ಸೀರೆಯುಟ್ಟವರಿಗೆ ರೆಸ್ಟೋರೆಂಟ್‌ಗೆ ನೋ ಎಂಟ್ರಿ, ನೋಟಿಸ್ ಕಳುಹಿಸಿದ ಮಹಿಳಾ ಆಯೋಗ!
* ರೆಸ್ಟೋರೆಂಟ್‌ಗೆ ಸೀರೆಯುಟ್ಟು ಬರುವಂತಿಲ್ಲ
* ಸೀರೆ ಧರಿಸಿ ಬಂದ ಮಹಿಳೆಗೆ ರೆಸ್ಟೋರೆಂಟ್ ಪ್ರವೇಶಿಸಲು ಬಿಡದ ಸಿಬ್ಬಂದಿ
* ವೈರಲ್ ಆಯ್ತು ವಿಡಿಯೋ, ರೆಸ್ಟೋರೆಂಟ್‌ಗೆ ಸಿಕ್ತು ನೋಟಿಸ್
ನವದೆಹಲಿ(ಸೆ.23): ಸೀರೆಯಲ್ಲಿ ಮಹಿಳೆಯ ಸೌಂದರ್ಯ ದುಪ್ಪಟ್ಟಾಗುತ್ತದೆ ಎಂಬ ಮಾತಿದೆ. ಆದರೀಗ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಸೀರೆಯುಟ್ಟ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಅನ್ಸಲ್ ಪ್ಲಾಜಾದಲ್ಲಿರುವ ಅಕ್ವಿಲಾ ರೆಸ್ಟೋರೆಂಟ್‌ನಲ್ಲಿ ಸೀರೆ ಧರಿಸಿದ ಮಹಿಳೆಗೆ ಪ್ರವೇಶ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಹಿಳಾ ಆಯೋಗವು(National Commission for Women) ನೋಟಿಸ್ ಜಾರಿಗೊಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ರೆಸ್ಟೋರೆಂಟ್(Restaurant) ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಲಾಭಕ್ಕಾಗಿ ಹಿಂದೂ ಸಂಪ್ರದಾಯದ ತಮಾಷೆ ಬೇಡ: ಆಲಿಯಾಗೆ ಕಂಗನಾ ಕ್ಲಾಸ್..!
ಟ್ವಿಟರ್ ನಲ್ಲಿ 16 ಸೆಕೆಂಡ್ ಗಳ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಮಹಿಳೆಯನ್ನು ಒಳಗೆ ಹೋಗದಂತೆ ತಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಿಳೆ,, ಅದರಲ್ಲಿ ಸೀರೆ ಉಟ್ಟು ಒಳಗೆ ಬರಬೇಡಿ ಎಂದು ಬರೆದಿರುವ ಡಾಕ್ಯುಮೆಂಟ್ ತೋರಿಸುವಂತೆ ಹೇಳಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.
ಏನಿದು ಪ್ರಕರಣ?
ಈಸೆಪ್ಟೆಂಬರ್ 19ರಂದು ಈ ಘಟನೆ ನಡೆದಿದ್ದು, ಅನಿತಾ ಚೌಧರಿ ಹೆಸರಿನ ಮಹಿಳೆ ಟ್ವಿಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆಕೆ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಲು ರೆಸ್ಟೋರೆಂಟ್‌ಗೆ ಬಂದಿದ್ದರು. ಈ ವೇಳೆ ಅನಿತಾ ಸೀರೆಯುಟ್ಟಿದ್ದರೆ, ಮಗಳು ಪಾಶ್ಚಿಮಾತ್ಯ ಉಡುಗೆ ಧರಿಸಿದ್ದಳು. ಇನ್ನು ಅನಿತಾ ತಾನು ಮೊದಲೇ ಬುಕ್ಕಿಂಗ್ ಮಾಡಿದ್ದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಾಯಿ, ಮಗಳು ಇಬ್ಬರೂ ರೆಸ್ಟೋರೆಂಟ್ ತಲುಪಿದಾಗ, ಸಿಬ್ಬಂದಿ ಅವರನ್ನೇ ಗುರಾಯಿಸಿಕೊಂಡು ನೋಡಿದ್ದಾರೆ. ಈ ನಡುವೆ ಸಿಬ್ಬಂದಿ ತನ್ನ ಮಗಳನ್ನು ಒಂದು ಬದಿಗೆ ಕರೆದೊಯ್ದು ಒಳಗೆ ಹೋಗದಂತೆ ತಡೆದಿದ್ದಾರೆಂದು ಅನಿತಾ ಹೇಳಿದ್ದಾರೆ. ಆದರೆ, ಮಹಿಳೆ ತನ್ನೊಂದಿಗೆ 19 ವರ್ಷದ ಮಗಳನ್ನು ಕರೆತಂದಿದ್ದರು. ಹೀಗಾಗೇ ಮದ್ಯಪಾನ ಮಾಡಲು ನಿಷೇಧಿತ ಪ್ರದೇಶಕ್ಕೆ ಹೋಗದಂತೆ ತಡೆದಿದ್ದೇವೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ವಾದಿಸಿದ್ದಾರೆ.
ದಾನ ಮಾಡೋಕೆ ನಾನೇನು ವಸ್ತೂನಾ ? ಕನ್ಯಾದಾನ ಕುರಿತು ನಟಿ ಆಲಿಯಾ ಕೇಸ್..!
ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಆರೋಪ
ಈ ವಿಚಾರ ಸೋಶಿಯಕ್ ಮಿಡಿಯಧಾಲ್ಲಿ ವೈರಲ್ ಆದ ಬೆನ್ನಲ್ಲೇ ರೆಸ್ಟೋರೆಂಟ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಮಹಿಳೆ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವುದಾಗಿ ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಅತ್ತ, ಅನಿತಾ ಿದೊಂದು ಸುಳ್ಳು ಆರೋಪ ಎಂದಿದ್ದಾರೆ. ಸೆಪ್ಟೆಂಬರ್ 20 ರಂದು ಅನಿತಾ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹೋಟೆಲ್ ಸಿಬ್ಬಂದಿಗಳು 'ನಾವು ಸ್ಮಾರ್ಟ್ ಕ್ಯಾಶುಯಲ್ ಗಳಿಗೆ ಮಾತ್ರ ಅವಕಾಶ ನೀಡುತ್ತೇವೆ ಮತ್ತು ಸೀರೆಗಳು ಸ್ಮಾರ್ಟ್ ಕ್ಯಾಶುಯಲ್ ಅಡಿಯಲ್ಲಿ ಬರುವುದಿಲ್ಲ' ಎಂದು ಹೇಳಿರುವುದು ಸ್ಪಚಷ್ಟವಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಹೊರತಾಗಿ, ಮಹಿಳೆ ಈ ವಿಡಿಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ಹರ್ದೀಪ್ ಸಿಂಗ್ ಪುರಿಗೆ ಟ್ಯಾಗ್ ಮಾಡಿ ದಯವಿಟ್ಟು ಸ್ಮಾರ್ಟ್ ಉಡುಪಿನ ಬಗ್ಗೆ ಹೇಳಿ, ಇದರಿಂದ ಅವಳು ಸೀರೆ ಧರಿಸುವುದನ್ನು ನಿಲ್ಲಿಸಲಿ ಎಂದೂ ಬರೆದಿದ್ದಾರೆ.