ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಲಿಸ್ಟ್ಲಿಸ್ಟ್ ನಲ್ಲಿದೆ ಇಂಡಿಯಾ ಮಾರ್ಟ್, ದೆಹಲಿಯ ಪಾಲಿಕಾ ಬಜಾರ್ಅಮೆರಿಕದ ವ್ಯಾಪಾರ ಪ್ರತಿನಿಧಿಯಿಂದ ಈ ಪಟ್ಟಿ ಬಿಡುಗಡೆ 

ನವದೆಹಲಿ (ಫೆ. 18): ಭಾರತದ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ( e-commerce website) ಇಂಡಿಯಾ ಮಾರ್ಟ್ ಡಾಟ್ ಕಾಮ್ (IndiaMart.com) ಮತ್ತು ನವದೆಹಲಿಯ ಪ್ರಸಿದ್ಧ ಪಾಲಿಕಾ ಬಜಾರ್ (Palika Bazaar) ಸೇರಿದಂತೆ ಇತರ ನಾಲ್ಕು ಮಾರುಕಟ್ಟೆಗಳು ಗುರುವಾರ ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ (US Trade Representative) ಬಿಡುಗಡೆ ಮಾಡಿದ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಇತ್ತೀಚಿನ ವಾರ್ಷಿಕ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. 2021 ರ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಪ್ರಪಂಚದಾದ್ಯಂತ 42 ಆನ್‌ಲೈನ್ ಮತ್ತು 35 ಭೌತಿಕ ಮಾರುಕಟ್ಟೆಗಳನ್ನು ಗುರುತಿಸಿದೆ. ನಕಲಿ ಟ್ರೇಡ್ ಮಾರ್ಕ್ ಅಥವಾ ಪೇಟೆಂಟ್ ಗಳ ಕಳ್ಳತನದಲ್ಲಿ ಈ ಮಾರುಕಟ್ಟೆಗಳು ತೊಡಗಿವೆ ಹಾಗೂ ಅತ್ಯಂತ ಸರಳವಾಗಿ ಇಲ್ಲಿ ಕಳ್ಳತನಗಳು ನಡೆಯುತ್ತದೆ ಎನ್ನುವ ಆಧಾರದಲ್ಲಿ ಕುಖ್ಯಾತ ಮಾರುಕಟ್ಟೆಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.

ಪಟ್ಟಿಯಲ್ಲಿನ ಇತರ ಮೂರು ಭಾರತೀಯ ಮಾರುಕಟ್ಟೆಗಳೆಂದರೆ ಮುಂಬೈನ ಹೀರಾ ಪನ್ನಾ (Heera Panna in Mumbai), ಕೋಲ್ಕತ್ತಾದ ಕಿಡ್ಡರ್‌ಪೋರ್ ( Kidderpore in Kolkata) ಮತ್ತು ದೆಹಲಿಯ ಟ್ಯಾಂಕ್ ರೋಡ್ (Tank Road in Delhi) ಮಾರುಕಟ್ಟೆಗಳಾಗಿವೆ. "ನಕಲಿ ಮತ್ತು ದರೋಡೆಕೋರ ಸರಕುಗಳ ಜಾಗತಿಕ ವ್ಯಾಪಾರವು ನಿರ್ಣಾಯಕ ಯುಎಸ್ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅಮೇರಿಕನ್ ಕಾರ್ಮಿಕರಿಗೆ ಹಾನಿ ಮಾಡುತ್ತದೆ" ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ (Katherine Tai) ಹೇಳಿದ್ದಾರೆ. "ಈ ಅಕ್ರಮ ವ್ಯಾಪಾರವು ನಕಲಿ ಸರಕುಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ದುರ್ಬಲತೆಯನ್ನು ತೋರಿಸುತ್ತದೆ ಮತ್ತು ನಕಲಿ ಸರಕುಗಳು ಪ್ರಪಂಚದಾದ್ಯಂತದ ಗ್ರಾಹಕರು ಮತ್ತು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಗಮನಾರ್ಹ ಅಪಾಯಗಳನ್ನು ಉಂಟುಮಾಡಬಹುದು" ಎಂದು ಹೇಳಿದ್ದಾರೆ.

ಇ-ಕಾಮರ್ಸ್ ವೆಬ್‌ಸೈಟ್ ಮತ್ತು ಖರೀದಿದಾರರನ್ನು ಪೂರೈಕೆದಾರರೊಂದಿಗೆ ಸಂಪರ್ಕಿಸುವ ಮೊಬೈಲ್ ಅಪ್ಲಿಕೇಶನ್ ಇಂಡಿಯಾಮಾರ್ಟ್, ತನ್ನನ್ನು ವಿಶ್ವದ ಎರಡನೇ ಅತಿದೊಡ್ಡ ಆನ್‌ಲೈನ್ ಬ್ಯುಸಿನೆಸ್ ಟು ಬ್ಯುಸಿನೆಟ್ ಮಾರುಕಟ್ಟೆ ಎಂದು ಹೇಳುತ್ತದೆ ಎಂದು ಯುಎಸ್ ಟಿಆರ್ (USTR) ವರದಿ ಹೇಳಿದೆ.ಆದರೆ, ಇಂಡಿಯಾ ಮಾರ್ಟ್ ನಲ್ಲಿ ನಕಲಿ ಔಷಧಗಳು, ಎಲೆಕ್ಟ್ರಾನಿಕ್ಸ್ ಮತ್ತು ಉಡುಪುಗಳು ಸೇರಿದಂತೆ ನಕಲಿ ಸರಕುಗಳು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ.

ಮಾರಾಟಗಾರರ ಪರಿಶೀಲನೆ, ನಕಲಿ ಸರಕುಗಳ ತಿಳಿದಿರುವ ಮಾರಾಟಗಾರರ ವಿರುದ್ಧ ದಂಡಗಳು ಅಥವಾ ಉಲ್ಲಂಘಿಸುವ ಸರಕುಗಳ ಪೂರ್ವಭಾವಿ ಮೇಲ್ವಿಚಾರಣೆ ಸೇರಿದಂತೆ ನಕಲಿ-ವಿರೋಧಿ ಉತ್ತಮ ಅಭ್ಯಾಸಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಂಡಿಯಾ ಮಾರ್ಟ್ ವಿಫಲವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Car Crash Test India: 2023 ರಿಂದ ಭಾರತದಲ್ಲಿಯೇ ಕಾರುಗಳ ಸುರಕ್ಷತಾ ಪರೀಕ್ಷೆ ನಡೆಸಲಿದೆ GNCAP
ಮುಂಬೈನ ಹೃದಯಭಾಗದಲ್ಲಿರುವ ಪ್ರಮುಖ ಒಳಾಂಗಣ ಮಾರುಕಟ್ಟೆಯಾಗಿರುವ ಹೀರಾ ಪನ್ನಾವು ನಕಲಿ ಕೈಗಡಿಯಾರಗಳು, ಪಾದರಕ್ಷೆಗಳು, ಪರಿಕರಗಳು ಮತ್ತು ಸೌಂದರ್ಯವರ್ಧಕಗಳನ್ನು ನೀಡುತ್ತದೆ ಎಂದು ಯುಎಸ್ ಟಿಆರ್ ಹೇಳಿದೆ. ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ನಕಲಿ ಸೌಂದರ್ಯವರ್ಧಕಗಳು ಆರೋಗ್ಯ ಮತ್ತು ಸುರಕ್ಷತೆಯ ಅಪಾಯಗಳನ್ನು ಹೊಂದಿವೆ ಎಂದು ಎಚ್ಚರಿಸಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ ಹೀರಾ ಪನ್ನಾದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿಯಾಗಿತ್ತು ಈ ವೇಳೆ ಪ್ರೀಮಿಯಂ ನಕಲಿ ವಾಚ್ ಗಳ ದೊಡ್ಡ ಸಂಗ್ರಹವನ್ನೇ ವಶಪಡಿಸಿಕೊಳ್ಳಲಾಗಿತ್ತು. ಸ್ಥಳೀಯವಾಗಿ "ಫ್ಯಾನ್ಸಿ ಮಾರ್ಕೆಟ್" ಎಂದು ಕರೆಯಲ್ಪಡುವ ಕೋಲ್ಕತದ ಕಿಡ್ಡರ್‌ಪೋರ್ ನಕಲಿ ಉಡುಪುಗಳು ಮತ್ತು ಸೌಂದರ್ಯವರ್ಧಕಗಳನ್ನು ಹೆಚ್ಚಾಗಿ ಸಗಟು ಪ್ರಮಾಣದಲ್ಲಿ ಮಾರಾಟ ಮಾಡುತ್ತದೆ. ನಕಲಿಗಳ ಕಳಪೆ ಗುಣಮಟ್ಟದಿಂದಾಗಿ ತೀವ್ರ ಚರ್ಮದ ಸಮಸ್ಯೆಗಳು, ಕಣ್ಣಿನ ಕಾಯಿಲೆಗಳು ಉಂಟಾಗಿವೆ ಎಂದು ವರದಿ ಹೇಳಿದೆ.

ಪಾಲಿಕಾ ಬಜಾರ್ 2021 ರಲ್ಲಿ ಕುಖ್ಯಾತ ಮಾರುಕಟ್ಟೆ ಪಟ್ಟಿಯಲ್ಲಿ (NML) ಉಳಿದಿದೆ. ದೆಹಲಿಯ ಈ ಅಂಡರ್ ಗ್ರೌಂಡ್ ಮಾರುಕಟ್ಟೆಯು ಮೊಬೈಲ್ ಪರಿಕರಗಳು, ಸೌಂದರ್ಯವರ್ಧಕಗಳು, ಕೈಗಡಿಯಾರಗಳು ಮತ್ತು ಕನ್ನಡಕಗಳಂತಹ ನಕಲಿ ಉತ್ಪನ್ನಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. ಅನೇಕ ಮಾರಾಟಗಾರರ ಪ್ರಕಾರ ಇವರ ಬಹುತೇಕ ಗ್ರಾಹಕರು ವಿದ್ಯಾರ್ಥಿಗಳು. ಮತ್ತು ಅಗ್ಗದ ಬೆಲೆಯಲ್ಲಿ ಟ್ರೆಂಡಿ ಉತ್ಪನ್ನಗಳನ್ನು ಬಯಸುವ ಇತರ ಯುವಕರು ಎಂದು ವರದಿಯಾಗಿದೆ. ಈ ಮಾರುಕಟ್ಟೆಯು ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್‌ ಹಾಡು ಕಚ್ಚಾಬಾದಾಮ್ ಗಾಯಕನಿಗೆ ಮೂರು ಲಕ್ಷ ನೀಡಿದ ಮ್ಯೂಸಿಕ್ ಕಂಪನಿ
ದೆಹಲಿಯ ವೋಲ್ ಸೇಲ್ ಟ್ಯಾಂಕ್ ರೋಡ್ ಮಾರುಕಟ್ಟೆಯು ಉಡುಪುಗಳು, ಪಾದರಕ್ಷೆಗಳು, ಕೈಗಡಿಯಾರಗಳು, ಕೈಚೀಲಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೌಂದರ್ಯ ಉತ್ಪನ್ನಗಳು ಸೇರಿದಂತೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮಾರುಕಟ್ಟೆಯಿಂದ ಗಫಾರ್ ಮಾರುಕಟ್ಟೆ ಮತ್ತು ಅಜ್ಮಲ್ ಖಾನ್ ರಸ್ತೆ ಸೇರಿದಂತೆ ಇತರ ಭಾರತೀಯ ಮಾರುಕಟ್ಟೆಗಳಿಗೆ ಸಗಟು ನಕಲಿ ಸರಕುಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.