Asianet Suvarna News Asianet Suvarna News

65 ಜಿಲ್ಲೆಗಳಲ್ಲಿ ದಿಢೀರ್‌ ಸೋಂಕು ಏರಿಕೆ: ಕೇಂದ್ರದಿಂದ ರಾಜ್ಯಗಳಿಗೆ ಮಹತ್ವದ ಸೂಚನೆ!

ಪರೀಕ್ಷೆ ಹೆಚ್ಚಿಸಿ: 8 ರಾಜ್ಯಗಳಿಗೆ ಕೇಂದ್ರ| 65 ಜಿಲ್ಲೆಗಳಲ್ಲಿ ದಿಢೀರ್‌ ಸೋಂಕು ಏರಿಕೆ| ಸೋಂಕಿನ ಅಬ್ಬರದ ರಾಜ್ಯಗಳ ಸಂಖ್ಯೆ 18ಕ್ಕೆ ಹೆಚ್ಚಳ| ಸಂಪರ್ಕಿತರ ಪತ್ತೆ, ಲಸಿಕೆಗೆ ವೇಗ ನೀಡಲು ಸೂಚನೆ| ಮಹಾರಾಷ್ಟ್ರ, ಪಂಜಾಬ್‌ಗೆ ಕೇಂದ್ರ ತಂಡ

Test Track Treat Centre To 8 States Union Territories On Covid Surge pod
Author
Bangalore, First Published Mar 7, 2021, 7:33 AM IST

ನವದೆಹಲಿ(ಮಾ.07): ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ತಮಿಳುನಾಡು ಸೇರಿದಂತೆ 10 ರಾಜ್ಯಗಳು ಮಾತ್ರವೇ ಅಲ್ಲದೆ ದೇಶದ ಇನ್ನೂ 8 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ 8 ರಾಜ್ಯಗಳ 65 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆ ಹೆಚ್ಚಿಸಿ, ಸಂಪರ್ಕಿತರನ್ನು ಪತ್ತೆ ಮಾಡಿ, ಲಸಿಕೆ ವಿತರಣೆಗೆ ವೇಗ ನೀಡುವಂತೆ ಸೂಚನೆ ನೀಡಿದೆ. ಈ ಕ್ರಮ ಕೊರೋನಾ ನಿಯಂತ್ರಣ ವೇಳೆ ಉತ್ತಮ ಫಲಿತಾಂಶ ನೀಡಿದೆ ಎಂದೂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಕೊರೋನಾ ಹೆಚ್ಚುತ್ತಿರುವ ಇತ್ತೀಚಿನ 10 ರಾಜ್ಯಗಳ ಸಾಲಿಗೆ ಸಾಲಿಗೆ ಹೊಸದಾಗಿ 8 ಸೇರಿಕೊಂಡಿದ್ದು, 18ಕ್ಕೆ ಏರಿದಂತಾಗಿದೆ.

ಮತ್ತೊಂದೆಡೆ ಉಳಿದೆಲ್ಲ ರಾಜ್ಯಗಳಿಗಿಂತ ಮಹಾರಾಷ್ಟ್ರ ಹಾಗೂ ಪಂಜಾಬ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಿಗೆ ಅತ್ಯುನ್ನತ ಸಾರ್ವಜನಿಕ ಆರೋಗ್ಯ ತಂಡಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಕೊರೋನಾ ಸರ್ವೇಕ್ಷಣೆ, ನಿಯಂತ್ರಣ ಹಾಗೂ ನಿಗ್ರಹ ಕ್ರಮಗಳಲ್ಲಿ ಈ ತಂಡಗಳು ರಾಜ್ಯಗಳಿಗೆ ನೆರವಾಗಲಿವೆ. ಮಹಾರಾಷ್ಟ್ರದಲ್ಲಿ ನಿತ್ಯದ ಪ್ರಕರಣಗಳ ಸಂಖ್ಯೆ 10 ಸಾವಿರ ಸಮೀಪಿಸಿದ್ದರೆ, ಪಂಜಾಬ್‌ನಲ್ಲಿ 1000 ದಾಟಿದೆ.

8 ರಾಜ್ಯಗಳಲ್ಲಿ ಸ್ಫೋಟ:

ಹರಾರ‍ಯಣ, ಆಂಧ್ರಪ್ರದೇಶ, ಒಡಿಶಾ, ಗೋವಾ, ಹಿಮಾಚಲಪ್ರದೇಶ, ಉತ್ತರಾಖಂಡ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಚಂಡೀಗಢದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜ್ಯಗಳ 65 ಜಿಲ್ಲೆಗಳಲ್ಲಿ ಕೊರೋನಾ ಪರೀಕ್ಷೆ, ಆರ್‌ಟಿ-ಪಿಸಿಆರ್‌ ಪ್ರಮಾಣ ಕಡಿಮೆಯಾಗಿದೆ. ಆದರೆ ವಾರದ ಪಾಸಿಟಿವಿಟಿ ದರ ಹೆಚ್ಚಳವಾಗಿದೆ. ಕೋವಿಡ್‌ ಸಂಪರ್ಕಿತರ ಪತ್ತೆ ಪ್ರಮಾಣವೂ ಕಡಿಮೆ ಇದೆ. ಇದರಿಂದ ನೆರೆರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಹಬ್ಬುವ ಭೀತಿ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಪ್ರತಿ ಸೋಂಕಿತನ ಜತೆ ಸಂಪರ್ಕ ಹೊಂದಿದ್ದ ಸರಾಸರಿ 20 ಮಂದಿಯನ್ನು ಪತ್ತೆ ಹಚ್ಚಬೇಕು. ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಕೊರೋನಾ ವೈರಸ್‌ ಹರಡುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಬೇಕು. ಲಸಿಕೆ ವಿತರಣೆ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

8 ರಾಜ್ಯಗಳ ಪೈಕಿ ಹೆಚ್ಚು ಸೋಂಕು ಕಂಡುಬರುತ್ತಿರುವ ಜಿಲ್ಲೆಗಳು ಹರಾರ‍ಯಣ (15), ಆಂಧ್ರಪ್ರದೇಶ (10), ಒಡಿಶಾ (10), ದೆಹಲಿ (9), ಹಿಮಾಚಲಪ್ರದೇಶ (9), ಉತ್ತರಾಖಂಡ (7), ಗೋವಾ (2), ಚಂಡೀಗಢ (1)ದಲ್ಲಿವೆ.

ಇತ್ತೀಚಿನ 10 ರಾಜ್ಯಗಳು ಯಾವುವು?:

ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್‌, ಕರ್ನಾಟಕ, ತಮಿಳುನಾಡು, ಜಮ್ಮು-ಕಾಶ್ಮೀರ, ಪಂಜಾಬ್‌, ಪ.ಬಂಗಾಳದಲ್ಲಿ ಕೊರೋನಾ ಏರಿಕೆ ಆಗುತ್ತಿದೆ ಎಂದು ಫೆಬ್ರವರಿ ಕೊನೆಯ ವಾರ ಹೇಳಿದ್ದ ಕೇಂದ್ರ ಇತ್ತೀಚೆಗೆ ಅಲ್ಲಿ ಕೇಂದ್ರ ತಂಡ ಕಳಿಸಲು ನಿರ್ಧರಿಸಿತ್ತು.

Follow Us:
Download App:
  • android
  • ios