಜೇಬ್ ಮತ್ತು ಛತ್ರಪತಿ ಶಿವಾಜಿಯ ಭೇಟಿಯ ಸಮಯದಲ್ಲಿ, ಜೆಬುನ್ನೀಸಾ ಕೂಡ ಆಸ್ಥಾನದಲ್ಲಿದ್ದರು. ಈ ವೇಳೆ ಛತ್ರಪತಿ ಶಿವಾಜಿ ಅವರತ್ತ ಜೆಬುನ್ನೀಸಾ ಆಕರ್ಷಿತರಾಗಿದ್ದರು ಎಂದು ಹೇಳಲಾಗುತ್ತದೆ. ಹಲವು ಸಂದರ್ಭಗಳಲ್ಲಿ ತಂದೆಯ ಧಾರ್ಮಿಕ ನೀತಿಗಳನ್ನು ಜೆಬುನ್ನೀಸಾ ವಿರೋಧಿಸಿದ್ದಳು. ಮತ್ತೊಂದು ಕಥೆಯ ಪ್ರಕಾರ ಯುವ ರಾಜಕುಮಾರ ಅಕ್ರಮ್ ಖಾನ್ ಕಡೆಗೆ ಜೆಬುನ್ನೀಸಾ ಆಕರ್ಷಿತಳಾಗಿದ್ದಳು. ಈ ವಿಷಯ ತಿಳಿದ ಔರಂಗಜೇಬ್‌, ಮಗಳನ್ನು ಬಂಧಿಸಿ ದೆಹಲಿಯ ಸಲೀಮ್‌ಗಢ ಕೋಟೆಯಲ್ಲಿರಿಸಿದನು ಎಂದು ಹೇಳಲಾಗುತ್ತದೆ. 

ಸುಮಾರು 20 ವರ್ಷಗಳ ಕಾಲ ಜೈಲಿನಲ್ಲಿಯೇ ಇದ್ದ ಜೆಬುನ್ನೀಸಾ ಕೊನೆಯುಸಿರೆಳೆಯುತ್ತಾಳೆ. ಜೆಬುನ್ನೀಸಾ ನಿಧನದ ನಂತರ ಆಕೆಯ ಶವವನನ್ನು ಅನಾಮಧೇಯವಾಗಿ ಸಮಾಧಿ ಮಾಡಲಾಗುತ್ತದೆ. ಈ ಘಟನೆಯು ಅಧಿಕಾರಕ್ಕಾಗಿ ತನ್ನ ಸ್ವಂತ ಕುಟುಂಬದ ಸದಸ್ಯರ ಮೇಲೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯದ ಔರಂಗಜೇಬನ ಕ್ರೂರತನವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ V/s ಶಾಹಿ ಈದ್ಗಾ ಮಸೀದಿ ವಿವಾದ- ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ