Asianet Suvarna News Asianet Suvarna News

ನಮ್ಮ ಅಭಿವೃದ್ಧಿ ಅಲೆಯಲ್ಲಿ ಓಲೈಕೆ ರಾಜಕಾರಣ ಮಾಯ: ಮೋದಿ

ಉತ್ತರ ಪ್ರದೇಶ ಅಭಿವೃದ್ಧಿಯ ಸುನಾಮಿ ವೇಗವಾಗಿ ಸಾಗುತ್ತಿದ್ದು, ಇದರ ನಡುವೆ ಓಲೈಕೆ ರಾಜಕಾರಣ ಮತ್ತು ಸ್ವಜನಪಕ್ಷಪಾತಗಳು ಕೊಚ್ಚಿಕೊಂಡು ಹೋಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ, ಯಾದವ್‌ ಕುಟುಂಬದ ಭದ್ರಕೋಟೆಯೆಂದು ಬಿಂಬಿತವಾಗಿರುವ ಆಜಂಗಢದಲ್ಲಿ ವಾಗ್ದಾಳಿ ನಡೆಸಿದರು.

The politics of persuasion is missing in our development wave: PM Narendra Modi Targets opposition in UP akb
Author
First Published Mar 11, 2024, 8:29 AM IST

ಆಜಂಗಢ: ಉತ್ತರ ಪ್ರದೇಶ ಅಭಿವೃದ್ಧಿಯ ಸುನಾಮಿ ವೇಗವಾಗಿ ಸಾಗುತ್ತಿದ್ದು, ಇದರ ನಡುವೆ ಓಲೈಕೆ ರಾಜಕಾರಣ ಮತ್ತು ಸ್ವಜನಪಕ್ಷಪಾತಗಳು ಕೊಚ್ಚಿಕೊಂಡು ಹೋಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ, ಯಾದವ್‌ ಕುಟುಂಬದ ಭದ್ರಕೋಟೆಯೆಂದು ಬಿಂಬಿತವಾಗಿರುವ ಆಜಂಗಢದಲ್ಲಿ ವಾಗ್ದಾಳಿ ನಡೆಸಿದರು.

ಆಜಂಗಢದಲ್ಲಿ ಉತ್ತರ ಪ್ರದೇಶದ 42 ಸಾವಿರ ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ‘ಸಮಾಜವಾದಿ ಪಕ್ಷದ ಯಾದವ್‌ ಕುಟುಂಬ ಆಜಂಗಢವನ್ನು ತಮ್ಮ ಭದ್ರಕೋಟೆಯೆಂದು ಪರಿಗಣಿಸಿದ್ದಕ್ಕೆ ಜನ ಉಪಚುನಾವಣೆಯಲ್ಲಿ ಅವರ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

ಪುಟಿನ್‌ ಸಂಪರ್ಕಿಸಿ ಉಕ್ರೇನ್ ಮೇಲೆ ರಷ್ಯಾ ಸಂಭಾವ್ಯ ನ್ಯೂಕ್ಲಿಯರ್ ದಾಳಿ ತಡೆದಿದ್ದ ಮೋದಿ, CNN ವರದಿ!

ಇದೇ ವೇಳೆ, ‘ಕೆಲವರು ನನಗೆ ಕುಟುಂಬವಿಲ್ಲ ಎಂದು ಮೂದಲಿಸುತ್ತಾರೆ. ಆದರೆ ದೇಶಾದ್ಯಂತ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಒಳಿತನ್ನು ಮಾಡಿ ದೇಶದ ಜನರು ನನ್ನ ಪರಿವಾರವಾಗಿದ್ದಾರೆ ಎಂಬುದನ್ನು ಅವರು ಮರೆತು ನನ್ನನ್ನು ಮೂದಲಿಸುತ್ತಾರೆ’ ಎಂದು ಪರೋಕ್ಷವಾಗಿ ಲಾಲು ಪ್ರಸಾದ್‌ ಯಾದವ್‌ಗೆ ತಿರುಗೇಟು ನೀಡಿದರು.

ಅಭಿವೃದ್ಧಿಯಲ್ಲಿ ಹೊಸ ಭಾಷ್ಯ:

ಈ ವೇಳೆ ಅಭಿವೃದ್ಧಿಯ ವೇಗದ ಕುರಿತು ಮಾತನಾಡುತ್ತಾ, ‘ಒಂದು ಕಾಲದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆಗೆ ಸಾಕ್ಷಿಯಾಗಲು ವಿವಿಧ ರಾಜ್ಯಗಳಿಂದ ದೆಹಲಿಗೆ ಜನ ಆಗಮಿಸುತ್ತಿದ್ದರು. ಆದರೆ ಇಂದು ಇಡೀ ದೇಶದ ಅಭಿವೃದ್ಧಿ ಯೋಜನೆಗೆ ಆಜಂಗಢದ ಮೂಲಕ ಚಾಲನೆ ನೀಡಲಾಗಿದೆ. ಈ ಮೂಲಕ ಆಜಂಗಢ ಅಭಿವೃದ್ಧಿಯಲ್ಲಿ ಹೊಸ ಮನ್ವಂತರದತ್ತ ಸಾಗಿ ಹೊಸ ಭಾಷ್ಯ ಸೃಷ್ಟಿಸಿದೆ’ ಎಂದು ಶ್ಲಾಘಿಸಿದರು.

ಮೋದಿ ಬೇರೆಯದ್ದೇ ಲೋಕದ ವ್ಯಕ್ತಿ: ಪ್ರಧಾನಿ

ಆಜಂಗಢ (ಉ.ಪ್ರ.): ‘ಹಿಂದಿನ ಸರ್ಕಾರಗಳು ಕೇವಲ ಯೋಜನೆ ಘೋಷಿಸಿ ಬಳಿಕ ಅವುಗಳನ್ನು ಮರೆತು ಸುಮ್ಮನಾಗುತ್ತಿದ್ದವು. ಆದರೆ ನಾವು ಹಾಗಲ್ಲ, ಯೋಜನೆಗಳನ್ನು ಬರಿ ಘೋಷಿಸಿ ಸುಮ್ಮನಾಗಿಲ್ಲ, ಬದಲಾಗಿ ಪೂರ್ಣಗೊಳಿಸಿ ತೋರಿಸಿದ್ದೇವೆ. ಹೀಗಾಗಿ ಇಂದು ದೇಶದ ಜನತೆ ‘ಮೋದಿ ಈ ಲೋಕದ ವ್ಯಕ್ತಿಯಲ್ಲ, ಬೇರೆಯದ್ದೇ ಲೋಕದ ವ್ಯಕ್ತಿ ಎಂಬುದನ್ನು ಕಂಡುಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಬಣ್ಣಿಸಿಕೊಂಡರು.

ಗಂಡ ಮೋದಿ ಘೋಷಣೆ ಕೂಗಿದರೆ ಊಟ ಕೊಡಬೇಡಿ, ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ!

ಭಾನುವಾರ ಇಲ್ಲಿ ದೇಶದ ವಿವಿಧ ರಾಜ್ಯಗಳ 12 ವಿಸ್ತರಿತ ಟರ್ಮಿನಲ್‌ಗಳಿಗೆ ಚಾಲನೆ ಮತ್ತು ಹುಬ್ಬಳ್ಳಿ, ಬೆಳಗಾವಿ ಮತ್ತು ಕಡಪಾ ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್‌ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ‘ಇಂದಿನ ಟರ್ಮಿನಲ್‌ ಉದ್ಘಾಟನೆಯೊಂದಿಗೆ ದೇಶದ ವಿಮಾನ ನಿಲ್ದಾಣಗಳ ವಾರ್ಷಿಕ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯ 6 ಕೋಟಿಗೆ ತಲುಪಿದೆ. ಈ ವಿಮಾನ ನಿಲ್ದಾಣ, ಹೆದ್ಧಾರಿ ಮತ್ತು ರೈಲ್ವೆ ನಿಲ್ದಾಣಗಳ ಉದ್ಘಾಟನೆಯನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಬಾರದು. ಇದು ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುವ ನನ್ನ ಅಭಿವೃದ್ಧಿಯ ಒಂದು ಪಯಣ’ ಎಂದು ಬಣ್ಣಿಸಿದರು.

‘ಹಿಂದೆಲ್ಲಾ ಸರ್ಕಾರಗಳು ಯೋಜನೆ ಘೋಷಿಸಿ ಸುಮ್ಮನಾಗಿ ಬಿಡುತ್ತಿದ್ದವು. ಅವುಗಳಿಗೆ ಏನಾಯಿತು ಎಂದು ಜನತೆ ಅಚ್ಚರಿಪಡುತ್ತಿದ್ದರು. ಆದರೆ ಇಂದು ದೇಶದ ಜನತೆ ಮೋದಿ ಈ ಲೋಕದ ವ್ಯಕ್ತಿಯಲ್ಲ, ಬೇರೆಯದ್ದೇ ಲೋಕಕ್ಕೆ ಸೇರಿದ ವ್ಯಕ್ತಿ (ಮೋದಿ ದೂಸ್ರಿ ಮಿಟ್ಟಿ ಕೀ ಇನ್ಸಾನ್‌ ಹೈ) ಎಂಬುದನ್ನು ಕಂಡುಕೊಂಡಿದ್ದಾರೆ. ಈಗ ಏನೆಲ್ಲಾ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆಯೋ ಅದನ್ನೆಲ್ಲಾ ಪೂರ್ಣಗೊಳಿಸಲಾಗುತ್ತಿದೆ’ ಎಂದು ಹೇಳಿದರು.

Follow Us:
Download App:
  • android
  • ios