Asianet Suvarna News Asianet Suvarna News

ಉಗ್ರ ದಾವುದ್‌ನ ಮುಂಬೈ ಆಸ್ತಿ ಹರಾಜು, 1 ನಿವೇಶನ 3.28 ಲಕ್ಷ ರೂಗೆ ಮಾರಾಟ, ಇನ್ನೆರಡು ಅನ್‌ಸೋಲ್ಡ್!

ಉಗ್ರ ದಾವುದ್ ಇಬ್ರಾಹಿಂ ಹಾಗೂ ಆತನ ಪಿತ್ರಾರ್ಜಿತ ಆಸ್ತಿಗಳ ಹರಾಜು ಇಂದು ಮುಕ್ತಾಯಗೊಂಡಿದೆ. ದಾವುದ್ ಬಾಲ್ಯದ ಮನೆ, ಕೃಷಿ ಜಮೀನು ಸೇರಿದಂತೆ 4 ಆಸ್ತಿಗಳನ್ನು ಹರಾಜಿಗೆ ಇಡಲಾಗಿತ್ತು. ಈ ಪೈಕಿ ಕೇವಲ 2 ಆಸ್ತಿ ಮಾತ್ರ ಬಿಡ್ಡಿಂಗ್ ಮೂಲಕ ಮಾರಾಟವಾಗಿದೆ. ಈ ಪೈಕಿ ಒಂದು ಆಸ್ತಿ ಕೇವಲ 3.28 ಲಕ್ಷ ರೂಪಾಯಿಗೆ ಮಾರಾಟವಾದರೆ, ಇನ್ನೆರಡು ಮಾರಾಟವಾಗದೇ ಉಳಿದಿದೆ.
 

Terrorist Dawood Ibrahim properties Auction Successful bidders for two remained unsold ckm
Author
First Published Jan 5, 2024, 5:14 PM IST

ಮುಂಬೈ(ಜ.05) ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಇಬ್ರಾಹಿಂ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದರೂ ಭಾರತದ ಜೊತೆ ನಿರಂತರ ಸಂಪರ್ಕದಲ್ಲಿರುವುದು ಸತ್ಯ. ಕಾರಣ ದಾವುದ್ ಕುಟುಂಬಸ್ಥರು, ಆತನ ಆಸ್ತಿ, ವ್ಯವಹಾರಗಳು ಭಾರತದಲ್ಲಿದೆ.ಕೆಲ ಆಸ್ತಿಗಳನ್ನು ಹಲವು ಪ್ರಕರಣಗಳ ಅಡಿಯಲ್ಲಿ ಮುಟ್ಟುಗೋಲು ಮಾಡಲಾಗಿದೆ. ಈ ಪೈಕಿ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗೆ ಇಟ್ಟಿತ್ತು.  ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ದಾವುದ್ ಬಾಲ್ಯದ ಮನೆ, ಕೃಷಿ ಜಮೀನು ಸೇರಿದಂತೆ ನಾಲ್ಕು ಆಸ್ತಿಗಳನ್ನು ಹರಾಜಿಗೆ ಇಡಲಾಗಿತ್ತು. ಈ ಪೈಕಿ ಕೇವಲ 2 ಆಸ್ತಿಗಳು ಹರಾಜಿನಲ್ಲಿ ಮಾರಾಟವಾಗಿದೆ. ಇನ್ನೆರಡು ಯಾರಿಗೂ ಬೇಡವಾಗಿದೆ. ಮಾರಾಟವಾಗಿರುವ ಎರಡು ಆಸ್ತಿಗಳಲ್ಲಿ ಒಂದು ಆಸ್ತಿ ಕೇವಲ 3.28 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ರತ್ನಗಿರಿ ಜಿಲ್ಲೆಯ ಮುಂಬಾಕೆಯಲ್ಲಿರುವ ದಾವುದ್ ಇಬ್ರಾಹಿಂ ಬಾಲ್ಯದ ಮನೆ, ಕೃಷಿ ಜಮೀನುಗಳು ಸೇರಿದಂತೆ ನಾಲ್ಕು ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗೆ ಇಡಲಾಗಿತ್ತು. ನಾಲ್ಕರ ಒಟ್ಟು ಆರಂಭಿಕ ಬೆಲೆ ಕೇವಲ 19 ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. ಈ ಹಿಂದಿನ ಹರಾಜುಗಳಲ್ಲೂ ಕೂಡ ದಾವುದ್ ಇಬ್ರಾಹಿಂ ಆಸ್ತಿ ಖರೀದಿಸಲು ಹೆಚ್ಚಿನವರು ಹಿಂದೇಟು ಹಾಕಿದ್ದರು. ಈ ಬಾರಿಯೂ ಇದೇ ನಿರಾಸಕ್ತಿ ಎದ್ದು ಕಾಣುತ್ತಿತ್ತು. ಕೋಟಿ ಕೋಟಿ ರೂಪಾಯಿ ಮೌಲ್ಯದ ದಾವುದ್ ಇಬ್ರಾಹಿಂ ಆಸ್ತಿಗಳ  ಹರಾಜು ಮೌಲ್ಯವನ್ನು ಕೇವಲ 19 ಲಕ್ಷ ರೂಪಾಯಿಗೆ ಇಳಿಕೆ ಮಾಡಲಾಗಿತ್ತು.

ಉಗ್ರ ದಾವುದ್ ಇಬ್ರಾಹಿಂ ಒಡೆತನದ ಮುಂಬೈನ 4 ಜಮೀನು ಹರಾಜು, ಕೇವಲ 19 ಲಕ್ಷ ರೂಪಾಯಿ!

ನಾಲ್ಕು ಆಸ್ತಿಗಳ ಪೈಕಿ ಒಂದು ಕೃಷಿ ಜಮೀನು ಸೇರಿದಂತೆ ಮನೆ ಬಡ್ಡಿಂಗ್ 2.01 ಕೋಟಿ ರೂಪಾಯಿವರೆಗೆ ತಲುಪಿತು. ಅಂತಿಮವಾಗಿ ಒಂದು ಆಸ್ತಿ 2.01 ಕೋಟಿ ರೂಪಾಯಿಗೆ ಮಾರಾಟವಾಗಿದೆ . ಮತ್ತೊಂದು ಆಸ್ತಿ ಕೇವಲ 3.28 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ದಾವುದ್ ಇಬ್ರಾಹಿಂ ಹಾಗೂ ಆತನ ಪಿತ್ರಾರ್ಜಿತ ಈ ಆಸ್ತಿಗಳನ್ನು 1976ರ ಕಳ್ಳಸಾಗಾಣೆ ಹಾಗೂ ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ ಕಾಯ್ದೆಯ ಅಡಿಯಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

 

 

 2000ನೇ ಇಸವಿಯಿಂದ ದಾವುದ್ ಇಬ್ರಾಹಿಂ ಆಸ್ತಿಗಳನ್ನು ಸರ್ಕಾರ ಹರಾಜು ಮಾಡುತ್ತಿದೆ. 2000ನೇ ಇಸವಿಯಲ್ಲಿ ಮಹಾರಾಷ್ಟ್ರ ಸರ್ಕಾರ ದಾವುದ್ ಕೆಲ ಆಸ್ತಿಗಳನ್ನು ಹರಾಜಿಗೆ ಇಟ್ಟಿತ್ತು. ಈ ವೇಳೆ ಯಾರೂ ಕೂಡ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ. ಈಗಲೂ ದಾವುದ್ ಆಸ್ತಿಗಳನ್ನು ಖರೀದಿಸಲು ಮುಂದೆ ಬಂದವರ ಸಂಖ್ಯೆ ತೀರಾ ವಿರಳ. ಇದಕ್ಕೆ ಕಾರಣ ಉಗ್ರ ದಾವುದ್ ಗ್ಯಾಂಗ್‌ನಿಂದ ಅಪಾಯ ಎದುರಿಸುವ ಸಾಧ್ಯತೆ ಆತಂಕ. 

ಪಾತಕಿ ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ, ಮೋಸ್ಟ್‌ ವಾಂಟೆಡ್‌ ಉಗ್ರ ಸಾವು ಎಂಬ ಗುಸುಗುಸು: ಛೋಟಾ ಶಕೀಲ್‌ ಹೇಳಿದ್ದೇನು?
 

Follow Us:
Download App:
  • android
  • ios