Asianet Suvarna News

75ನೇ ಸ್ವಾತಂತ್ರ್ಯ ದಿನಾಚರಣೆ ಗುರಿಯಾಗಿಸಿ ಉಗ್ರರ ದಾಳಿ ಸಾಧ್ಯತೆ; ದೆಹಲಿಯಲ್ಲಿ ಹೈಅಲರ್ಟ್!

 • 75ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯವಾಗಿಸಲು ಕೇಂದ್ರದಿಂದ ಹಲವು ಕಾರ್ಯಕ್ರಮ
 • ಧ್ವಜಾರೋಹಣ ಕಾರ್ಯಕ್ರಮ ಸೇರಿದಂತೆ ಮೋದಿ ಗುರಿಯಾಗಿಸಿ ದಾಳಿ ಸಾಧ್ಯತೆ ಎಚ್ಚರಿಕೆ
 • ಕೆಂಪು ಕೋಟೆ ಸೇರಿದಂತೆ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ
   
Terrorist target 75th Independence Day on August 15 Security agencies report Delhi put on high alert ckm
Author
Bengaluru, First Published Jul 20, 2021, 3:12 PM IST
 • Facebook
 • Twitter
 • Whatsapp

ನವದೆಹಲಿ(ಜು.20): ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹಲವು ವಿಶೇಷತೆಗಳಿವೆ. ಆಗಸ್ಟ್ 15 ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಿಸಲಿದೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿ ಎಂದಿನಂತೆ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಆದರೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಮೇಲೆ ಉಗ್ರರ ಕರಿನೆರೆಳು ಬಿದ್ದಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಪ್ರದೇಶ-ಬಿಹಾರ ರೈಲು ಸ್ಫೋಟಿಸಲು ಪಾಕಿಸ್ತಾನ ISI ಸಂಚು; ಗುಪ್ತಚರ ಇಲಾಖೆ ಅಲರ್ಟ್!

ಪ್ರಧಾನಿ ಮೋದಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಗುರಿಯಾಗಿಸಿಕೊಂಡು ದೆಹಲಿ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ವಿಭಾಗ ಹೇಳಿದೆ. ಪಾಕಿಸ್ತಾನದ ಮೂಲದ ಉಗ್ರರು ಈ ದಾಳಿ ನಡೆಸುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆ, ಕೇಂದ್ರ ಗೃಹ ಇಲಾಖೆ ಹಾಗೂ  ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ.

ಈ ಮಾಹಿತಿ ಪಡೆದ ದೆಹಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಈಗಾಗಲೇ ದೇಶದಲ್ಲಿನ ಸ್ಲೀಪರ್‌ಸೆಲ್ಸ್ ಭಾರತ ವಿರೋಧಿ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ. ಈ ಕುರಿತು ದೆಹಲಿ ಪೊಲೀಸ್ ಕಮಿಷನ್ ಬಾಲಾಜಿ ಶ್ರೀವಾತ್ಸವ್ ಸಂಪೂರ್ಣ ದೆಹಲಿಗೆ ಭದ್ರತೆ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಇಬ್ಬರು ಅಲ್ ಖೈದಾ ಉಗ್ರರ ಬಂಧನ; ಬಿಜೆಪಿ ನಾಯಕ ಗುರಿಯಾಗಿಸಿ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಚು

ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ಸ್ಥಾನಮಾನ ತೆಗೆದುಹಾಕಿ ಆಗಸ್ಟ್ 6ಕ್ಕೆ 2 ವರ್ಷಗಳು ಪೂರ್ಣಗೊಳ್ಳಲಿದೆ. ಹೀಗಾಗಿ ಈ ಸೇಡು ತೀರಿಸಿಕೊಳ್ಳಲು ಸ್ವಾತಂತ್ರ್ಯ ದಿನಾಚರಣೆ ಗುರಿಯಾಗಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಎಲ್ಲಾ ಬೆಳವಣಿಗೆಯಿಂದ ದೆಹಲಿಯಲ್ಲಿ ಈಗಾಗಲೇ 30,000ಕ್ಕೂ ಹೆಚ್ಚು ಪೊಲೀಸರನ್ನು ಗಸ್ತು ತಿರುಗಲು ನಿಯೋಜಿಸಲಾಗಿದೆ. 

Follow Us:
Download App:
 • android
 • ios