ಉದ್ಘಾಟನೆಗೆ ದಿನ ಮೊದಲು ಕುಸಿದು ಬಿತ್ತು 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆಯೊಂದು ಉದ್ಘಾಟನೆಗೆ ದಿನ ಮೊದಲು ಕುಸಿದು ಬಿದ್ದ ಆತಂಕಕಾರಿ ಘಟನೆ ನಡೆದಿದೆ. ಸೇತುವೆ ನಿಧಾನವಾಗಿ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

The bridge which was built at a cost of 12 crores collapsed before its inauguration in Bihars Araria akb

ಪಾಟ್ನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆಯೊಂದು ಉದ್ಘಾಟನೆಗೆ ದಿನ ಮೊದಲು ಕುಸಿದು ಬಿದ್ದ ಆತಂಕಕಾರಿ ಘಟನೆ ನಡೆದಿದೆ. ಸೇತುವೆ ನಿಧಾನವಾಗಿ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸೇತುವೆಯನ್ನು ಅರಾರಿಯಾದಲ್ಲಿ ಬಕ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ಸೇತುವೆ ಸಂಪೂರ್ಣವಾಗಿ ನೀರಿಗೆ ಬಿದ್ದು ಕ್ಷಣದಲ್ಲಿ ಕೊಚ್ಚಿ ಹೋಗಿದೆ. 

ಅರರಿಯಾ ಜಿಲ್ಲೆಯ ಕುರ್ಸಕಾಂತ್ ಹಾಗೂ ಸಿಕ್ತಿ ಎಂಬ ಎರಡು ಪ್ರದೇಶಗಳ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿ ಆಗಿಲ್ಲ. ಮುಳುಗುವ ಮೊದಲು ನಿಧಾನವಾಗಿ ಕುಸಿಯುತ್ತಿರುವ ದೃಶ್ಯ ವೈರಲ್ ಆದ ವೀಡಿಯೋದಲ್ಲಿ ಸೆರೆ ಆಗಿದೆ. ಸೇತುವೆ ಇರುವ ನದಿಯ ತೀರದಲ್ಲಿಯೇ ಮಕ್ಕಳು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿರುವುದು ಕೂಡ ವೀಡಿಯೋದಲ್ಲಿ ಕಂಡು ಬರುತ್ತಿದೆ. 

ನಿರ್ಮಾಣ ಹಂತದ ಭಾರತದ ಅತಿದೊಡ್ಡ ಸೇತುವೆ ಕುಸಿದು 1 ಸಾವು , 9 ಮಂದಿ ಗಂಭೀರ

ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಸೇತುವೆ ಕುಸಿದಿದೆ ಎಂದು ಸಿಕ್ತಿ ಶಾಸಕ ವಿಜಯ್‌ಕುಮಾರ್ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.  ಸೇತುವೆ ಕುಸಿಯಲು ಶುರುವಾಗುತ್ತಿದ್ದಂತೆ ತಮ್ಮ ಮೊಬೈಲ್ ಜೊತೆ ತೀರಕ್ಕೆ ಓಡಿ ಬಂದ ಮಕ್ಕಳು ಆ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸೇತುವೆ ನದಿಗೆ ಬೀಳುತ್ತಿದ್ದಂತೆ ಅದರ ಅವಶೇಷಗಳು ನೀರಿನಲ್ಲಿ ಮುಳುಗುತ್ತಿರುವ ದೃಶ್ಯಗಳು ಮಕ್ಕಳ ಮೊಬೈಲ್ ಫೋನ್‌ನಲ್ಲಿ ಸೆರೆ ಆಗಿದೆ. ಅಷ್ಟರಲ್ಲಿ ಇಡೀ ಸೇತುವೆಯೇ ಕುಸಿದು ಬೀಳುವುದನ್ನು ವೀಡಿಯೋ ತೋರಿಸುತ್ತಿದೆ. ಹೀಗಾಗಿ ಸೇತುವೆ ನಿರ್ಮಾಣಕ್ಕೆ ಮಾಡಿದ್ದ ಬರೀ ಫಿಲ್ಲರ್‌ಗಳು ಮಾತ್ರ ನದಿ ಮಧ್ಯೆ ಹಾಗೆಯೇ ನಿಂತಿರುವುದು ಕಾಣುತ್ತಿದೆ.

Viral Video: ಬೃಹತ್‌ ಹಡಗು ಡಿಕ್ಕಿ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಫ್ರಾನ್ಸಿಸ್‌ ಸ್ಕಾಟ್‌ ಕೀ ಬ್ರಿಜ್‌!

ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆಗಳು ಉದ್ಘಾಟನೆಗೂ ಮೊದಲೇ ಕುಸಿಯುವುದು ಹೊಸದೇನಲ್ಲ, ಈ ಹಿಂದೆ ಭಗಲ್ಪುರದ ಸೇತುವೆಯೂ ಹೀಗೆ ಉದ್ಘಾಟನೆ ಮಾಡುವ ಮೊದಲೇ ಕುಸಿದು ಬಿದ್ದಿತ್ತು.  ಈ ಸೇತುವೆ ಕುಸಿತಗಳು ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುತ್ತಿರುವ ಹಗರಣ ಹಾಗೂ ಭ್ರಷ್ಟಾಚಾರಗಳನ್ನು ಎತ್ತಿ ತೋರಿಸುತ್ತಿವೆ. ಆಗ ಕುಸಿದು ಬಿದ್ದ ನಿರ್ಮಾಣ ಹಂತದ ಸೇತುವೆಯೂ ಭಗಲ್ಪುರದಿಂದ ಖಗರಿಯಾಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದು ಕುಸಿದು ಬಿದ್ದಿದ್ದು ಇದೇ ಮೊದಲಲ್ಲ, ಈ ಹಿಂದೆ 2023ರ ಏಪ್ರಿಲ್‌ 30 ರಂದು ಕೂಡ ಮೊದಲ ಬಾರಿಗೆ ಕುಸಿದು ಬಿದ್ದಿತ್ತು. ಇದಾದ ನಂತರ ಜೂನ್ 4 ರಂದು ಕೂಡ ಒಮ್ಮೆ ಕುಸಿದಿತ್ತು. ಇದರಿಂದ ಬಿಹಾರ ಸಿಎಂ ನಿತೀಶ್‌ ಕುಮಾರ್ ಅವರು ರಾಜ್ಯದ ಸರ್ಕಾರಿ ಕಾಮಗಾರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. 

 

Latest Videos
Follow Us:
Download App:
  • android
  • ios