ಶ್ರೀನಗರ(ಫೆ.19): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದಾರೆ. ಶೋಫಿಯಾನ್‌ ಎನ್‌ಕೌಂಟರ್ ಬೆನ್ನಲ್ಲೇ ಇದೀಗ ಶ್ರೀನಗರದ ಬಾರಮುಲ್ಲಾ ವಲಯದಲ್ಲಿ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪೊಲೀಸರು ಹುತಾತ್ಮರಾಗಿದ್ದಾರೆ.

ಭಾರತಕ್ಕೆ ನುಸುಳಲು ಉಗ್ರರಿಂದ 150 ಮೀ. ಸುರಂಗ!

ಹೊದಿಕೆ ಹೊದ್ದು ಪಟ್ಟಣದಲ್ಲಿ ನಡೆದುಕೊಂಡ ಬಂದ ಉಗ್ರರು ಗನ್ ತೆಗೆದು ಏಕಾಏಕಿ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ಮಳೆಗೆರೆದ ಉಗ್ರರು ತಕ್ಷಣವೇ ಪರಾರಿಯಾಗಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಉಗ್ರ ಚಟುವಟಿಕೆಗೆ ಹಣಕ್ಕಾಗಿ ಬೆಂಗ್ಳೂರಲ್ಲಿ ಜೆಎಂಬಿ ದರೋಡೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಸರ್ಚ್ ಆರಪರೇಶನ್ ಆರಂಭಿಸಿದೆ. ಭಗತ್ ವಲಯ, ಬಾರಮುಲ್ಲಾ ಸೇರಿದಂತೆ ಕೆಲೆವೆಡೆ ಹೈ ಅಲರ್ಟ್ ಘೋಷಿಸಲಾಗಿದೆ.

ಆಂಗ್ಲ ಭಾಷೆಯಲ್ಲಿ ಶ್ರೀನಗರ ಉಗ್ರರ ದಾಳಿ ಸುದ್ದಿ ಓದಲು ಹಾಗೂ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: