* ಸೀರೆ ಧರಿಸಿದ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ರೆಸ್ಟೋರೆಂಟ್* ವಿವಾದದ ಬಳಿಕ ನಡೆದ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿತ್ತು ಅಕ್ರಮ* ರೆಸ್ಟೋರೆಂಟ್‌ಗೆ ಬೀಗ ಹಾಕಿದ ಪಾಲಿಕೆ

ನವದೆಹಲಿ(ಸೆ.30): ಕಳೆದ ವಾರವಷ್ಟೇ ದೆಹಲಿಯ ರೆಸ್ಟೋರೆಂಟ್‌(Restaurant) ಒಂದು ಮಹಿಳೆಯೊಬ್ಬಳಿಗೆ ಸೀರೆ(Saree) ಧರಿಸಿದ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿ ಭಾರೀ ವಿವಾದಕ್ಕೀಡಾಗಿತ್ತು. ಮಹಿಳೆ ಈ ಸಂಬಂಧ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಬಳಿಕ ರೆಸ್ಟೋರೆಂಟ್‌ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೀಗ ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಪ್ರತಿಷ್ಠಿತ ರೆಸ್ಟೋರೆಂಟ್‌(Restaurant) ಮುಚ್ಚುವಂತೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್( Delhi Municipal Corporation) ಸೂಚಿಸಿದೆ.

ಸೀರೆಯುಟ್ಟವರಿಗೆ ರೆಸ್ಟೋರೆಂಟ್‌ಗೆ ನೋ ಎಂಟ್ರಿ, ನೋಟಿಸ್‌ ಕಳುಹಿಸಿದ ಮಹಿಳಾ ಆಯೋಗ!

ಏನಿದು ಪ್ರಕರಣ?

ಈಸೆಪ್ಟೆಂಬರ್ 19ರಂದು ಈ ಘಟನೆ ನಡೆದಿದ್ದು, ಅನಿತಾ ಚೌಧರಿ ಹೆಸರಿನ ಮಹಿಳೆ ಟ್ವಿಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆಕೆ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಲು ರೆಸ್ಟೋರೆಂಟ್‌ಗೆ ಬಂದಿದ್ದರು. ಈ ವೇಳೆ ಅನಿತಾ ಸೀರೆಯುಟ್ಟಿದ್ದರೆ, ಮಗಳು ಪಾಶ್ಚಿಮಾತ್ಯ ಉಡುಗೆ ಧರಿಸಿದ್ದಳು. ಇನ್ನು ಅನಿತಾ ತಾನು ಮೊದಲೇ ಬುಕ್ಕಿಂಗ್ ಮಾಡಿದ್ದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ತಾಯಿ, ಮಗಳು ಇಬ್ಬರೂ ರೆಸ್ಟೋರೆಂಟ್ ತಲುಪಿದಾಗ, ಸಿಬ್ಬಂದಿ ಅವರನ್ನೇ ಗುರಾಯಿಸಿಕೊಂಡು ನೋಡಿದ್ದಾರೆ. ಈ ನಡುವೆ ಸಿಬ್ಬಂದಿ ತನ್ನ ಮಗಳನ್ನು ಒಂದು ಬದಿಗೆ ಕರೆದೊಯ್ದು ಒಳಗೆ ಹೋಗದಂತೆ ತಡೆದಿದ್ದಾರೆಂದು ಅನಿತಾ ಹೇಳಿದ್ದರು. 

Scroll to load tweet…

ಅಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗದ ಹೊರತಾಗಿ, ಮಹಿಳೆ ಈ ವಿಡಿಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ಹರ್ದೀಪ್ ಸಿಂಗ್ ಪುರಿಗೆ ಟ್ಯಾಗ್ ಮಾಡಿ ದಯವಿಟ್ಟು ಸ್ಮಾರ್ಟ್ ಉಡುಪಿನ ಬಗ್ಗೆ ಹೇಳಿ, ಇದರಿಂದ ಅವಳು ಸೀರೆ ಧರಿಸುವುದನ್ನು ನಿಲ್ಲಿಸಲಿ ಎಂದೂ ಬರೆದಿದ್ದರು. 

ಲಾಭಕ್ಕಾಗಿ ಹಿಂದೂ ಸಂಪ್ರದಾಯದ ತಮಾಷೆ ಬೇಡ: ಆಲಿಯಾಗೆ ಕಂಗನಾ ಕ್ಲಾಸ್..!

ಆದರೆ ಈ ಘಟನೆ ಬೆನ್ನಲ್ಲೇ ಪ್ರಕಟಣೆ ಹೊರಡಿಸಿದ್ದ ರೆಸ್ಟೋರೆಂಟ್ ತನ್ನ ವಾದವನ್ನು ಮುಂದಿಟ್ಟಿತ್ತು. ಈ ಪೋಸ್ಟ್‌ನಲ್ಲಿ ರೆಸ್ಟೋರೆಂಟ್‌ ಸಿಸಿಟಿವಿಯ ಎರಡು ಸ್ನಿಪ್ ಕೂಡಾ ಶೇರ್ ಮಾಡಿತ್ತು. ಇದರಲ್ಲಿ ಮಹಿಳೆ ಹೋಟೆಲ್‌ ಮ್ಯಾನೇಜರ್‌ ಕಪಾಳಕ್ಕೆ ಬಾರಿಸುವ ಫೋಟೋ ಒಂದಾದರೆ, ಮತ್ತೊಂದರಲ್ಲಿ ಇನ್ನೂ ಅನೇಕ ಗ್ರಾಹಕರು ಸೀರೆ ಧರಿಸಿ ರೆಸ್ಟೋರೆಂಟ್‌ ಒಳಗೆ ಹೋಗುತ್ತಿದ್ದ ದೃಶ್ಯವೂ ಇತ್ತು. 

ಈ ರೆಸ್ಟೋರೆಂಟ್‌ನಲ್ಲಿ ನಾವು ಭಾರತೀಯ ಸಮುದಾಯಕ್ಕೆ ಗೌರವ ನೀಡುತ್ತೇವೆ. ಮಾಡೆರ್ನ್‌ನಿಂದ ಸಾಂಸ್ಕೃತಿಕ ಹೀಗೆ ಯಾವುದೇ ರೀತಿಯ ಬಟ್ಟೆ ಧರಿಸಿದ್ದರೂ ನಾವು ನಮ್ಮ ಗ್ರಾಹಕರನ್ನು ಸ್ವಾಗತಿಸುತ್ತೇವೆ. ಅಲ್ಲದೇ ಸೀರೆ ಸ್ಮಾರ್ಟ್‌ ಡ್ರೆಸ್‌ ಅಲ್ಲ ಎಂದು ಕಮೆಂಟ್‌ ಮಾಡಿದ ಗೇಟ್‌ ಮ್ಯಾನೇಜರ್‌ ಪರವಾಗಿ ರೆಸ್ಟೋರೆಂಟ್‌ ಈಗಾಗಲೇ ಕ್ಷಮೆ ಯಾಚಿಸಿದೆ ಎಂದೂ ತಿಳಿಸಿತ್ತು.

View post on Instagram

ಆದರೀಗ ಪಾಲಿಕೆ ಹೋಟೆಲ್‌ ಮುಚ್ಚುವಂತೆ ಆದೇಶ ಹೊರಡಿಸಿದೆ. ಹೀಗಿದ್ದರೂ ಈ ಆದೇಶದಲ್ಲಿ ಸೀರೆ ಕುರಿತಾದ ಯಾವುದೇ ವಿಚಾರ ಉಲ್ಲೇಖಿಸಲಾಗಿಲ್ಲ. ಆದರೆ ಈ ರೆಸ್ಟೋರೆಂಟ್‌ ಟ್ರೇಡ್‌ ಲೈಸನ್ಸ್‌ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ. ಇನ್ನು ಈ ರೆಸ್ಟೋರೆಂಟ್‌ ಸೆ. 27ರಿಂದಲೇ ಮುಚ್ಚಿದೆ ಎಂಬುವುದು ಉಲ್ಲೇಖನೀಯ. 

ದಾನ ಮಾಡೋಕೆ ನಾನೇನು ವಸ್ತೂನಾ ? ಕನ್ಯಾದಾನ ಕುರಿತು ನಟಿ ಆಲಿಯಾ ಕೇಸ್..!

ಇನ್ನು ಸೀರೆಯ ವಿಚಾರವಾಗಿ ಎದ್ದಿದ್ದ ವಿವಾದದ ಬಳಿಕ ಪರಿಶೀಲನೆ ನಡೆಸಿದಾಗ ರೆಸ್ಟೋರೆಂಟ್‌ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇದನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.